ಕಾರ್ಕಳ: ವ್ಯಕ್ತಿ ನಾಪತ್ತೆ
ಕಾರ್ಕಳ, ಅಕ್ಟೋಬರ್ 31: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ದೇವಿಪ್ರಸಾದ್ ಎಂಬಲ್ಲಿನ ನಿವಾಸಿ ರತ್ನಾಕರ ಆಚಾರ್ಯ (52) ಎಂಬ ವ್ಯಕ್ತಿಯು ಅಕ್ಟೋಬರ್ 22 ರಂದು ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ.5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ನಗರ ಠಾಣೆ ದೂ.ಸಂಖ್ಯೆ: 08258-230213, 233100, 9480805461 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ […]
ಉಡುಪಿ ತ್ರಿಶಾ ಕ್ಲಾಸಸ್ : ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣ
ಉಡುಪಿ:ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಸಪ್ಟೆಂಬರ್ 2024ರಲ್ಲಿ ನಡೆಸಿದ ಸಿಎ ಇಂಟರ್ಮಿಡಿಯೇಟ್ ಪರೀಕ್ಷೆಯಲ್ಲಿ ಕಾಪು ತಾಲೂಕಿನ ರಕ್ಷಿತಾ ಭಟ್ ಅವರು 341 ಅಂಕಗಳೊಂದಿಗೆ ಎರಡೂ ಗ್ರೂಪ್ ಗಳಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸೂರ್ಯಕಾಂತ್ ಭಟ್ ಹಾಗೂ ಸಹನಾ ಭಟ್ ದಂಪತಿಗಳ ಪುತ್ರಿಯಾಗಿದ್ದು, ತಮ್ಮ ಸಿಎ ಫೌಂಡೇಶನ್ ಮತ್ತು ಸಿಎ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಕಟಪಾಡಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.
ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಅಂಬಲಪಾಡಿ “LED POINT”ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಉತ್ಪನ್ನಗಳ ಮಾರಾಟ.
ಉಡುಪಿ: ಅಂಬಲಪಾಡಿ, ಸರವರ ಕಟ್ಟಡ, ಕಪ್ಪೆಟ್ಟು ರಸ್ತೆಯಲ್ಲಿ ಇರುವ ಅಲಂಕಾರಿಕ ದೀಪಗಳು ಮತ್ತು ನೇತಾಡುವ ದೀಪಗಳ ಅಧಿಕೃತ ಡೀಲರ್ ಆಗಿರುವ ಎಲ್ಇಡಿ ಪಾಯಿಂಟ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ರಿಯಾಯಿತಿ ದರದಲ್ಲಿ ಉತ್ಪನ್ನಗಳು ಸಿಗಲಿದೆ. ಲೈಟಿಂಗ್ಸ್, ಜೂಮರ್ ಶೋ ಲೈಟ್’ಗಳು, ಫ್ಯಾನ್ಸ್, ಗೀಸರ್, ವಾಟರ್ ಪ್ಯೂರಿಫೈಯರ್ ಹಾಗೂ ಫ್ಯಾನ್ಸಿ ಲೈಟ್ಸ್ ಸಿಗಲಿದ್ದು, ಪ್ರತಿಷ್ಠಿತ ಕಂಪನಿಯ ಬ್ರಾಂಡ್ಗಳ ಉತ್ಪನ್ನಗಳು ಲಭ್ಯಿ ಇವೆ. ಗ್ರಾಹಕರಿಗೆ ನೇರವಾಗಿ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ಮಾರಾಟವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್ ಸಿ. ಹೆಗಡೆ […]
ಉಡುಪಿ:ತ್ರಿಶಾ ಸಂಸ್ಥೆಯ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ
ಉಡುಪಿ:ಸಪ್ಟೆಂಬರ್ ತಿಂಗಳಲ್ಲಿ ನಡೆದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸಿಕೊಂಡಿದ್ದಾರೆ. ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ( ಡೇ & ಸಂಧ್ಯಾ ಕಾಲೇಜು) :ನಿಶಾಂತ್ ದಿವಾಕರ್262), ದಕ್ಷಾ ಜೆ ಶೆಟ್ಟಿ247), ರಿತೇಶ್ ಜೆ ಅಮೀನ್(239), ಮನೋಜ್ ಆರ್ ಕುಂದಾಪುರ235), ಶ್ರೀಶಾ ರಾವ್228), ನಾಗೇಂದ್ರ ಆರ್ ಭಟ್(226), ಪಲ್ಲವಿ ಎಂ(226), ಸೃಜನಿ ಜೆ ಶೆಟ್ಟಿ(221), ಸುಮಂತ್ ಶೆಟ್ಟಿ220), ಐಶ್ವರ್ಯಾ(219), ತೆಂಡೂಲ್ಕರ್ ಕೃಪಾ ನಿಧೀಶ್(218), ತ್ರಿಷಾ ಎಸ್ ಶೆಟ್ಟಿ(217), ಶರಧಿ ಟಿ ಎಸ್(216), […]
ಮಂಗಳೂರು: ಡಾ. ತುಂಬೆ ಮೊಯ್ದಿನ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
ಬೆಂಗಳೂರು: ಯು ಎ ಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಮಂಗಳೂರಿನ ಡಾ. ತುಂಬೆ ಮೊಯ್ದಿನ್ ಅವರಿಗೆ 2024ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಹೊರನಾಡು – ಹೊರದೇಶ ವಿಭಾಗದಲ್ಲಿ ಡಾ ತುಂಬೆ ಮೊಯ್ದಿನ್ ಅವರ ಸೇವೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನ.1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಡಾ.ತುಂಬೆ ಮೊಯ್ದಿನ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.