ಮೈಸೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್: ಇಬ್ಬರಿಂದ ಯುವತಿ ಮೇಲೆ ಅತ್ಯಾಚಾರ

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಗ್ಯಾಂಗ್ ರೇಪ್ ನಡೆದಿದೆ. ಪಬ್ ವೊಂದರಲ್ಲಿ ಭೇಟಿಯಾದ ಇಬ್ಬರು ವ್ಯಕ್ತಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವುದಾಗಿ ವರದಿಯಾಗಿದೆ. ಭಾನುವಾರ ಈ ಘಟನೆ ನಡೆದಿದ್ದು, ಸಂತ್ರಸ್ತೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಪಬ್ ವೊಂದರಲ್ಲಿ ಆರೋಪಿಗಳು ಹಾಗೂ ಮಡಿಕೇರಿ ಮೂಲದ ಯುವತಿ ಭೇಟಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಆಕೆಗೆ ಆಮಿಷವೊಡ್ಡುವ ಮೂಲಕ ಪ್ರತ್ಯೇಕ ಸ್ಥಳವೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. 2021 ರ ಆಗಸ್ಟ್ 24 […]

ಬೆಳ್ತಂಗಡಿ: ಅಶ್ಲೀಲ ವೀಡಿಯೊ ಮೂಲಕ ವಿದ್ಯಾರ್ಥಿಯನ್ನು ಹನಿಟ್ರ್ಯಾಪ್ ಮಾಡಲು ಯತ್ನ.

ಬೆಳ್ತಂಗಡಿ: ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸಿದ ಪ್ರಕರಣ ವರದಿಯಾಗಿದ್ದು, ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್‌ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವೀಡಿಯೊ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ. ಬಳಿಕ ವೀಡಿಯೊ ಕರೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯ ಮುಖವನ್ನು ಬಳಸಿ ಅಶ್ಲೀಲ […]

ಮಣಿಪಾಲ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

ಮಣಿಪಾಲ: ಮಹಿಳೆಯೊಬ್ಬರು ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಅನಂತನಗರದಲ್ಲಿ ನಡೆದಿದೆ. ಮಣಿಪಾಲದ ಶ್ರುತಿ ಆತ್ಮಹತ್ಯೆ ಮಾಡಿಕೊಂಡವರು. 5 ವರ್ಷಗಳ ಹಿಂದೆ ಇವರಿಗೆ ಮದುವೆಯಾಗಿದ್ದು, ಅನಂತರ ಅನಂತನಗರದ ಮಂಚಿಕುಮೇರಿಯಲ್ಲಿ ವಾಸಮಾಡಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಗಂಡನ ಕಾಯಿಲೆಗೆ ಸಾಲ ಮಾಡಿಕೊಂಡು ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇರಿಸಿದ್ದರು. ಸಾಲ ಮಾಡಿಕೊಂಡ ಚಿಂತೆ ಹಾಗೂ ಚಿನ್ನವನ್ನು ಬಿಡಿಸಲು ಆಗಲಿಲ್ಲ ಎಂಬ ಚಿಂತೆಯಿಂದ ಮನನೊಂದು ಶ್ರುತಿ ಅವರು ನ.3ರಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ