ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್: ಯೋಗಾಸನ ಸ್ಪರ್ಧೆಯಲ್ಲಿ ಸಾನಿಧ್ಯಗೆ ತೃತೀಯ ಸ್ಥಾನ

ಕಿರಿಮಂಜೇಶ್ವರ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿನಿ ಸಾನಿಧ್ಯ ಎಸ್ ಮೊಗವೀರ (6ನೇ ತರಗತಿ) ತೃತೀಯ ಸ್ಥಾನ ಗಳಿಸಿ ಉಡುಪಿ ಜಿಲ್ಲೆಗೆ ಹಾಗೆಯೇ ಜನತಾ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾಳೆ. ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

2024ರ ಟೋಕಿಯೋ ಸಾಕ್ಷ್ಯಚಿತ್ರೋತ್ಸವಕ್ಕೆ ಮಣಿಪಾಲ ಮಾಹೆಯ ಹುಲಿವೇಷದ ಕುರಿತ ಸಾಕ್ಷ್ಯಚಿತ್ರ ಆಯ್ಕೆ

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನಿರ್ಮಿಸಿದ ತುಳುನಾಡಿನ ಸಾಕ್ಷ್ಯಚಿತ್ರ ಪಿಲಿವೇಷ (ಹುಲಿವೇಷ) 2024ರ ಟೋಕಿಯೊ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ (TDFF)ಕ್ಕೆ ಅಧಿಕೃತವಾಗಿ ಆಯ್ಕೆಗೊಂಡಿದೆ. ಈ ಚಲನಚಿತ್ರವನ್ನು ದೃಶ್ಯ ಮಾನವಶಾಸ್ತ್ರ ಮತ್ತು ಎಥ್ನೋಗ್ರಾಫಿಕ್ ಫಿಲ್ಮ್ ವರ್ಗದಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಲಾಗಿದೆ. ಪ್ರಪಂಚದಾದ್ಯಂತದ 800 ಕ್ಕೂ ಹೆಚ್ಚು ಆಯ್ಕೆಗಳಲ್ಲಿ, ಭಾರತದಿಂದ ಆಯ್ಕೆಯಾದ ಎರಡು ಚಲನಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಇದು ಮಾಹೆ ಮತ್ತು ಅದು ಪ್ರತಿನಿಧಿಸುವ ಪ್ರದೇಶಕ್ಕೆ ಗಮನಾರ್ಹ ಸಾಧನೆಯಾಗಿದೆ. ಸಾಕ್ಷ್ಯಚಿತ್ರವನ್ನು ಡಿಸೆಂಬರ್ 5, 2024 ರಂದು […]

ಸತ್ಯನಾಥ ಸ್ಟೋರ್ ನಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬದ ಕೊಡುಗೆ.

ಉಡುಪಿ: ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪ ಮತ್ತು ಕೊಕ್ಕರ್ಣೆಯಲ್ಲಿ ವಸ್ತ್ರ ವೈವಿಧ್ಯಗಳ ಮಾರಾಟ ಮತ್ತು ಸೇವೆಗೆ ಹೆಸರುವಾಸಿಯಾದ, 75 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ ಸತ್ಯನಾಥ ಸ್ಟೋರ್ಸ್ನಲ್ಲಿ ದೀಪಾವಳಿ ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 31ರ ವರೆಗೆ ಅದೃಷ್ಟಶಾಲಿ ಗ್ರಾಹಕರಿಗೆ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ. ಪ್ರತಿ 500 ರೂ. ಖರೀದಿಗೆ ಕೂಪನ್. ಅದೃಷ್ಟಶಾಲಿ ವಿಜೇತರಿಗೆ ಪ್ರಥಮ ದ್ವಿಚಕ್ರವಾಹನ, ದ್ವೀತಿಯ ಐಫೋನ್, ತೃತೀಯ ಲ್ಯಾಪ್ ಟಾಪ್ ಹಾಗೂ 75 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತಿದೆ. ವೈವಿಧ್ಯಮಯ ವಸ್ತ್ರಗಳ ಅಪಾರ ಸಂಗ್ರಹ […]

ಅಂಬಲಪಾಡಿ: ಬೈಕ್-ಲಾರಿ ಮಧ್ಯೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ

ಉಡುಪಿ: ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಅಂಬಲಪಾಡಿ ರಾಷ್ಟೀಯ ಹೆದ್ದಾರಿ 66ರಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ಪಡುಬಿದ್ರೆ ನಿವಾಸಿಗಳಾದ ನಿಕಿಲ್ ಹಾಗೂ ಸಂದೀಪ್‌ ಎಂದು ಗುರುತಿಸಲಾಗಿದೆ. ಸವಾರ ನಿಕಿಲ್ ಗಂಭೀರವಾಗಿ ಗಾಯಗೊಂಡಿದ್ದು, ಸಹ ಸವಾರ ಸಂದೀಪ್ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಮಾಜ ಸೇವಕ ವಿಶು ಶೆಟ್ಟಿ ಅವರು, ತನ್ನ ಜೀಪಿನಲ್ಲಿ ಗಾಯಾಳುಗಳನ್ನು ಕರೆದೊಯ್ದು ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.