ಕುಂದಾಪುರ: ಕಟ್ಟಡದಿಂದ ಕೆಳಗೆ ಬಿದ್ದು ಕಾರ್ಮಿಕ ಮೃತ್ಯು.
ಕುಂದಾಪುರ: ಕುಂದಾಪುರ ತಾಲೂಕು ಜಪ್ತಿ ಗ್ರಾಮದಲ್ಲಿ ಫ್ಯಾಕ್ಟರಿಯ ಕಟ್ಟಡದಿಂದ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಅ.21ರಂದು ರಾತ್ರಿ ನಡೆದಿದೆ. ಮೃತರನ್ನು ಜಾರ್ಖಾಂಡ್ ರಾಜ್ಯದ ಲೋಹರ್ದಗಾ ಜಿಲ್ಲೆಯ ಜೋಗಿಂದರ್ ಒರೋನ್(30) ಎಂದು ಗುರುತಿಸಲಾಗಿದೆ. ಭಾರತ್ ಹ್ಯೂಮ್ ಪೈಪ್ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಮದ್ಯಪಾನ ಮಾಡಿ, ಪ್ಯಾಕ್ಟರಿ ಕಟ್ಟಡದ ಸ್ಲಾಬ್‌ನ ಮೇಲೆ ಮೊಬೈಲ್‌ನಲ್ಲಿ ಮಾತನಾಡುತಿದ್ದರು. ಈ ವೇಳೆ ಅವರು ಸುಮಾರು 15 ಅಡಿ ಎತ್ತರದಿಂದ ಕೆಳಗಡೆ ಸಿಮೆಂಟ್ ನೆಲದ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ […]
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೋಸ್ಕೋಪಿಕ್ ಚಿಕಿತ್ಸೆ.
ಮಣಿಪಾಲ, ಅ.23: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು, ಅನ್ನನಾಳದ ರಂಧ್ರಕ್ಕೆ ಎಡೊಸ್ಕೋಪಿಕ್ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಇದು ದಕ್ಷಿಣ ಭಾರತದ ವೈದ್ಯಕೀಯ ಅಭ್ಯಾಸದಲ್ಲಿ ಒಂದು ಮೈಲಿಗಲ್ಲು. ಇತ್ತೀಚೆಗೆ, ವಯಸ್ಸಾದ ರೋಗಿಯೊಬ್ಬರು ಅನ್ನನಾಳದ ರಂಧ್ರದ ಗಂಭೀರ ಸ್ಥಿತಿಯೊಂದಿಗೆ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ದಾಖಲಿಸಲಾಗಿದ್ದರು. ಅನ್ನನಾಳದ ರಂಧ್ರವು ಬಲ-ಬದಿಯ ಹೈಡ್ರೋಪ್ನ್ಯೂಮೊಥೊರಾಕ್ಸ್‌ಗೆ ಕಾರಣವಾಗುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ, ಎಡೊಸ್ಕೋಪಿಯ ಆರಂಭಿಕ ಚಿತ್ರಣವು ರೋಗನಿರ್ಣಯವನ್ನು ದೃಢಪಡಿಸಿತು, ಅನ್ನನಾಳದ ರಂಧ್ರದಿಂದ ಉಂಟಾಗುವ ಬಲ-ಬದಿಯ ಹೈಡ್ರೋಪ್ನ್ಯೂಮೊಥೊರಾಕ್ಸ್ನ ವ್ಯಾಪ್ತಿಯನ್ನು ಬಹಿರಂಗಪಡಿಸಿತು. ಗ್ಯಾಸ್ಟ್ರೋ ಎಂಟೆರೊಲೊಜಿ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿರನ್ […]
ಉಡುಪಿ: ಐಎಂಎ ಉಡುಪಿ ಕರಾವಳಿ ಪದಗ್ರಹಣ
ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿಯ ಪದಗ್ರಹಣ ಸಮಾರಂಭವು ಭಾನುವಾರದಂದು ಉಡುಪಿಯ ಅಮೃತ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಖ್ಯಾತ ಮೂಳೆ ತಜ್ಞ ಡಾ. ಭಾಸ್ಕಾರಾನಂದ ಕುಮಾರ್ ಭಾಗವಹಿಸಿ ಪದಗ್ರಹಣ ನಡೆಸಿಕೊಟ್ಟರು. ಪ್ರಸಿದ್ಧ ನರರೋಗ ನಿವಾರಣ ತಜ್ಞ ಡಾಕ್ಟರ್ ಜಸ್ ಪ್ರೀತ್ ಸಿಂಗ್ ದಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನೂತನ ಅಧ್ಯಕ್ಷ ಡಾ. ಕೆ ಸುರೇಶ್ ಶೆಣೈ ಯವರಿಗೆ ನಿರ್ಗಮನ ಅಧ್ಯಕ್ಷೆ ಡಾ ರಾಜಲಕ್ಷ್ಮೀ ಅಧಿಕಾರ ಹಸ್ತಾಂತರಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಡಾ.ಅರ್ಚನಾ ಭಕ್ತ […]