ಉಡುಪಿ:ತ್ರಿಶಾ ಕ್ಲಾಸಸ್ ನಲ್ಲಿ 27 ದಿನಗಳ ಸಿ ಎ ಫೌಂಡೇಶನ್ ರಿವಿಷನ್ ತರಗತಿಗಳು ಆರಂಭ

ಉಡುಪಿ:ಸಿಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 26 ವರ್ಷಗಳಿಂದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಈ ಬಾರಿ ಜನವರಿ ತಿಂಗಳಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು ನವೆಂಬರ್ 4 ರಿಂದ ಆರಂಭಗೊಳ್ಳಲಿದೆ. ಅನುಭವಿ ಪ್ರಾಧ್ಯಾಪಕ ವೃಂದ , ನಾಲ್ಕೂ ವಿಷಯಗಳ ಸಂಪೂರ್ಣ ಅಧ್ಯಯನ, ಐಸಿಎಐ ಮಾದರಿಯ ಪೂರ್ವ ಸಿದ್ಧತಾ ಪರೀಕ್ಷೆಗಳು, ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಲಹೆ ಸೂಚನೆಗಳು ಇತ್ಯಾದಿಗಳು ತರಗತಿಯ ವೈಶಿಷ್ಟ್ಯಗಳಾಗಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು […]

ಕುಂದಾಪುರ :ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ಅದ್ಭುತ ಸಾಧನೆಗೈದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರತಿಭೆ ಸಿನಾನ್.

 ಕುಂದಾಪುರ : ಅಕ್ಟೋಬರ್  17 ರಿಂದ 19 ರ ತನಕ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ 35ನೇ ದಕ್ಷಿಣ ವಲಯ ಕಿರಿಯರ  ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಎತ್ತರ ಜಿಗಿತದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನಾನ್ ಬೆಳ್ಳಿ ಪದಕ ಪಡೆದು ಅಪೂರ್ವ ಸಾಧನೆಗೆ ಸಾಕ್ಷಿಯಾಗಿದ್ದಾನೆ.  ವಿದ್ಯಾರ್ಥಿಗೆ  ಆಡಳಿತ ಮಂಡಳಿ,  ಪ್ರಾಂಶುಪಾಲರು  ಹಾಗೂ  ಬೋಧಕ – ಬೋಧಕೇತರ ಸಿಬ್ಬಂದಿ  ಅಭಿನಂದಿಸಿದ್ದಾರೆ.

ಉಡುಪಿ: ಪ್ರತ್ಯೇಕ ಪ್ರಕರಣ – ಇಬ್ಬರೂ ಮಹಿಳೆಯರ ಆತ್ಮಹತ್ಯೆ

ಕುಂದಾಪುರ: ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅ.12ರಂದು ಮಧ್ಯಾಹ್ನ ಮನೆಯಲ್ಲಿ ಇಲಿ ಪಾಷಣ ತಿಂದು ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥರಾಗಿದ್ದ ಸಿದ್ದಾಪುರ ಗ್ರಾಮದ ಹರ್ಕೆಬಾಳು ನಿವಾಸಿ ಸಾದಮ್ಮ (62) ಎಂಬವರು ಅ.21ರಂದು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಅ.21ರಂದು ಬೆಳಗ್ಗೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ:ಬ್ರಹ್ಮಾವರ: ಯಡ್ತಾಡಿ ಗ್ರಾಮದ ಹರ್ಷ ಎಂಬವರ ಎಂಬವರ ಪತ್ನಿ ಶಾಲಿನಿ(34) ಎಂಬವರು ಅ.19ರಂದು ತನ್ನ ಪತಿಗೆ ಮೊಬೈಲ್ ಸಂದೇಶ ಕಳುಹಿಸಿ […]

ಕುಂದಾಪುರ: ಮೂಡ್ಲಕಟ್ಟೆ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ.

ಕುಂದಾಪುರ: ಮಾಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ ಆಡಳಿತ ಅಧಿಕಾರಿ ಏ ವಿ ಬಾಳಿಗ ಮೆಮೋರಿಯಲ್ ಹಾಸ್ಪಿಟಲ್ ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್.ಪ್ರೋಗ್ರಾಮ್ ಕೋಒರ್ ಡಿನೇಟರ್ ಕುಮಾರಿ ವೆಲ್ ಮೀರಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾ ಶ್ರೀಮತಿ ಸೌಜನ್ಯ […]

ಪರಶುರಾಮನ ಪ್ರತಿಮೆ ವಿವಾದ: ಆರೋಪಿ ಕೃಷ್ಣ ನಾಯ್ಕ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಆರೋಪಿ ಕೃಷ್ಣ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿದೆ. ತಮ್ಮ ವಿರುದ್ಧ ಉಡುಪಿ ಜಿಲ್ಲೆಯ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು ಹಾಗೂ ಎಫ್ಐಆರ್ ರದ್ದು ಕೋರಿ ಶಿಲ್ಪಿ ಕೃಷ್ಣ ನಾಯ್ಕ್ ಅರ್ಜಿಯನ್ನು ವಿಚಾರಣೆ ನಡೆಸಿದ ಕಾಯ್ದಿರಿಸಿದ್ದ ತೀರ್ಪು ಪ್ರಕಟಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ. ಮೇಲ್ನೋಟಕ್ಕೆ ಅಕ್ರಮ […]