ಮಂಗಳೂರು: ಮನೆಯವರು ಮೊಬೈಲ್ ಕಿತ್ತುಕೊಂಡ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿ ನಾಪತ್ತೆ.

ಮಂಗಳೂರು: ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮನೆಯವರು ಮೊಬೈಲ್ ಕಿತ್ತುಕೊಂಡದ್ದಕ್ಕೆ ಪಿಯುಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ನಾಪತ್ತೆಯಾದವ ವಿದ್ಯಾರ್ಥಿ ವಾಮಂಜೂರು ಸೈಂಟ್ ರೈಮಂಡ್ಸ್ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮೇಗಿನಪೇಟೆ ನಿವಾಸಿ ಮುಹಮ್ಮದ್ ಯಾಸೀನ್ ಅಫ್ನಾನ್ (16).ಈತನಿಗೆ ನಿರಂತರವಾಗಿ ಮೊಬೈಲ್ ನೋಡುವ ಚಟವಿತ್ತು ಎನ್ನಲಾಗಿದೆ. ಸೆ.25ರಂದು ಮನೆಯಲ್ಲಿರುವಾಗ ಅವನ ಬಳಿ ಯಿದ್ದ ಮೊಬೈಲ್‌ನ್ನು ಮನೆಯವರು ಕಿತ್ತುಕೊಂಡಿದ್ದರು. ಬಳಿಕ ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೊರ ಹೋಗಿದ್ದ ಮುಹಮ್ಮದ್ ಯಾಸೀನ್ ಕಾಲೇಜಿಗೆ ಹೋಗದೆ ಮನೆಗೂ ಬಾರದೆ […]

ಹಿರಿಯಡ್ಕ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನ; ತೀವ್ರವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತ್ಯು.

ಹಿರಿಯಡ್ಕ: ವೈಯಕ್ತಿಕ ಕಾರಣದಿಂದ ಮನನೊಂದು ಅ.8ರಂದು ಮನೆಯಲ್ಲಿ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ 41ನೇ ಶಿರೂರು ಗ್ರಾಮದ ಕೊಡ್ಸಾಲ್‌ಬೆಟ್ಟು ನಿವಾಸಿ ಆನಂದ(64) ಎಂಬವರು ಅ.9ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿ ಮೃತ್ಯು.

ಕುಂದಾಪುರ: ಎರಡು ದಿನಗಳ ಹಿಂದೆ ಭಾರೀ ಗಾಳಿಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಅ.9ರಂದು ಸಂಜೆ ಪತ್ತೆಯಾಗಿದೆ. ಮೃತಪಟ್ಟವರು ಕೊಡ್ಲಾಡಿ ಗ್ರಾಮದ ಶೇಖರ(60). ಅ.7ರಂದು ಇವರು ಸಿದ್ದಾಪುರದಲ್ಲಿ ಸಂಬಂಧಿಕರ ಮದುವೆಯನ್ನು ಮುಗಿಸಿ ಅಂಪಾರಿಗೆ ಬಂದು ಅಲ್ಲಿಂದ ಮನೆಗೆ ನಡೆದುಕೊಂಡು ಹೋಗಿ ಮನೆಯ ಸಮೀಪದ ಹೊಳೆಯನ್ನು ದಾಟುವಾಗ ವಿಪರಿತ ಗಾಳಿ, ಮಳೆಯಿಂದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅ.9ರಂದು ಸಂಜೆ ವೇಳೆ ಇವರ ಮೃತದೇಹವು ಆಜ್ರಿ ಗ್ರಾಮದ ಕೊಡ್ಗಿ ಹೊಳೆಯ ಮಧ್ಯದಲ್ಲಿ […]

ಮಂಗಳೂರು: ಉದ್ಯೋಗಾವಕಾಶ

ಮಂಗಳೂರು: ಗ್ಲೋಟಚ್ ಟೆಕ್ನಾಲಜಿ ಪ್ರೈ.ಲಿ. ವತಿಯಿಂದ ಗ್ರಾಜುಯೇಟ್ ಇಂಜಿನಿಯರಿಂಗ್ ಟ್ರೈನಿಂಗ್ ಹುದ್ದೆಗೆ ನೇರ ಸಂದರ್ಶನವನ್ನು ಅ.16ರಂದು ಕಾವೂರಿನ ಕಿಂಗ್ಸ್ ಪಾರ್ಕ್ ಲೇಔಟ್‌ನಲ್ಲಿ ನಡೆಯಲಿದೆ. ನೇರ ಸಂದರ್ಶನದಲ್ಲಿ ಬಿಇ, ಬಿಟೆಕ್, ಬಿಸಿಎ, ಬಿಎಸ್‌ಸಿ , ಎಂಸಿಎ, ಎಂ ಎಸ್‌ಸಿ, ಡಿಪ್ಲೋ ಮೋ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಅಧಿಕಾರಿ ಎಂದು ಸುಳ್ಳು ಹೇಳಿ ಶ್ರೀ ಕೃಷ್ಣ ಮಠಕ್ಕೆ ವಂಚನೆ.

ಉಡುಪಿ: ಪ್ರಧಾನ ಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿಯ ಸೋಗಿನಲ್ಲಿ ಶ್ರೀಕೃಷ್ಣ ಮಠಕ್ಕೆ ಕರೆ ಮಾಡಿ, ವಿಶೇಷ ದರ್ಶನಗೈದ ವ್ಯಕ್ತಿಯ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅ. 9ರಂದು ಉದಯ್‌ ಎನ್ನುವಾತ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ್‌ ಆಚಾರ್ಯ ಅವರಿಗೆ ಕರೆ ಮಾಡಿದ್ದು, ತಾನು ಪ್ರಧಾನಮಂತ್ರಿ ಕಾರ್ಯಾಲಯದ ಸಂಸದೀಯ ಪ್ರಧಾನ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಾವು ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದರು. ಅನುಮಾನ ವ್ಯಕ್ತವಾಯಿತು […]