ಕುಂದಾಪುರ: ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಾಡಿನಿಂದ ಬಿದ್ದು ಉತ್ತರ ಪ್ರದೇಶದ ಕಾರ್ಮಿಕ ಮೃತ್ಯು.

ಕುಂದಾಪುರ: ಅ.19: ವ್ಯಕ್ತಿಯೊಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಶೀಟ್ ಮಾಡಿನಿಂದ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ ರಾಧಿಕಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಜಪ್ರುದ್ದಿನ್ ಎಂದು ಗುರುತಿಸಲಾಗಿದೆ. ಇವರು ಫ್ಯಾಕ್ಟರಿಯಲ್ಲಿ ಹಳೆಯ ಶೀಟ್ ಮಾಡಿನ ವೆಲ್ಡಿಂಗ್ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಅ.17ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದಾರೆ. ಈ ಬಗ್ಗೆ […]
ಹೆಮ್ಮಾಡಿ ಜನತಾ ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.

ಕುಂದಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಬೆಂಗಳೂರು,ದೇವರಾಜ್ ಅರಸ್ ಪದವಿಪೂರ್ವ ಕಾಲೇಜು ಆರ್.ಎಲ್.ಜಾಲಪ್ಪ ಕ್ಯಾಂಪಸ್ ಕೊಡಿಗೇಹಳ್ಳಿ ದೊಡ್ಡಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಯೋಗಾಸನ ತಂಡವನ್ನುಪ್ರತಿನಿಧಿಸಿದ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ನಿರೀಕ್ಷಾ ಮತ್ತು ತನ್ವಿತಾ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗೆಆಯ್ಕೆಗೊಂಡಿರುತ್ತಾರೆ. ಸಾಧಕ ವಿದ್ಯಾರ್ಥಿಗಳಿಗೆ […]
ಬ್ರಹ್ಮಾವರ: ಕುಂಜಾಲ್ ಜಂಕ್ಷನ್ ಬಳಿ 10 ಸೆಂಟ್ಸ್ ನ 6 ಸೈಟುಗಳು ಲಭ್ಯ

ಉಡುಪಿ: ಬ್ರಹ್ಮಾವರ ಜಂಕ್ಷನ್ ನಿಂದ ಮೂರು ಕಿ.ಮೀ. ದೂರಿದಲ್ಲಿರುವ ಕುಂಜಾಲ್ ಜಂಕ್ಷನ್ ಬಳಿ 10 ಸೆಂಟ್ಸ್ ನ 6 ಪರಿವರ್ತಿತ ಸೈಟುಗಳು ಲಭ್ಯವಿದೆ. ಸೈಟುಗಳು ಲಿಟಲ್ ರಾಕ್ ಸ್ಕೂಲ್ ಮತ್ತು ಕುಂಜಾಲ್ ಜಂಕ್ಷನ್‌ಗೆ ಹತ್ತಿರವಿದ್ದು, ಬ್ರಹ್ಮಾವರ ಜಂಕ್ಷನ್‌ನಿಂದ ಮೂರು ಕಿ.ಮೀ. ದೂರದಲ್ಲಿದ್ದು, ತಾರ್ ರಸ್ತೆಗೆ ಸ್ಪರ್ಶಿಸಿ ಬಸ್ ಮಾರ್ಗದಿಂದ 500 ಮೀಟರ್ ಸಮೀಪದಲ್ಲಿದೆ.ಪ್ರತಿ ಸೆಂಟ್ಸ್ ಗೆ 25,0000 ದರ ನಿಗದಿ ಪಡಿಸಲಾಗಿದೆ. ಎಲ್ಲಾ ಸೈಟ್‌ಗಳು ಉತ್ತರಕ್ಕೆ ಎದುರಾಗಿವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :+91 81970 35017
ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದ ಸ್ಕೂಟರ್; ತಪ್ಪಿದ ಭಾರೀ ಅನಾಹುತ

ಉಡುಪಿ: ಪೆಟ್ರೋಲ್ ಲೀಕ್ ಆಗಿ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಘಟನೆ ಉಡುಪಿಯ ಚಿಟ್ಪಾಡಿಯ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ. ಪೆಟ್ರೋಲ್ ಪಂಪ್ ನಿಂದ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿದ ವ್ಯಕ್ತಿ ಬಳಿಕ ಪೆಟ್ರೋಲ್ ತುಂಬಿದ ಬಾಟಲಿಯನ್ನು ಸ್ಕೂಟರ್ ಢಿಕ್ಕಿಯ ಒಳಗೆ ಇರಿಸಿದ್ದರು. ಬಾಟಲಿಯ ಪೆಟ್ರೋಲ್ ಲೀಕ್ ಆಗಿ ಇಂಜಿನ್ ಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಸ್ಥಳೀಯ ಪೆಟ್ರೋಲ್ ಪಂಪ್ ಸಿಬ್ಬಂದಿ ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟು ನಂದಿಸುವಲ್ಲಿ ಯಶಸ್ವಿಯಾದರು.ಇವರ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. […]
ಮಲ್ಪೆ: ಮನೆ ಬಿಟ್ಟು ಬಂದಿರುವ ಅಪ್ರಾಪ್ತ ಬಾಲಕಿಯರ ರಕ್ಷಣೆ

ಉಡುಪಿ: ಅಪ್ರಾಪ್ತ ಪ್ರಾಯದ ಇರ್ವರು ಬಾಲಕಿಯರನ್ನು ರಕ್ಷಿಸಿರುವ ಘಟನೆ ಮಲ್ಪೆ ಬೀಚಿನಲ್ಲಿ ಶುಕ್ರವಾರ ನಡೆದಿದೆ. ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರೆಂದು ತಿಳಿದುಬಂದಿದೆ. ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿ ಹೊಂದಿದ್ದೇವೆ, ಪೋಷಕರಿಲ್ಲದೆ ಅಸಹಾಯಕರಾದೆವು. ಕಲಿಯುವ ಉದ್ದೇಶಕ್ಕಾಗಿ ಹಣ ಕ್ರೋಢೀಕರಿಸಲು, ಹಾವೇರಿಯಿಂದ ಉಡುಪಿಗೆ ಭಿಕ್ಷೆಯಾಚಿಸಲು ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.