ಉಡುಪಿ: ಗೃಹಲಕ್ಷ್ಮಿ ಹಣದಲ್ಲಿ ಕವಾಟು ಖರೀದಿಸಿದ ಕೂಲಿ ಕಾರ್ಮಿಕ ಮಹಿಳೆ
ಉಡುಪಿ: ಗೃಹಲಕ್ಷ್ಮಿ ಹಣದಿಂದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಕವಾಟು ಖರೀದಿಸಿದಿಸಿದ್ದಾರೆ. ಉಡುಪಿಯ ಪರ್ಕಳ ದಲ್ಲಿ ಮಹಿಳೆ ತಾನು ಹೊಸದಾಗಿ ಖರೀದಿಸಿದ ಕವಾಟಿನ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಪರ್ಕಳದ ಕ್ಯಾಂಟೀನ್ ವೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈಕೆ ಕೆಲಸ ಮಾಡುತ್ತಾರೆ. ಹಾವೇರಿ ಮೂಲದ ಕೆಲಸದಾಳು ಕುಸುಮ ಮಾಡಿವಾಲ್ತಿ ಕವಾಟು ಖರೀದಿಸಿದ ಗ್ರಹಲಕ್ಷ್ಮಿ. ಈಕೆಯ ರೇಶನ್ ಕಾರ್ಡು ನಲ್ಲಿ ಅಲ್ಪ ಸ್ವಲ್ಪ ದೋಷವಿತ್ತು. ರೇಶನ್ ಕಾರ್ಡು ತಿದ್ದುಪಡಿ ಮಾಡಿ, ನಂತರ ಗೃಹಲಕ್ಷ್ಮಿಗೆ ಅರ್ಜಿ ಹಾಕಲು ಹೋಟೆಲ್ ಮಾಲೀಕರು ನೆರವಾಗಿದ್ದರು. ಕೊನೆಗೆ ಬಂದ […]
ಉಡುಪಿ: ಭಯದ ವಾತಾವರಣ ಸೃಷ್ಟಿಸಿದ ಯುವಕನ ಸೆರೆ
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಯುವಕನೋರ್ವನನ್ನು ಸೆರೆ ಹಿಡಿದ ಘಟನೆ ಉಡುಪಿಯ ಅಜ್ಜರಕಾಡು ಬಳಿ ನಡೆದಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಾಯವಾಣಿ ಪೋಲಿಸರ ಸಹಕಾರದಿಂದ ಯುವಕನನ್ನು ವಶಕ್ಕೆ ಪಡೆದು ದೊಡ್ಡಣಗುಡ್ಡೆಯ ಡಾ ಎ ವಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ದಿನಗಳಿಂದ ಯುವಕ ಉಡುಪಿ ನಗರದಲ್ಲಿ ರಂಪಾಟ ನಡೆಸಿದ್ದನು. ರಕ್ಷಿಸಲ್ಪಟ್ಟ ಯುವಕ ಬೇಲೂರು ತಾಲೂಕಿನ ಚನ್ನಕೇಶವ ನಗರದ ಹೇಮಂತ್ ಎಂದು ತಿಳಿದುಬಂದಿದೆ. ವಾರಸುದಾರರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ […]
ಉಡುಪಿ: ರೋಗಿಯನ್ನು ಕರೆದೊಯ್ಯಲು ಪರದಾಡಿದ ಕುಟುಂಬಕ್ಕೆ ಆಸರೆಯಾದ ವಿಶು ಶೆಟ್ಟಿ ಅಂಬಲಪಾಡಿ
ಉಡುಪಿ: ಜಿಲ್ಲಾಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಂಡು ಮನೆಗೆ ರೋಗಿಯನ್ನು ಕರೆದೊಯ್ಯಲು ಅಂಬುಲೆನ್ಸ್ ಗೂ ಹಣವಿಲ್ಲದೆ ಪರದಾಡಿದ ಘಟನೆ ನಡೆದಿದೆ. ಆಂಬುಲೆನ್ಸ್ ನ ಅಗತ್ಯಕ್ಕೆ ರೋಗಿಯ ಸಂಬಂಧಿಕರು ಕಷ್ಟಪಡುವಂತಾಗಿತ್ತು. ಈ ವಿಷಯ ತಿಳಿದು ಸ್ಪಂದಿಸಿದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಆಂಬುಲೆನ್ಸ್ ನ ವೆಚ್ಚ ಭರಿಸಿ ಸ್ಪಂದಿಸಿದರು. ರೋಗಿ ಪೀನ (70) ಅಮಾವಾಸ್ಯೆ ಬೈಲು ಮೂಲದವರಾಗಿದ್ದು, ರೋಗಿಯು ಎದ್ದೇಳುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ನನ್ನ ಮಾವ ಅವಿವಾಹಿತರಗಿದ್ದು ದಲಿತ ಸಮುದಾಯದವರಾದ ನಮ್ಮಲ್ಲಿ ಆಂಬುಲೆನ್ಸ್ ಬಾಡಿಗೆ ನೀಡಲು ಚಿಕ್ಕಾಸು ಕೂಡಾ ಇಲ್ಲ. […]
ಉಡುಪಿ: ಗಮನ ಸೆಳೆದ ಕೃಷಿ ಪರಿಕರಗಳಿಂದ ಅಲಂಕಾರಗೊಂಡ ಆಟೋ; ಆಟೋ ಚಾಲಕನಿಂದ ಕೃಷಿ ಜಾಗೃತಿ
ಉಡುಪಿ: ಕಾಪು ತಾಲೂಕಿನ ಕಟಪಾಡಿಯಲ್ಲಿ ಕೃಷಿ ಉತ್ಪನ್ನಗಳಿಂದ ಅಲಂಕಾರಗೊಂಡ ಆಟೋ ರಿಕ್ಷಾವೊಂದು ಎಲ್ಲರ ಗಮನ ಸೆಳೆಯುತ್ತಿದೆ.ಸಾರ್ವಜನಿಕರಲ್ಲಿ ಕೃಷಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಟಪಾಡಿಯ ರಿಕ್ಷಾ ಚಾಲಕ ಜಯಕರ ಕುಂದರ್ ಅವರು ತಮ್ಮ ರಿಕ್ಷಾವನ್ನು ಕೃಷಿ ಪರಿಕರಗಳಿಂದ ಶೃಂಗಾರಿಸಿದ್ದಾರೆ. ಜಯಕರ ಅವರ ಆಟೋ ಇದೀಗ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ. ಕಳೆದ 10 ವರ್ಷಗಳಿಂದ ತಾವು ದುಡಿಯುವ ರಿಕ್ಷಾವನ್ನು ವಿಶೇಷ ಆಕರ್ಷಣೀಯ ಅಲಂಕಾರದ ಮೂಲಕ ಸದಾ ಜನಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬರುತ್ತಿರುವ ಸಂಗಮ ಕಲಾವಿದ ತಂಡದ ಸದಸ್ಯ ಜಯಕರ ಕುಂದರ್ […]
ಉಡುಪಿ:“ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ”
ಉಡುಪಿ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಪೈ ಸ್ಮಾರಕದಲ್ಲಿ ನಡೆದ “ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನದ” ಕುರಿತ ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ, ಕತ್ತಿನ […]