ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆ
ಉಡುಪಿ, ಅ.27: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶುಭದ ರಾವ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಿನಾಥ್ ಭಟ್ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶವನ್ನು ನೀಡಿದ್ದಾರೆ. ಕಾರ್ಕಳ ಬ್ಲಾಕ್ ಅಧ್ಯಕ್ಷರಾಗಿದ್ದ ಸದಾಶಿವ ದೇವಾಡಿಗ ಹಾಗೂ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿ ಚಂದ್ರಶೇಖರ್ ಬಾಯರಿ ಅವರ ಅಧ್ಯಕ್ಷ ಅವಧಿಯು ಪೂರ್ಣ ಗೊಂಡ ಹಿನ್ನಲೆಯಲ್ಲಿ ಈ ಸಮಿತಿಗಳಿಗೆ ನೂತನ ಅಧ್ಯಕ್ಷರ ಆಯ್ಕೆ […]
ಉಡುಪಿ:ಬಂಟಕಲ್ ಕಾಲೇಜಿನೊಂದಿಗೆ, ಸೆಕ್ಷನ್ ಇನ್‌ಫಿನ್ 8,ಮಂಗಳೂರು ಇವರ ಒಡಂಬಡಿಕೆ
ಉಡುಪಿ:ನಾವಿನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೆಕ್ಷನ್ ಇನ್‌ಫಿನ್ 8, ಮಂಗಳೂರು ಇದರೊಂದಿಗೆ ದಿನಾಂಕ 24 ಅಕ್ಟೋಬರ್ 2024 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು. ಶ್ರೀ ವಿಶ್ವಾಸ್, ಸಂಸ್ಥಾಪಕ – ನಿರ್ದೇಶಕರು ಡಾ. ಶಿವಕಿರಣ್ ಮಖಂ,ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕರು, ಶ್ರಿ ಅರವಿಂದ್ ಸಿ ಕುಮಾರ್, ಸೆಕ್ಷನ್ ಇನ್‌ಫಿನ್ 8, ಮಂಗಳೂರು ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಜಗದೀಶ್ ಆಚಾರ್ಯ, ಶ್ರೀ ಹರೀಶ್ […]
ಕೇಂದ್ರ ಸರ್ಕಾರದಿಂದ ಅನ್ನದಾತರಿಗೆ ದೀಪಾವಳಿ ಗಿಫ್ಟ್: ಭತ್ತದ ಬೆಂಬಲ ಬೆಲೆ ಹೆಚ್ಚಳ..!
ನವದೆಹಲಿ: ಕೇಂದ್ರ ಸರ್ಕಾರ ಅನ್ನದಾತರಿಗೆ ದೀಪಾವಳಿ ಹಬ್ಬಕ್ಕೆ ಬೆಂಬಲ ಬೆಲೆಯ ಗಿಫ್ಟ್ ನೀಡಿದೆ. ಭತ್ತದ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಭತ್ತ ಬೆಳೆಗಾರರ ಬದುಕಿಗೆ ಬೆಳಕು ಬೀರಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2013-14 ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ರೂ.1,310 ಇದ್ದು, ಈಗ ಅದನ್ನು 2,300 ರೂಪಾಯಿಗೆ ಹೆಚ್ಚಿಸಲಾಗಿದೆ. ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ […]
ಕುಂದಾಪುರ: ವರದಕ್ಷಿಣೆ ಕಿರುಕುಳ – ಪ್ರಕರಣ ದಾಖಲು.
ಕುಂದಾಪುರ: ಮಹಿಳೆಯೊಬ್ಬರು ಪತಿ ಹಾಗೂ ಇತರರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿರುವ ಘಟನೆ ಕುಂದಾಪುರದ ತಾಲೂಕಿನ ಕಾವ್ರಾಡಿ ಗ್ರಾಮದಲ್ಲಿ ನಡೆದಿದೆ. ಕಾವ್ರಾಡಿ ಗ್ರಾಮದ ಗುಲ್ನಾಝ್ ಬೇಗಂ (30) ಅವರು ಆರೋಪಿ ಶೇಖ್ ಮೊಹಮ್ಮದ್ ಯಾಕೂಬ್ ಅವರನ್ನು ವಿವಾಹವಾಗಿದ್ದು, ನಜ್ಮಿನ್ನೀಸಾ, ಶೇಖ್ ಶಂಸುದ್ದೀನ್ ಅವರು ಮದುವೆ ಸಂಬಂಧವಾಗಿ 100 ಪವನ್ ಚಿನ್ನಾಭರಣಗಳು ಮತ್ತು ಕಾರನ್ನು ವರದಕ್ಷಿಣೆಯಾಗಿ ಕೇಳಿದ್ದರು. ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕಿದ್ದರು. ಬಳಿಕ 70 ಪವನ್ ಚಿನ್ನ ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಮುಂದಿನ ದಿನಗಳಲ್ಲೂ ಆಸ್ತಿ, […]
ಮಣಿಪಾಲ: ತುಳು ನಾಟಕ ಕಲಾವಿದರ ಕಾರು ಅಪಘಾತ; ಅಪಾಯದಿಂದ ಪಾರು.
ಮಣಿಪಾಲ: ತುಳು ನಾಟಕ ಕಲಾವಿದರ ಕಾರೊಂದು ಮಣಿಪಾಲ ಈಶ್ವರ ನಗರದ ನಗರಸಭೆಯ ಪಂಪ್‌ಹೌಸ್ ಬಳಿ ಅ.27ರಂದು ಸಂಜೆ ವೇಳೆ ಅಪಘಾತಕ್ಕೀಡಾಗಿದ್ದು, ಯಾವುದೇ ಗಾಯಗಳಾಗದೇ ಎಲ್ಲರೂ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಉಡುಪಿಯ ಹೀರೆಬೆಟ್ಟುವಿನಲ್ಲಿ ಇಂದು ಸಂಜೆ ಪ್ರದರ್ಶನಗೊಳ್ಳಲಿದ್ದ ‘ಏರ್ಲಾ ಗ್ಯಾರಂಟಿ ಅತ್ತು’ ನಾಟಕ ಪ್ರದರ್ಶನಕ್ಕಾಗಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ನಾಟಕ ತಂಡದ ಸದಸ್ಯರು ಕಾರಿನಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ತುಳು ನಾಟಕದ ಕಲಾವಿದ ಭೋಜರಾಜ ವಾಮಂಜೂರ್ ಕೂಡ ಇದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು […]