ಉಡುಪಿ ಜಿಲ್ಲೆಯ ಗೃಹ ರಕ್ಷಕ ದಳದ ಗೌರವ ಸಮಾದೇಷ್ಟರಾಗಿ ಡಾ.ರೋಶನ್ ಶೆಟ್ಟಿ ನೇಮಕ
ಉಡುಪಿ: ತೆಂಕನಿಡಿಯೂರು ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರೋಶನ್ ಶೆಟ್ಟಿ ಅವರನ್ನು ಜಿಲ್ಲೆಯ ಗೃಹ ರಕ್ಷಕ ದಳ ಗೌರವ ಸಮಾದೇಷ್ಟರನ್ನಾಗಿ ರಾಜ್ಯ ಸರಕಾರ ನೇಮಿಸಿದೆ. ಇವರು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಉಡುಪಿ: ಗಣೇಶಪ್ರಸಾದ್ ಕೊಡಿಬೆಟ್ಟು ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ.
ಉಡುಪಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಕೊಡಮಾಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕರ ಪ್ರಶಸ್ತಿಯನ್ನು ಗಣೇಶಪ್ರಸಾದ್ ಕೊಡಿಬೆಟ್ಟು ಅವರು ಪಡೆದಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಸುರೇಶ್ ಗೊಲ್ಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಜ್ಞಾನಭಾರತಿ ಆವರಣದ ಪ್ರೊ. ವೆಂಕಟಗಿರಿ ಗೌಡ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ […]
ಉಡುಪಿ: ಕಳವಾಗಿದ್ದ 30ಕ್ಕೂ ಅಧಿಕ ಮೊಬೈಲ್ ಫೋನ್ ಪತ್ತೆ; ವಾರಸುದಾರರಿಗೆ ಹಸ್ತಾಂತರ
ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಸುಮಾರು 30ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಠಾಣೆಯ ಮುಂಭಾಗದಲ್ಲಿ ಗುರುವಾರ ನಡೆಯಿತು. ಮೊಬೈಲ್ ಹಸ್ತಾಂತರಿಸಿ ಮಾತನಾಡಿದ ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ. ಅವರು, ಮೊಬೈಲ್ ಕಳವಾದರೆ ಅದನ್ನು ಪತ್ತೆೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ. ಮೊಬೈಲ್ ಕಳೆದುಕೊಂಡವರು ಕೆ.ಎಸ್.ಪಿ. ಆ್ಯಪ್‌ನಲ್ಲಿ ಇ-ಲಾಸ್ ಅಪ್ಲಿಕೇಶನ್ ಒಳಗೆ ಕಳವಾದ ಮೊಬೈಲ್‌ನ ಐಎಂಇಐ ನಂಬರ್ ಹಾಕಬೇಕು. ಬಳಿಕ ಸಿಇಐಆರ್ ಪೋರ್ಟಲ್‌ನಲ್ಲಿ ನಂಬರ್ ಅಪ್‌ಲೋಡ್ ಮಾಡಲಾಗುತ್ತದೆ. ಬಳಿಕ ಆ ನಂಬರ್ […]
ಸಹಕಾರ ಭಾರತಿ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ಆಯ್ಕೆ
ಉಡುಪಿ: ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಹಕಾರಿ ಸಂಘಟನೆಯಾದ ಸಹಕಾರ ಭಾರತಿಯ ಉಡುಪಿ ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗ್ಡೆ ಆತ್ರಾಡಿ ರವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಹಂಸ ಚೈತನ್ಯ ಸೊಸೈಟಿಯ ಅಧ್ಯಕ್ಷರಾದ ಸುದೀಶ್ ನಾಯಕ್, ಸಂಘಟನಾ ಕಾರ್ಯದರ್ಶಿಯಾಗಿ ಸುಜಿತ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ದಿನಪಾಲ್ ಶೆಟ್ಟಿ, ಹರೀಶ್ ಕಲ್ಯ, ಅಶೋಕ್ ಪ್ರಭು ಬ್ರಹ್ಮಾವರ, ಭೋಜ ಪೂಜಾರಿ ಹೆಬ್ರಿ,ಆಶಾ ಹೆಗ್ಡೆ ಬ್ರಹ್ಮಾವರ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಪ್ರಸಾದ್ ಶೆಟ್ಟಿ ಕುತ್ಯಾರು ಮಹಿಳಾ ಪ್ರಮುಖರಾಗಿ ವಿಜೇತಾ ಪೈ ಅಜೆಕಾರು, ಸಹ ಪ್ರಮುಖರಾಗಿ ಸ್ಮಿತಾ […]
ಅ.26ರಂದು ನಡೂರು ದಿ. ಶಿವರಾಮ ಶೆಟ್ಟಿ ಅವರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭ
ಉಡುಪಿ: ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ ರಜತಾದ್ರಿ-ನಡೂರು ಹಾಗೂ ನಡೂರು ದಿ. ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಸಪ್ತ ಸಂಸ್ಥೆಗಳ ಸಂಸ್ಥಾಪಕ ನಡೂರು ದಿ. ಶಿವರಾಮ ಶೆಟ್ಟಿ ಅವರ ಪುತ್ಥಳಿ ಅನಾವರಣ, ನೂತನ ಶಾಲಾ ವಾಹನ ಹಸ್ತಾಂತರ, ಉಡುಪಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನ ಮತ್ತು ಕಲಿಕೋತ್ಸವ, ನಮ್ಮ ಹಿರಿಯರ ಕರಾವಳಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವು ಇದೇ ಅ. 26ರಂದು ನಡೂರು ಶ್ರೀವಾಣಿ ಪ್ರೌಢಶಾಲಾ […]