ಉಡುಪಿ “ಭಾರತ್ ಮಾರ್ಕೆಟಿಂಗ್” ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟದಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿದ ಸಂಸ್ಥೆ.
ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರುವ ಗುಣಮಟ್ಟದ ಅತ್ಯಾಧುನಿಕ ಬೃಹತ್ ಸಂಗ್ರಹದ ವಿದ್ಯುತ್ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿಎಂ ಬ್ರ್ಯಾಂಡ್ ಶೋರೂಂ ‘ಭಾರತ್ ಮಾರ್ಕೆಟಿಂಗ್’ ಬ್ರ್ಯಾಂಡೆಡ್ ಎಲೆಕ್ಟ್ರಿಕಲ್ ಸರಕುಗಳ ಮಾರಾಟದ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ನೂತನ ಮನೆ, ಸಭಾಂಗಣ, ಮಾಲ್, ಮಳಿಗೆ, ಸಮುಚ್ಚಯ ನಿರ್ಮಾಣದಲ್ಲಿ ಬಳಸುವ ಜಿಎಂ, ಹ್ಯಾವೆಲ್, ಫಿನೊಲೆಕ್ಸ್, ವಿ-ಗಾರ್ಡ್, ಲಿಗ್ರೆಂಡ್, ಆರ್‌ಆರ್, ಲ್ಯೂಕರ್, ಹಿಲ್ಸ್ ಕ್ಯಾಬ್, ಪ್ಯಾಸೋಲೈಟ್, ಸ್ಟ್ಯಾಂಡರ್ಡ್ ಕಂಪೆನಿಗಳ ಕೇಬಲ್ಸ್, ವಯರ್, ಎಲ್ಇಡಿ ಫಿಟ್ಟಿಂಗ್ಸ್, ಹವೆಲ್ಸ್ ಕಂಪೆನಿಯ ಇಲೆಕ್ಟ್ರಿಕಲ್ ಸಾಮಗ್ರಿಗಳಾದ […]
ನ.4ರಿಂದ 10ರವರೆಗೆ ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ದತ್ತಮಾಲಾ ಅಭಿಯಾನ; ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಭಾಗಿ
ಉಡುಪಿ: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ದತ್ತ ಪೀಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದತ್ತಮಾಲಾ ಅಭಿಯಾನ ನ.4 ರಿಂದ 10 ರವರೆಗೆ ನಡೆಯಲಿದ್ದು, ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸುದರ್ಶನ ಪೂಜಾರಿ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 50,000ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ನ. 4ರಂದು ದತ್ತಮಾಲಾಧಾರಣೆಯೊಂದಿಗೆ ದತ್ತ ದಿಪೋತ್ಸವ, ಪಡಿಸಂಗ್ರಹ (ಭೀಕ್ಷಾಟನೆ), 10 ರಂದು ಚಿಕ್ಕಮಗಳೂರು ನಗರದಲ್ಲಿ ಧರ್ಮಸಭೆ, ಶೋಭಯಾತ್ರೆ, […]
ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಬಿ.ಕೆ. ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಖಂಡನೆ
ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಉಡುಪಿ ಜಿಲ್ಲಾ ಸಮಸ್ತ ವಿಪ್ರ ಭಾಂದವರು ಖಂಡನೆ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮಾತನಾಡಿ, ಪೇಜಾವರ ಶ್ರೀಗಳ ಬಗ್ಗೆ ಮಾತನಾಡಲು ಹರಿಪ್ರಸಾದ್ ಗೆ ಎಳ್ಳಷ್ಟು ಯೋಗ್ಯತೆ ಇಲ್ಲ. ಪೇಜಾವರ ಶ್ರೀಗಳು ವಿದ್ವತ್ತು, ಧರ್ಮ ನಿಷ್ಠೆ, ಸಮಾಜದ ಬಗ್ಗೆ ಇರುವ ಕಳಕಳಿ ಹೊಂದಿದ ಸ್ವಾಮೀಜಿ. ಅವರು ಯಾವತ್ತೂ […]
ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ
ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಅ.31ರಂದು ದೀಪಾವಳಿ ಆಚರಣೆ ನಡೆಯಲಿದೆ. ನ.1ರ ಶುಕ್ರವಾರ ಅಮಾವಾಸ್ಯೆ ಸಂಜೆ ಸುಮಾರು 6 ಗಂಟೆವರಗೆ ಮಾತ್ರ ಇರುವುದರಿಂದ ಅ. 31ರಂದು ದೀಪಾವಳಿ ಆಚರಣೆ ಮಾಡಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ. ಅ. 29ರಂದು ಯಮದೀಪ, ಅ. 30ರ ಬುಧವಾರ ನೀರು ತುಂಬಿಸುವುದು (ಹಿರಿಯರ ಹಬ್ಬ) ಹಾಗೂ ಅ. 31ರ ಗುರುವಾರ “ನರಕ ಚತುರ್ದಶಿ” ಚಂದ್ರೋದಯ ಕಾಲ ಬೆಳಿಗ್ಗೆ 5-15ಕ್ಕೆ ಎಣ್ಣಿ ಹಚ್ಚಿ ಸ್ನಾನ ಮಾಡುವ ಆಚರಣೆ ಜರುಗಲಿದ್ದು, ಅಂದು ಸಂಜೆ […]
ಪಡುಬಿದ್ರಿ: ಶಾಲಾ ಆವರಣದೊಳಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ವಿದ್ಯಾರ್ಥಿಗೆ ಗಂಭೀರ ಗಾಯ
ಉಡುಪಿ: ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ಅದಮಾರು ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಸಂಭವಿಸಿದೆ. ಗಾಯಗೊಂಡ ಬಾಲಕನನ್ನು ಎರ್ಮಾಳು ಬರ್ಪಾಣಿ ಸಂತೋಷ್ ಶೆಟ್ಟಿ ಅವರ ಪುತ್ರ ಭವಿನ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಅದೇ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಭವಿನ್ ಸಂಜೆ ಶಾಲೆ ಬಿಟ್ಟ ನಂತರ ಮನೆಗೆ ಹೋಗಲು ಶಾಲಾ ಆವರಣದಲ್ಲಿ ತಂದೆಗಾಗಿ ಕಾಯುತ್ತಿದ್ದನು. ಈ ವೇಳೆ ಶಾಲಾ ಆವರಣದೊಳಗೆ ಬಂದ ಆಟೊ ರಿಕ್ಷಾವೊಂದು […]