ಮಣಿಪಾಲ: Dee-Tee (ಭವಾನಿ) ಹಾಗೂ 7th Heaven (Ecstays) ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಪರವಾನಿಗೆ ರದ್ದು

ಉಡುಪಿ: ಪದೇ ಪದೇ ಅಪರಾಧ ಪ್ರಕರಣಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಉಡುಪಿ ನಗರಸಭೆ ವ್ಯಾಪ್ತಿಯ ಮಣಿಪಾಲದ ಈಶ್ವರ ನಗರದಲ್ಲಿರುವ ಕಟ್ಟಡ ಸಂಖ್ಯೆ 4-94E4 ರಲ್ಲಿ ನಡೆಸುತ್ತಿರುವ Dee-Tee (ಭವಾನಿ) ಲಾಡ್ಜಿಂಗ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ಮಣಿಪಾಲ-ಪೆರಂಪಳ್ಳಿ ರಸ್ತೆಯ ಕಟ್ಟಡ ಸಂಖ್ಯೆ 2-7E, E1, E2, E3, E4, E5ರಲ್ಲಿ ಶಾಂಭವಿ ಅಸೋಸಿಯೇಟ್ಸ್ ನ 7th Heaven (Ecstays) ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಉದ್ದಿಮೆ ಪರವಾನಿಗೆಯನ್ನು ನಗರಸಭೆ ರದ್ದುಪಡಿಸಿದೆ. Dee-Tee(ಭವಾನಿ) ಹಾಗೂ 7th Heaven […]

ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಸಂಭ್ರಮ

ಉಡುಪಿ: ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವರ್ಷದ ಸಂಭ್ರಮ ಕಾರ್ಯಕ್ರಮ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಇಂದು ನಡೆಯಿತು. ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಸರಕಾರವು ಪ್ರಸ್ತುತ ಅಂಗವಿಕಲರಿಗೆ ನೀಡುತ್ತಿರುವ 1400 ರೂ. ಪಿಂಚಣಿ ಯಾವುದಕ್ಕೂ ಸಾಲುವುದಿಲ್ಲ. ಈ ಮೊತ್ತದಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಿಕೊಳ್ಳಲು ಅಸಾಧ್ಯ. ಈ ವಿಶೇಷ ಮಕ್ಕಳು ಜನಸಾಮಾನ್ಯರಂತೆ ಬದುಕಲು‌ ಆಗಲ್ಲ. ಇಂತಹ ಮಕ್ಕಳಿಗೆ ಸರಕಾರಿ ಕೆಲಸದಲ್ಲೂ ಸರಿಯಾದ […]

ಕಟಪಾಡಿ – ಶಿರ್ವ ರಸ್ತೆ ದುರಸ್ತಿಗೆ 13 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆ; ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಮಳೆ ಮತ್ತು ಪ್ರಾಕೃತಿಕ ವಿಕೋಪದಿಂದಾಗಿ ತೀವ್ರ ಹಾನಿಗೀಡಾಗಿರುವ ಕಟಪಾಡಿ – ಶಿರ್ವ ರಾಜ್ಯ ಹೆದ್ದಾರಿಯ ಮರು ನಿರ್ಮಾಣಕ್ಕಾಗಿ 13 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. ಕೇಂದ್ರ ಸರಕಾರಕ್ಕೆ ಸಿಆರ್ ಎಫ್ ನಿಧಿಯ 6 ಕೋಟಿ ರೂಪಾಯಿ ಮತ್ತು ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಗೆ 7 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆ‌ ಸಲ್ಲಿಸಲಾಗಿದೆ. ಮಳೆಯ ಕಾರಣಕ್ಕೆ ತೀರಾ ಹದಗೆಟ್ಟು ಹೋಗಿದ್ದ ರಸ್ತೆಯನ್ನು ನಾಲ್ಕೈದು ಬಾರಿ ರಿಪೇರಿ […]

ಮಂಗಳೂರು: ಅಶ್ಲೀಲ ಸಂದೇಶ, ಮಾನಸಿಕ ಕಿರುಕುಳಕ್ಕೆ ಬೆದರಿ ಯುವತಿ ಆತ್ಮಹತ್ಯೆಗೆ ಯತ್ನ ಪ್ರಕರಣ; ಆರೋಪಿಯ ಬಂಧನ.

ಮಂಗಳೂರು: ಯುವತಿಯ ಎಫ್‌ಬಿ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಹಾಗೂ ಬೆದರಿಕೆ ಸಂದೇಶ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕೃತ್ಯಕ್ಕೆ ಮನನೊಂದ ಯುವತಿಯು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಇಡ್ಯಾ ಗ್ರಾಮದ ನಿವಾಸಿ ಶಾರೀಕ್ ಬಂಧಿತ ಆರೋಪಿ. ಯುವತಿ ಆತ್ಮಹತ್ಯೆ ಯತ್ನ:ಮಂಗಳೂರು ಮಧ್ಯ ಗ್ರಾಮದ ನಿವಾಸಿಯಾದ ಸಂತ್ರಸ್ತೆಯ ಫೇಸ್ಬುಕ್ ಖಾತೆಯನ್ನು ಈತ ಹ್ಯಾಕ್ ಮಾಡಿ, ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ಸಂದೇಶಗಳನ್ನು ಆಕೆಯ ಅಣ್ಣ ಹಾಗೂ […]

ಉಡುಪಿ: ಕಾಲೇಜ್ ವಿದ್ಯಾರ್ಥಿನಿ ನಾಪತ್ತೆ.

ಉಡುಪಿ: ಕಟಪಾಡಿ ಮೂಡಬೆಟ್ಟು ಗ್ರಾಮದ ಅಚ್ಚಡ ಎಂಬಲ್ಲಿ ಮನೆಯಲ್ಲಿ ರಾತ್ರಿ ಊಟ ಮಾಡುತ್ತಿದ್ದ ಯುವತಿ ದಿಢೀರ್‌ ನಾಪತ್ತೆಯಾದ ಘಟನೆ ಅ.24ರಂದು ರಾತ್ರಿ ನಡೆದಿದೆ. ಉಡುಪಿ ಕಾಲೇಜೊಂದರ ಬಿಕಾಂ ಪದವಿ ವ್ಯಾಸಂಗ ನಡೆಸುತ್ತಿರುವ ಅಚ್ಚಡ ನಿವಾಸಿ ಶಶಿಕಲಾ (19) ನಾಪತ್ತೆಯಾಗಿರುವ ಯುವತಿ. ಗುರುವಾರ ರಾತ್ರಿ ತಾಯಿಯೊಂದಿಗೆ ಊಟ ಮಾಡುತ್ತಿದ್ದ ಆಕೆ ಊಟ ಮಾಡುತ್ತಿದ್ದಾಗಲೇ ಹೊರಗೆ ಬಂದಿದ್ದು, ಅಲ್ಲಿಂದಲೇ ದಿಢೀರ್‌ ನಾಪತ್ತೆಯಾಗಿದ್ದಾಳೆ. ತಾಯಿ ಮನೆ ಪಕ್ಕದಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಬಳಿಕ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. […]