ಉಡುಪಿ:ಮತ್ತೋರ್ವ ಬಾಂಗ್ಲಾ ಅಕ್ರಮ ಪ್ರಜೆಯ ಬಂಧನ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಓರ್ವ ಅಕ್ರಮ ಬಾಂಗ್ಲಾ ಪ್ರಜೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಸಂತೆಕಟ್ಟೆಯಲ್ಲಿ ಓರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಮಲ್ಪೆ ಪೊಲೀಸರು ಏಳು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದಿದ್ದರು. ಮಲ್ಪೆ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಎರಡು ದಿನಗಳ ಬಳಿಕ ಕಾರ್ಕಳದಲ್ಲಿ ಮತ್ತಿಬ್ಬರು ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿತ್ತು. ಇಂದು ಬಂಧನಕ್ಕೊಳಗಾದ ಮಹಮ್ಮದ್ ಜಹಾಂಗೀರ್ ಆಲಂ ( 24) ನನ್ನು ನಾಳೆ ನ್ಯಾಯಾಧೀಶರ […]

ಜನಜೀವನಕ್ಕೆ ತೊಂದರೆ ಆಗದ ರೀತಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಿ; ಶಾಸಕ ಗುರುರಾಜ್ ಗಂಟಿಹೊಳೆ

ಉಡುಪಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ವಿರುದ್ಧ ಜನಾಂದೋಲ ಎದ್ದಿದೆ. ಕಳೆದ ಹತ್ತು, ಹನ್ನೊಂದು ವರ್ಷಗಳ ಹಿಂದೆ ಆದಂತಹ ಹೋರಾಟಗಳು ಫಲ ಕೊಟ್ಟಿಲ್ಲ. ಒಟ್ಟು ಆಡಳಿತ ವ್ಯವಸ್ಥೆ ಅದನ್ನು ನಿರ್ಲಕ್ಷ್ಯ ಮಾಡಿದೆ ಎಂಬ ನೋವು ನಮಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಡು, ಪರಿಸರ ಉಳಿಸಲು ನಮ್ಮ ವಿರೋಧವಿಲ್ಲ. ಆದರೆ ಅಲ್ಲಿಯೇ ಬದುಕು ಕಟ್ಟಿಕೊಂಡು ಬಂದಿರುವ ಜನರ ಬದುಕಿಗೆ ಏನು ಎಂಬುವುದನ್ನು […]

ನ.1ರಿಂದ 7 ರವರೆಗೆ ಕುಂದಾಪುರದಲ್ಲಿ “ಕನ್ನಡ ಹಬ್ಬ ಸಪ್ತಾಹ”

ಉಡುಪಿ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಉದ್ದೇಶದಿಂದ ನ.1ರಿಂದ ನ.7 ರವರೆಗೆ “ಕನ್ನಡ ಹಬ್ಬ ಸಪ್ತಾಹ”ವನ್ನು ಕುಂದಾಪುರದಲ್ಲಿ ಆಯೋಜಿಸಲಾಗಿದೆ. ಈ ಅದ್ಧೂರಿ ಸಪ್ತಾಹಕ್ಕೆ ಚಾಲನೆ ನೀಡುವ ಸಲುವಾಗಿ ಅ.31ರಂದು ‘ಕನ್ನಡ ರಥೋತ್ಸವ’ ಎಂಬ ಪುರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ […]

ದುಬೈನ ಫಾರ್ಚ್ಯೂನ್ ಗ್ರೂಪ್ ಸಂಸ್ಥೆಗೆ 2.5 ಕೋಟಿ ವಂಚಿಸಿದ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ

ಉಡುಪಿ: ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ, ಅನಿವಾಸಿ ಭಾರತೀಯ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಅಕೌಂಟೆಂಟ್ ಆಗಿ ಸೇರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಬಾರ್ಕೂರು‌ ಮೂಲದ ನಾಗೇಶ್ ಪೂಜಾರಿ (31) ಎನ್ನುವಾತನಿಗೆ ಈ ಹಿಂದೆ ಬ್ರಹ್ಮಾವರ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಜಾಮೀನು ಆದೇಶವನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ಧುಗೊಳಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಉಡುಪಿ ಸೆನ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ […]

ಉಡುಪಿ: ಹೊಸ ಬದುಕು ಆಶ್ರಮಕ್ಕೆ ದಾನಿಗಳ ಅಗತ್ಯ ವಸ್ತುಗಳ ಕೊಡುಗೆ

ಉಡುಪಿ:ನಿರ್ಗತಿಕರ ಸೇವಾಕೈಂಕರ್ಯದಲ್ಲಿ ನಿರತವಾಗಿರುವ ಹೊಸಬದುಕು ಆಶ್ರಮಕ್ಕೆ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿದರು. ಉದ್ಯಮಿ ಮಹಮ್ಮದ್‌ ಆಸಿಫ್ ಇಕ್ಬಾಲ್ ಅವರು 100 ಊಟದ ತಟ್ಟೆ ಹಾಗೂ 100 ಲೋಟವನ್ನು ನೀಡಿದರು. ಉದ್ಯಮಿಗಳಾದ ಮುರುಳೀಧರ ಬಲ್ಲಾಳ್ ಮತ್ತು ಗಿರಿಜಾ ಸರ್ಜಿಕಲ್ ವ್ಯವಸ್ಥಾಪಕ ರವಿ ಶೆಟ್ಟಿಯವರು ಹಾಸಿಗೆಗಳನ್ನು ನೀಡಿದರು. ಗಿರಿಯಾಸ್ ಮಳಿಗೆಯ ವ್ಯವಸ್ಥಾಪಕ ರತನ್ ಹಾಗೂ ದಾನಿಗಳು ಉಪಸ್ಥಿತರಿದ್ದರು. ಆಶ್ರಮದ ಸಂಚಾಲಕ ವಿನಯ ಚಂದ್ರ ಪ್ರಸ್ತಾವನೆಗೈದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ವಾಗತಿಸಿದರು.