ನಿಮಗೆ ಶ್ರವಣ ಸಮಸ್ಯೆ ಇದೆಯೇ.. ಹಾಗಾದರೆ ಇಲ್ಲಿದೆ ಸೂಕ್ತ ಪರಿಹಾರ.

ಉಡುಪಿ : ಶ್ರವಣದಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದರೆ ಉಡುಪಿಯ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ನಿಮ್ಮ ಅನುಮಾನವನ್ನು ಬಗೆಹರಿಸಿಕೊಂಡು ನಿಮ್ಮ ಜೀವನವನ್ನು ಮತ್ತು ಸಂಬಂಧಗಳನ್ನು ಬಲಪಡಿಸಿಕೊಳ್ಳಿ. ◾ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುತ್ತೀರಾ?◾ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುತ್ತದೆಯೇ ?◾ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿ ಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುತ್ತದೆಯೇ ?◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?◾ನೀವು ಯಾವುದಾದರೂ […]
ಉಡುಪಿ: ಹೋಂಸ್ಟೆ ರೆಸಾರ್ಟ್ ಗಳಿಂದ ಊರಿನ ಪರಂಪರೆಗೆ ಧಕ್ಕೆ; ಪಡುಕರೆ ಭಜನಾಮಂದಿರಗಳ ಒಕ್ಕೊರಲ ಅಭಿಪ್ರಾಯ

ಉಡುಪಿ: ಕಳೆದ ನಾಲ್ಕೈದು ವರ್ಷಗಳಿಂದ ಹೋಂಸ್ಟೇ ರೆಸಾರ್ಟ್’ಗಳಿಂದ, ಅದರಿಂದ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ, ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಸತತ ಧಕ್ಕೆಯಾಗುತ್ತಿರುವುದನ್ನು ಕಂಡು ಕಳೆದ ನಾಲ್ಕೈದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟೂ ಸುಸ್ತಾದ ಊರಿನ ನಾಗರಿಕರು ಮುಂದಿನ ಪ್ರಬಲ ಹೋರಾಟಕ್ಕೆ ಪೂರ್ವಭಾವಿಯಾಗಿ ಸರ್ವಸಂಸ್ಥೆಯ ನೇತೃತ್ವದಲ್ಲಿ ಬ್ರಹತ್ ಸಭೆಯನ್ನು ಆಯೋಜಿಸಿದ್ದರು. ಭಾನುವಾರ ನಡೆದ ಈ ಬ್ರಹತ್ ಸಭೆಯಲ್ಲಿ ಮಲ್ಪೆ ಪಡುಕರೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, […]
ಬೈಂದೂರು: ರಸ್ತೆಯ ಮಧ್ಯೆ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ: ಸಹಸವಾರ ಮೃತ್ಯು, ಸವಾರ ಗಂಭೀರ.

ಬೈಂದೂರು: ಬೈಂದೂರು ಮನಿಶ್ ಬಾರ್ ಎದುರು ಪ್ಲೈ ಓವರ್ ರಸ್ತೆಯಲ್ಲಿ ಸ್ಕೂಟರ್ ಹತೋಟಿ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಸಹಸವಾರ ಮೃತಪಟ್ಟು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅ.14ರಂದು ನಸುಕಿನ ವೇಳೆ 1.40ರ ಸುಮಾರಿಗೆ ನಡೆದಿದೆ. ಮೃತರನ್ನು ಅಬ್ದುಲ್ ಮುನೀರ್ ಎಂದು ಗುರುತಿಸಲಾಗಿದೆ. ಸವಾರ ಅಬ್ದುಲ್ ನಝೀರ್ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ್ಪುಂದ ಕಡೆಯಿಂದ ಶಿರೂರು ಕಡೆಗೆ ಹೋಗುತ್ತಿದ್ದ ಸ್ಕೂಟಿ ಸವಾರನ ಹತೋಟಿ ತಪ್ಪಿ ರಸ್ತೆಯ ಮಧ್ಯೆ ಇರುವ ಡಿವೈಡರ್ ಗೋಡೆಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ […]
ಕಾರ್ಕಳ: ಬ್ಯಾಂಕ್ ಮಾಜಿ ಉದ್ಯೋಗಿ ಆತ್ಮಹತ್ಯೆ

ಕಾರ್ಕಳ: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಿಕೊಂಡಿದ್ದ ಬ್ಯಾಂಕಿನ ಮಾಜಿ ಉದ್ಯೋಗಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಅ.13ರಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಬೆಳ್ಮಣ್ ಗ್ರಾಮದ ದಿನೇಶ್ ಎಂ.(34) ಎಂದು ಗುರುತಿಸ ಲಾಗಿದೆ. ಕರ್ನಾಟಕ ಬ್ಯಾಂಕ್‌ನ ಉದ್ಯೋಗಿಯಾಗಿದ್ದು ಎರಡು ತಿಂಗಳ ಹಿಂದೆ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಮನೆಯಲ್ಲಿ ಇದ್ದರು. ತದನಂತರ ಅವರು ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡಿಕೊಂಡಿದ್ದರು. ಈ ವಿಚಾರವಾಗಿ ಮಾನಸಿಕವಾಗಿ ನೊಂದ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ಈ ಬಗ್ಗೆ ಕಾರ್ಕಳ […]
ಉಡುಪಿ:ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ರಜತಾದ್ರಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವು ಗುರುವಾರ ನಗರದ ಬ್ರಹ್ಮಗಿರಿಯ ಬಾಲಭವನದಲ್ಲಿ “ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆಧ್ಯತೆ ನೀಡುವ ಸಮಯ ಇದು” ಎಂಬ ಘೋಷವಾಕ್ಯದೊಂದಿಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ […]