ಮಂಗಳೂರು: ಸೈಟ್ ತೋರಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಬಿಲ್ಡರ್ ವಿರುದ್ಧ ಪ್ರಕರಣ ದಾಖಲು.

ಮಂಗಳೂರು, ಅ.26: ಸೈಟ್ ತೋರಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ನಗರದ ಬಿಲ್ಡರ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣದ ಆಮಿಷ ತೋರಿಸಿ ಮಾನಭಂಗ:ತಾನು ಕೊಡಗು ಜಿಲ್ಲೆಯ ಮಡಿಕೇರಿಯವಳಾಗಿದ್ದು, ಮಂಗಳೂರು ಮತ್ತು ದುಬೈಯಲ್ಲಿ ವ್ಯವಹಾರ ಮಾಡಿಕೊಂಡಿರುವೆ. ಸದ್ಯ ಮಂಗಳೂರಿನಲ್ಲಿ ವಾಸವಾಗಿರುವ ನನಗೆ ಬಿಲ್ಡರ್ ಆಗಿರುವ ಆರೋಪಿ ರಶೀದ್‌ನ ಪರಿಚಯವಿತ್ತು. ಆತನಿಗೆ ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದೆ. ಅದನ್ನು ಖರೀದಿ ಮಾಡಬಹುದು ಎಂದಾಗ ನಾನು ಒಪ್ಪಿಕೊಂಡು ಅ.21ರಂದು ಕಾರಿನಲ್ಲಿ ಕುಶಾಲನಗರಕ್ಕೆ ಆತನೊಂದಿಗೆ ಹೋಗಿದ್ದೆ. […]
SVM ಉತ್ಪನ್ನಗಳ ವಿತರಕರಾಗಲು ನಿಮಗಿದೆ ಅವಕಾಶ

ಬೆಂಗಳೂರು:ಗುಣಮಟ್ಟ ಮತ್ತು ಶುದ್ಧತೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ನಮ್ಮೊಂದಿಗೆ ಕೈ ಜೋಡಿಸಿ, ಜೊತೆಯಾಗಿ ಬೆಳೆಯೋಣ.ಮೊದಲು ಬಂದವರಿಗೆ ಮೊದಲ ಅದ್ಯತೆಯ ಮೇರೆಗೆ ಅವಕಾಶ. ಆಸಕ್ತಿಯುಳ್ಳ ಡಿಸ್ಟ್ರಿಬ್ಯುಟರ್ ಗಳು ತಮ್ಮ ವಿವರಗಳೊಂದಿಗೆ ಸಂಪರ್ಕಿಸಿ.8792974717 / 9148152701ಜೀನಿಯಸ್ ಫುಡ್ ಆ್ಯಂಡ್ ಸ್ಪೈಸಸ್ ಬೆಂಗಳೂರು
ಮಂಗಳೂರು: ಯುವತಿಯ ಅತ್ಯಾಚಾರ ಪ್ರಕರಣ; ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ.

ಮಂಗಳೂರು: ಯುವತಿಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು 10 ವರ್ಷಗಳ ಕಠಿನ ಕಾರಾಗೃಹ ವಾಸದ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಶಿಕ್ಷೆಗೊಳಗಾದವ ಪುತ್ತೂರು ತಾಲೂಕು ಕುಟ್ರಾಪ್ಪಾಡಿ ಗ್ರಾಮದ ಜಗನ್ನಾಥ್ ಕೆ. ಮೊಗೇರ (38). ಈತ ಯುವತಿಯನ್ನು ಅತ್ಯಾಚಾರವೆಸಗಿದ ಬಗ್ಗೆ 2016ರ ಫೆ. 25ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿವರ:ಮನೆಯಲ್ಲಿ ಯುವತಿ ಮಾತ್ರ ಇದ್ದಾಗ ನೀರು ಕೇಳುವ […]
ಮಂಗಳೂರು:ಅ. 27 ರಂದು ಚೌರಾಸಿಯಾ ಮತ್ತು ಚಟರ್ಜಿ ಸಮಾಗಮ

ಮಂಗಳೂರು:ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಅ. 27ರಂದು ಭಾನುವಾರ ಸಂಜೆ 5.30 ರಿಂದ “ಸ್ವರಗಳ ಸಂಜೆ – ಶಾಸ್ತ್ರೀಯ ಸಂಗೀತದ ಸಂಜೆ’ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ದೇಶ ವಿದೇಶಗಳ ಪ್ರಖ್ಯಾತ ವೇದಿಕೆಗಳಲ್ಲಿ ಯಶಸ್ವಿ ಕಾರ್ಯಕ್ರಮ ನೀಡಿರುವ ದೇಶದ ಹೆಮ್ಮೆಯ ಕಲಾವಿದರಾದ ಪಂ|| ರಾಕೇಶ್ ಚೌರಾಸಿಯಾ ಮತ್ತು ನಾಡು ಕಂಡ ಶ್ರೇಷ್ಠ ಸಿತರ್ ವಾದಕ ಪಂ|| ಪೂರ್ಬಯಾನ್ ಚಟರ್ಜಿ ಅವರ ಸೀತಾರ್ ವಾದನ ಕೇಳುವ ಅವಕಾಶ ಮಂಗಳೂರಿಗೆ ದೊರೆತಿದೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ […]
ಕಾರ್ಕಳ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ: ಆರೋಪಿ ಪತ್ನಿ, ಪ್ರಿಯಕರನ ಬಂಧನ

ಕಾರ್ಕಳ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಪತ್ನಿ ವಿಷವುಣಿಸಿ ಕೊಂದ ಘಟನೆ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದವರನ್ನು ಅಜೆಕಾರು ನಿವಾಸಿ ಸಂಜೀವ ಪೂಜಾರಿ ಎಂಬವ ಮಗ ಬಾಲಕೃಷ್ಣ ಪೂಜಾರಿ (44) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮೃತರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ರೀಲ್ಸ್ ಮೂಲಕ […]