ಮನೆ, ಕಟ್ಟಡ ನಿರ್ಮಾಣಕ್ಕೆ ಉತ್ತಮ ಆಯ್ಕೆ “ಜಾನ್ವಿ ಕನ್ಟ್ರಕ್ಷನ್”
ಉಡುಪಿ: ಮನೆ, ಕಟ್ಟಡ ನಿರ್ಮಾಣದಲ್ಲಿ ಕರಾವಳಿಯಾದ್ಯಂತ ಪ್ರಸಿದ್ಧಿ ಪಡೆದಿರುವ ‘ಜಾನ್ವಿ ಕನ್ಟ್ರಕ್ಷನ್’ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುತ್ತಿವೆ.ಗ್ರಾಹಕರಿಗೆ ಉತ್ತಮ ಬಜೆಟ್ ನಲ್ಲಿ ಮನೆ, ಕಟ್ಟಡ ನಿರ್ಮಿಸಿಕೊಡುವುದರಲ್ಲಿ ಜಾನ್ವಿ ಕನ್ಟ್ರಕ್ಷನ್ ಸೈ ಎನಿಸಿಕೊಂಡಿದೆ. ತನ್ನ ಅತ್ಯುತ್ತಮ ಸೇವೆಯ ಮೂಲಕ ಸಂಸ್ಥೆಯು ಎಲ್ಲೆಡೆ ಛಾಪು ಮೂಡಿಸಿದೆ.ಉದ್ಯಾವರದ ಗುಡ್ಡೆಯಂಗಡಿಯ ಬಬ್ಬುಸ್ವಾಮಿ ಬಿಲ್ಡಿಂಗ್ ನ ಒಂದನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಜಾನ್ವಿ ಕನ್ಟ್ರಕ್ಷನ್” ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸೌಲಭ್ಯಗಳನ್ನು ನೀಡುತ್ತಿವೆ. ಸಮಾಲೋಚನೆ (consulting), ಯೋಜನೆಗಳು (plans), ಬ್ಲೂ ಪ್ರಿಂಟ್ (blue print), ಆಂತರಿಕ ಕೆಲಸ […]
ಸುಳ್ಯ: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಸಹಕಾರಿ ಸಂಘದ ಉದ್ಯೋಗಿ ಮೃತ್ಯು.
ಸುಳ್ಯ: ಸುಳ್ಯದ ಪೈಚಾರು-ಸೋಣಾಂಗೇರಿ ರಸ್ತೆಯ ಆರ್ತಾಜೆ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಐವರ್ನಾಡು ಸಹಕಾರಿ ಸಂಘದ ಉದ್ಯೋಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಐವರ್ನಾಡು ಗ್ರಾಮದ ಪಾಲೆಪ್ಪಾಡಿ, ನಿವಾಸಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗ ಬೋಜಪ್ಪ (56) ಮೃತರು. ಸುಳ್ಯದಿಂದ ಎಲಿಮಲೆ ಕಡೆಗೆ ಹೋಗುತ್ತಿದ್ದ ಬುಲೆಟ್ ಹಾಗೂ ಐವರ್ನಾಡು ಸುಳ್ಯಕ್ಕೆ ಬರುತ್ತಿದ್ದ ಬೋಜಪ್ಪರ ಬೈಕ್ ಆರ್ತಾಜೆ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೋಜಪ್ಪ ಅವರು ಗಂಭೀರ […]
ಉಡುಪಿ: ನೀರನ್ನು ಕುದಿಸಿ ಕುಡಿಯುವಂತೆ ಸೂಚನೆ
ಉಡುಪಿ, ಅಕ್ಟೋಬರ್ 16: ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಸ್ವರ್ಣಾ ನದಿಯ ಬಜೆ ಡ್ಯಾಂ, ಬಜೆ ನೀರು ಶುದ್ದೀಕರಣ ಘಟಕ (WTP) ಮಣಿಪಾಲ GSLR ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಸದರಿ ನೀರಿನ ಮಾದರಿಯನ್ನು ಪ್ರತೀ ತಿಂಗಳಿಗೊಮ್ಮೆ ಪರೀಕ್ಷಿಸಿ, ನೀರು ಕುಡಿಯಲು ಯೋಗ್ಯವಾಗಿರುವ ಬಗ್ಗೆ ವರದಿಯನ್ನು ಪಡೆಯಲಾಗುತ್ತಿರುತ್ತದೆ.ಆದರೂ ಸಹ ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆಯಿಂದಾಗಿ ನೀರಿನ ಬಣ್ಣ ಬದಲಾಗಿದ್ದು, ಸದರಿ ನೀರು ಕುಡಿಯಲು ಯೋಗ್ಯವಾಗಿದ್ದರೂ ಸಹ ಆರೋಗ್ಯದ ಹಿತದೃಷ್ಟಿಯಿಂದ […]
ಉಡುಪಿ: ಅ.20 ರಂದು ಉದ್ಯೋಗ ಮೇಳ
ಉಡುಪಿ: ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿ ಬರುವ ಸ್ವಾಯತ್ತ ವೈಜ್ಞಾನಿಕ ಸಂಸ್ಥೆಯಾದ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಯು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ನ್ಯಾಶನಲ್ ಕೆರಿಯರ್ ಸರ್ವಿಸ್ (NCS) ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಕಾರದೊಂದಿಗೆ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರದ ಕೆ.ಎಲ್.ಇ ಸಂಸ್ಥೆಯ ಎಸ್.ನಿಜಲಿಂಗಪ್ಪ […]
ಮಂಗಳೂರು: ಖಾಸಗಿ ಬಸ್ ನಿರ್ವಾಹಕನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ.
ಮಂಗಳೂರು: ಸ್ಟೇಟ್‌ಬ್ಯಾಂಕ್’ನ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರೊಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರು ಖಾಸಗಿ ಬಸ್ ನಿರ್ವಾಹಕರಾಗಿದ್ದ ರಾಜೇಶ್ (30). ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಅಥವಾ ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವೆನ್‌ಲಾಕ್ ಶವಾಗಾರದಲ್ಲಿಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.