ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರುಕಟ್ಟುವ ಹಬ್ಬ

ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಕದಿರುಕಟ್ಟುವ ಹಬ್ಬವು ಶನಿವಾರ ಸಂಭ್ರಮದಿಂದ ನಡೆಯಿತು.ಮಠದ ಪುರೋಹಿತರು ಸಮೀಪದ ಗದ್ದೆಯಲ್ಲಿ ನೂತನವಾಗಿ ಬೆಳೆದ ಭತ್ತದ ಕದಿರಿಗೆ ಪೂಜೆ ಸಲ್ಲಿಸಿದ ಬಳಿಕ ರಥಬೀದಿಗೆ ತಂದು ಸ್ವರ್ಣಪಲ್ಲಕ್ಕಿಯಲ್ಲಿಟ್ಟು ವಾದ್ಯ, ಮಂತ್ರಘೋಷ ಸಹಿತ ಸಾಂಪ್ರದಾಯಿಕ ಬಿರುದಾವಳಿಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ತರಲಾಯಿತು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ‌ ಕಿರಿಯ ಸುಶೀಂದ್ರತೀರ್ಥ ಶ್ರೀದಾರರು, ಮಠದ ಪುರೋಹಿತರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ವರ್ಷಕ್ಕೆರಡು ಬಾರಿ ತೆರೆಯುವ ಗರ್ಭಗುಡಿಯ ಮೂಡಣ ದ್ವಾರ:ಕದಿರನ್ನು ಶ್ರೀಕೃಷ್ಣನ ಗರ್ಭಗುಡಿಯ ಮೂಡಣದ್ವಾರದ ಮೂಲಕವೇ ಒಳ ತಂದು ಕೃಷ್ಣನ […]

ತಮಿಳುನಾಡು: ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ: ಹಲವರಿಗೆ ಗಾಯ

ತಿರುವಲ್ಲೂರು(ತಮಿಳುನಾಡು): ಇಲ್ಲಿ ಎಕ್ಸ್‌ಪ್ರೆಸ್ ರೈಲೊಂದು ಗೂಡ್ಸ್ ರೇಕ್‌ಗೆ ಢಿಕ್ಕಿ ಹೊಡೆದಿದ್ದು, ಪ್ಯಾಸೆಂಜರ್ ರೈಲಿನ ಎರಡು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ 6 ಬೋಗಿಗಳು ಹಳಿತಪ್ಪಿದ್ದು, ಕೆಲವು ಪ್ರಯಾಣಿಕರು ಗಾಯಗೊಂಡ ಬಗ್ಗೆ ವರದಿಯಾಗಿದೆ. 12578 ಮೈಸೂರು-ದರ್ಬಂಗಾ ಎಕ್ಸ್‌ಪ್ರೆಸ್ ಚೆನ್ನೈ ಹೊರವಲಯದ ಕವರೈಪೆಟ್ಟೈನಲ್ಲಿ ರಾತ್ರಿ 8:50 ಕ್ಕೆ ನಿಂತಿದ್ದ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು ರಕ್ಷಣ ಕಾರ್ಯ ಭರದಿಂದ ನಡೆಸಲಾಗುತ್ತಿದೆ ಎಂದು ರೈಲ್ವೆ […]

ಹೆಬ್ರಿ:ಚಾಣಕ್ಯ ಸಂಸ್ಥೆಯಲ್ಲಿ ಹಾರ್ಮೋನಿಯಂ ತರಗತಿ ಉದ್ಘಾಟನೆ

ಹೆಬ್ರಿ : ಯಾವುದೇ ಕಲೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಅವಶ್ಯಕ. ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಅವರಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಗುರುತಿಸುವ ಚಾಣಕ್ಯ ಸಂಸ್ಥೆಯ ಕಲಾ ಸೇವೆ ಶ್ಲಾಘನೀಯ ಎಂದು ಸಂಗೀತ ನಿರ್ದೇಶಕ ಹಾಲಾಡಿ ಕೃಷ್ಣ ಕಾಮತ್ ಹೇಳಿದರು. ಅವರು ಅ. 10ರಂದು ಹೆಬ್ರಿಯಸ್ಸಾರ್ ಬಳಿ ಇರುವ ಚಾಣಕ್ಯ ಎಜುಕೇಶನ್ ಅಂಡ್ ಕಲ್ಚರ್ ಅಕಾಡೆಮಿಯಲ್ಲಿ ಆರಂಭಗೊಂಡ ಹಾರ್ಮೋನಿಯಂ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಒಂದೇ ಸೂರಿನಡಿ ಎಲ್ಲಾ ಕಲಾ ಪ್ರಕಾರಗಳನ್ನು […]

ಉಚ್ಚಿಲ ದಸರಾ: ಇಂದು ಭವ್ಯ ಶೋಭಾಯಾತ್ರೆ; ಕಾಪು ಬೀಚ್‌ನಲ್ಲಿ ಬೃಹತ್ ಗಂಗಾರತಿ, ಸಮುದ್ರ ಮಧ್ಯೆ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ.

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಐತಿ ಹಾಸಿಕ 3ನೇ ವರ್ಷದ ಉಡುಪಿ ಉಚ್ಚಿಲ ದಸರಾ – 2024 ಕೊನೆಯ ಹಂತ ತಲುಪಿದ್ದು, ಶರನ್ನವರಾತ್ರಿಯ ವಿಜಯದಶಮಿ ದಿನವಾದ ಶನಿವಾರ ನಡೆಯಲಿರುವ ಭವ್ಯ ಶೋಭಾಯಾತ್ರೆಗೆ ಭರದ ಸಿದ್ಧತೆ ನಡೆಸಲಾಗಿದೆ. ಕಳೆದ 2 ವರ್ಷಗಳ ದಸರಾ ಮಹೋತ್ಸವದ ಅನುಭವದೊಂದಿಗೆ ಶೋಭಾಯಾತ್ರೆಯನ್ನು ಮಹಾ ಜನ ಸಂಘ, ದಸರಾ ಸಮಿತಿ ಹಾಗೂ ಮೊಗವೀರ ಸಮಾಜದ ಎಲ್ಲ ಗ್ರಾಮಸಭೆಗಳು, ಸಾರ್ವಜನಿಕರ ಮುಕ್ತ ಸಹಕಾರದೊಂದಿಗೆ ಅಚ್ಚುಕಟ್ಟಾಗಿ […]

ಉಚ್ಚಿಲ ದಸರಾ ಮಹೋತ್ಸವ- ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ.

ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯನ್ನು ನಾಡೋಜ ಡಾ.ಜಿ.ಶಂಕರ್ ಪುತ್ರಿ ಶ್ಯಾಮಿಲಿ ನವೀನ್ ಮತ್ತು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಉದ್ಘಾಟಿಸಿದರು. ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ದೇಹದಾರ್ಡ್ಯಪಟು ನಿತ್ಯಾನಂದ ಡಿ. ಕೋಟ್ಯಾನ್ ಬಡಾನಿಡಿಯೂರು ತೊಟ್ಟಂ ಪ್ರದರ್ಶನ ನೀಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ […]