ಕುಂದಾಪುರ: ಕಡಿಮೆ ರಕ್ತದೊತ್ತಡದಿಂದ ಮಹಿಳೆ ಮೃತ್ಯು.
ಕುಂದಾಪುರ: ಮಹಿಳೆಯೊಬ್ಬರು ಕಡಿಮೆ ರಕ್ತದೊತ್ತಡದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುವ ಘಟನೆ ಹೆಮ್ಮಾಡಿಯಲ್ಲಿ ಅ.14ರಂದು ನಡೆದಿದೆ. ಮೃತ ಮಹಿಳೆ ಹೆಮ್ಮಾಡಿ ನಿವಾಸಿ ಮರಿನಾ ಡಿ’ಸಿಲ್ವಾ (42). ಇವರು ಪತಿ ಕುಂದಾಪುರದ ಓಯಾಸಿಸ್ ಎಲೆಕ್ಟ್ರಾನಿಕ್ಸ್ ಮಾಲಕ ಲಾಯ್ಡ ಡಿ’ಸಿಲ್ವಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 2016ರ ಜೂ. 21ರಂದು ಮೊವಾಡಿಯಲ್ಲಿ ಸಂಭವಿಸಿದ್ದ ಭೀಕರ ಶಾಲಾ ವಾಹನ ದುರಂತದಲ್ಲಿ ಇವರ ಇಬ್ಬರು ಪುತ್ರಿಯರು ಸಾವನ್ನಪ್ಪಿದ್ದರು.