ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗಾವಕಾಶ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ.ಟಿಎಂಎ ಪೈ ಫೌಂಡೇಶನ್‌’ನ ಘಟಕ) ದಲ್ಲಿ CNC ಯಂತ್ರ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಐಟಿ ಕೌಶಲ್ಯ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳ: ಮಣಿಪಾಲ, ಉಡುಪಿ ಸಂಬಳ: ಸ್ಪರ್ಧಾತ್ಮಕ ಪ್ಯಾಕೇಜ್, ಅನುಭವದ ಆಧಾರದ ಮೇಲೆ ನೀಡಲಾಗುವುದು. ◼️ ಹುದ್ದೆ: CNC ಯಂತ್ರ ಕಾರ್ಯಾಚರಣೆ ಮತ್ತು ನಿರ್ವಹಣೆ. ಶೈಕ್ಷಣಿಕ ಅರ್ಹತೆ: ಡಿಪ್ಲೊಮಾ/ಬಿ ಇ/ ಬಿಟೆಕ್ (ಮೆಕ್ಯಾನಿಕಲ್) ಜೊತೆಗೆ ಅಥವಾ ಸಂಬಂಧಿತ ಅನುಭವವಿಲ್ಲದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: [email protected]/8123163934 ◼️ ಹುದ್ದೆ: ಐಟಿ […]

ದುಗ್ಲಿಪದವು: ವೇಷ ಧರಿಸಿ ಸಂಗ್ರಹಿಸಿದ ಮೊತ್ತವನ್ನು ಬಾಲಕನ ಚಿಕಿತ್ಸೆಗೆ ವಿತರಣೆ

ಉಡುಪಿ: ಟೀಂ ಯುವ ಟೈಗರ್ಸ್ ಮತ್ತು ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇವರ ಪರೋಪಕಾರಾಯ ಪುಣ್ಯಾಯ ಎಂಬ ಕಾರ್ಯಕ್ರಮದಡಿಯಲ್ಲಿ ಅಷ್ಟಮಿ ಹಾಗೂ ನವರಾತ್ರಿ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ಮೊತ್ತದ ವಿತರಣಾ ಸಮಾರಂಭ ದುಗ್ಲಿಪದವು ಸಮುದಾಯ ಭವನದಲ್ಲಿ ನಡೆಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕ ಹರ್ಪಿತ್ ಚಿಕಿತ್ಸೆಗಾಗಿ ಹಾಗೂ ಇತರ ಮೂವರಿಗೆ ಸಂಗ್ರಹಿಸಿದ 2.42ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಉಚಿತ ರಕ್ತದಾನ ಹಾಗೂ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ನಗರಸಭಾ ಸದಸ್ಯರಾದ […]

ಉಡುಪಿ:ರೈತರುಗಳು ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು, ಪಡೆದು ಸಮರ್ಪಕವಾಗಿ ಅಳವಡಿಸಿಕೊಳ್ಳಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಕೃಷಿ ಕ್ಷೇತ್ರಕ್ಕೆ ಪ್ರಾಧ್ಯಾನ್ಯತೆ ನೀಡುವುದರೊಂದಿಗೆ, ಕೃಷಿ ವಲಯಕ್ಕೆ ಸಂಬಂಧಿಸಿದಮಾಹಿತಿಯನ್ನು ಸಮರ್ಪಕವಾಗಿ ರೈತರುಗಳಿಗೆ ತಲುಪಿಸಿ, ಅವರುಗಳ ಜೀವನಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸುವ ದೃಷ್ಠಿಯಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ರೈತರುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕಮಾಹಿತಿಗಳನ್ನು ಪಡೆದು ತಮ್ಮ ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಶನಿವಾರ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, […]

ಉಡುಪಿ:ಈ ಹಬ್ಬದ ಸೀಸನ್‌ನಲ್ಲಿ ತನಿಷ್ಕ್‌ ನಿಂದ ನಿಮಗೆ ಅತ್ಯುತ್ತಮ ಕೊಡುಗೆಗಳು

ಉಡುಪಿ: ಟಾಟಾ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಆಭರಣ ಬ್ರ‍್ಯಾಂಡ್ ತನಿಷ್ಕ್ ಹಬ್ಬದ ಋತುವನ್ನು ಸಂತೋಷ ಮತ್ತು ಉಲ್ಲಾಸದಿಂದ ಆಚರಿಸಲು ಅತ್ಯಾಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ಹಬ್ಬಗಳ ಸುತ್ತಲಿನ ಸಕಾರಾತ್ಮಕ ಭಾವನೆಯೊಂದಿಗೆ, ಗ್ರಾಹಕರು ತಮ್ಮ ಹಳೆಯ ಚಿನ್ನದ ಮೌಲ್ಯವನ್ನು ಹೆಚ್ಚಿಸುವ ಮಾರ್ಗಗಳನ್ನು ಹೆಚ್ಚು ಹುಡುಕುತ್ತಿದ್ದಾರೆ. ಫೆಸ್ಟಿವಲ್ ಆಫ್ ಎಕ್ಸ್ಚೇಂಜ್‌ನ ಭಾಗವಾಗಿ, ಗ್ರಾಹಕರು ಯಾವುದೇ ಆಭರಣ ವ್ಯಾಪಾರಿಗಳಿಂದ ಖರೀದಿಸಿದ ತಮ್ಮ ಹಳೆಯ ಚಿನ್ನವನ್ನು ಶೇಕಡ 100 ಮೌಲ್ಯದಲ್ಲಿ ವಿನಿಮಯ ಮಾಡಿಕೊಳ್ಳಬಹುದು ಮತ್ತು ಹೆಚ್ಚುವರಿಯಾಗಿ ಏನನ್ನೂ ಪಾವತಿಸದೆ ಹೊಸ […]

ಉಡುಪಿ:ಎಂ.ಸಿ.ಸಿ. ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದೀಪಗಳ ಜೊತೆ ಸಮೂಹ ಭಾವಚಿತ್ರ ಸ್ವರ್ಧೆ

ಬ್ರಹ್ಮಾವರ:112 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕ್ ತನ್ನ ವ್ಯಾಪ್ತಿಯನ್ನು ಕರ್ನಾಟಕ ರಾಜ್ಯಕ್ಕೆ ರಾಜ್ಯಾದ್ಯಂತ ವ್ಯಾಪಿಸಿದ್ದು, ಇದೇವರ್ಷದ ಮಾರ್ಚ್ ತಿಂಗಳಲ್ಲಿ ತನ್ನ 17ನೇ ಹೊಸ ಶಾಖೆಯನ್ನು ಬ್ರಹ್ಮಾವರದಲ್ಲಿ ಪ್ರಾರಂಭಿಸಿದೆ. ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಕರಾವಳಿ ಭಾಗದ ಕುಂದಾಪುರ, ಬ್ರಹ್ಮಾವರ, ಉಡುಪಿ ಶಾಖೆಗಳ ವತಿಯಿಂದ ಸಾರ್ವಜನಿಕರಿಗೆ ದೀಪಗಳ ಜೊತೆ ಸಮೂಹ ಭಾವಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯ ಪೋಸ್ಟರ್ ಅನಾವರಣ ಕಾರ್ಯಕ್ರಮವು ದಿನಾಂಕ 24/10/2024 ರಂದು ಎಂ.ಸಿ.ಸಿ. ಬ್ಯಾಂಕಿನ ಬ್ರಹ್ಮಾವರ ಶಾಖೆಯಲ್ಲಿ ಜರಗಿತು. ಬ್ರಹ್ಮಾವರ ಪರಿಸರದ ಖ್ಯಾತ […]