ಉಡುಪಿಗೆ ರತನ್ ಟಾಟಾ ಬಂದಿದ್ದ ಅಪರೂಪದ ವಿಡಿಯೋ

ಉಡುಪಿ: ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ಭಾರತದ ಮುಂಚೂಣಿ ಉದ್ಯಮಿಯಾಗಿದ್ದ ಅವರು ಸರಳತೆಗೆ ಹೆಸರುವಾಸಿಯಾಗಿದ್ದರು. ಸದಾ ಮಾಮೂಲಿ ಧಿರಿಸು ತೊಡುವುದರ ಜೊತೆ ತಾನೊಬ್ಬ ಆಟೋ ಮೊಬೈಲ್‌ ಉದ್ಯಮಿಯಾಗಿದ್ದರೂ ಮಾಮೂಲಿ ಕಾರುಗಳಲ್ಲೇ ಓಡಾಡುತ್ತಿದ್ದರು. ಇಂತಹ ಉದ್ಯಮಿ ಉಡುಪಿ ಜೊತೆಗೆ ನಂಟು ಹೊಂದಿದ್ದರು.ಇವತ್ತಿನ ಪರ್ಯಾಯ ಪುತ್ತಿಗೆ ಮಠಾಧೀಶರ ಆಹ್ವಾನದ ಮೇರೆಗೆ ಅವರು ಕೆಲವು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದರು. ಉಡುಪಿ ಸಮೀಪದ ಪುತ್ತಿಗೆ ಮಠದ ಮೂಲ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಹಿರಿಯ ಉದ್ಯಮಿ ಅಲ್ಲಿ ಕೆಲವು […]

ಉಚ್ಚಿಲ: ಕಾರಿನ ಗಾಜು ಒಡೆದು ಲ್ಯಾಪ್ಟಾಪ್ ಕಳವು!

ಉಡುಪಿ: ಉಚ್ಚಿಲ ದೇವಸ್ಥಾನದ ಹೊರಬಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಡಬದಿಯ ಗಾಜು ಒಡೆದು ಲ್ಯಾಪ್ಟಾಪ್ ಅನ್ನು ಕಳವು ಮಾಡಲಾಗಿದೆ. ಉಡುಪಿ ನಿವಾಸಿ ವಸಂತ್ ಅವರು ಕುಟುಂಬ ಸಮೇತ ನವರಾತ್ರಿಯ ಪ್ರಯುಕ್ತ ಉಚ್ಚಿಲ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸು ಕಾರಿನ ಬಳಿ ಬಂದಾಗ ವಿಷಯ ಬೆಳಕಿಗೆ ಬಂದಿದೆ. ದೇವಸ್ಥಾನದ ಬಳಿ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಖದೀಮರು ಸುಮಾರು 45,000 ಬೆಲೆಬಾಳುವ ಲ್ಯಾಪ್ಟಾಪ್ ಅನ್ನು ಕದ್ದಿದ್ದಾರೆ. ಪೊಲೀಸರಿಗೆ ವಿಷಯ ತಿಳಿಸಿದಾಗ ಲ್ಯಾಪ್ಟಾಪ್ ನ ಸೀರಿಯಲ್ ನಂಬರ್ ಇದ್ದರೆ […]