ಮಲ್ಪೆ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ.

ಉಡುಪಿ: ಮೂಡುತೋನ್ಸೆ ಗ್ರಾಮದ ನೇಜಾರಿನ ರಾಜೀವನಗರ ನಿವಾಸಿ ಅಶೋಕ್ (50) ಎಂಬವರು ವಿಪರೀತ ಮದ್ಯ ಸೇವನೆಯ ಚಟದಿಂದ ಖಿನ್ನತೆ ಹೊಂದಿ ಜೀವನದಲ್ಲಿ ಜಿಗುಪ್ಸೆಗೊಂಡು ಅ.16ರಂದು ಬೆಳಗ್ಗೆ 10ರಿಂದ ಅಪರಾಹ್ನ 1 ಗಂಟೆ ನಡುವಿನ ಅವಧಿಯಲ್ಲಿ ತನ್ನ ರೂಮಿನ ಪ್ಯಾನ್‌ಗೆ ಬೈರಾಸ್‌ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ನದಿಗೆ ಹಾರಿ ಆತ್ಮಹತ್ಯೆ.

ಉಡುಪಿ: ಮಕ್ಕಳಿಲ್ಲದ ಚಿಂತೆಯಲ್ಲಿ ನೊಂದ ಆತ್ರಾಡಿಯ ಅಣ್ಣ ಬಾಳು (89) ಎಂಬವರು ಅ.15ರಂದು ಸಂಜೆ ವೇಳೆ ಪರೀಕ ಪರಿಸರದ ಸುವರ್ಣ ನದಿ ಸೇತುವೆ ಬಳಿ ನದಿಗೆ ಹಾರಿದ್ದು, ಅವರ ಮೃತದೇಹ ನಿನ್ನೆ ಪತ್ತೆಯಾಗಿದೆ. ಈ ಬಗ್ಗೆ ಮೃತರ ಸಹೋದರ ಕೃಷ್ಣ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾರ್ಕಳ: ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರು ನ್ಯಾಯಾಂಗ ಬಂಧನಕ್ಕೆ.

ಕಾರ್ಕಳ: ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ಅ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಬಾಂಗ್ಲಾದ ರಾಜಶಾಹಿ ಜಿಲ್ಲೆಯ ಗೋದ್‌ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ಇಮಾಮ್ ಶೇಖ್ (21) ಹಾಗೂ ರಿಮುಲ್ ಇಸ್ಲಾಂ (20) ಎಂದು ಗುರುತಿಸಲಾಗಿದೆ. ಕೆಲದಿನಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿಯ ಮೇರೆ ನಿನ್ನೆ […]

11 ನೇ ಸೀಸನ್ ಗೆ ಕಾಲಿಟ್ಟ ಪ್ರೊ ಕಬಡ್ಡಿ ಲೀಗ್ (PKL)ಪಂದ್ಯಾವಳಿ

ಯಶಸ್ವಿ 10 ಋತುಗಳನ್ನು ಕಂಡಿರುವ “ಪ್ರೊ ಕಬಡ್ಡಿ ಲೀಗ್‌'(ಪಿಕೆಎಲ್‌), ಇದೀಗ 11ನೇ ಋತುವಿಗೆ ಕಾಲಿಟ್ಟಿದೆ. ದೇಸಿ ಕ್ರೀಡೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡಲು 2014ರಲ್ಲಿ “ಐಪಿಎಲ್‌ ಮಾದರಿ’ಯಲ್ಲಿ ಆರಂಭವಾದ ಪಿಕೆಎಲ್‌ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದೆ. 11ನೇ ಸೀಸನ್‌ ಆರಂಭದ ಹಿನ್ನೆಲೆಯಲ್ಲಿ ಹಿಂದಿನ ಚಾಂಪಿಯನ್‌ಗಳು, ಈ ಬಾರಿ ಭಾಗಿಯಾಗುತ್ತಿರುವ ತಂಡಗಳ ಬಲಾಬಲ, ಪಂದ್ಯಾವಳಿ ನಡೆಯುವ ಸ್ಥಳಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ… ರೈಡರ್‌ಗಳನ್ನಷ್ಟೇ ನಂಬಿರುವ ಬೆಂಗಳೂರು ಬುಲ್ಸ್‌ಕಳೆದ ಸೀಸನ್‌ನಲ್ಲಿ ಡಿಫೆನ್ಸ್‌ ಇಲ್ಲದೇ ಪ್ಲೇಆಫ್ಗೇರಲು ವಿಫಲವಾದ ಬೆಂಗಳೂರು ಬುಲ್ಸ್‌, […]