ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ: ಅ.12 ರಂದು ವಿಜಯದಶಮಿ ಉತ್ಸವ.
ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಇರುವ ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12 ರಂದು ವಿಜಯೋತ್ಸವ ನಡೆಯಲಿದೆ. ಕಾರ್ಯಕ್ರಮಗಳು:ಪ್ರತಿದಿನ ನವರಾತ್ರಿ ವಿಶೇಷ ಪೂಜೆ, ಮಹಾಪೂಜೆ, ಶ್ರೀಕಾಲ ಬಲಿ ಉತ್ಸವ ಮತ್ತು ಮಹೋತ್ಸವ ನಡೆಯಲಿದೆ. ದಿನಾಂಕ: 09-10-2024 ನೇ ಬುಧವಾರ ರಾತ್ರಿ ಶಾರದಾ ದೇವಿ ಪ್ರತಿಷ್ಠಾಪನೆ, ವಿಶೇಷ ಪೂಜೆ.ದಿನಾಂಕ: 11-10-2024 ನೇ ಶುಕ್ರವಾರ ನವಮಿಯಂದು ಮಧ್ಯಾಹ್ನ ಶ್ರೀ ಚಂಡಿಕಾ ಯಾಗ,ರಾತ್ರಿ ರಜತ ರಥೋತ್ಸವ ಮತ್ತು ಪುಷ್ಪಕವಾಹನದಲ್ಲಿ […]
ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಅ.13ರಂದು ವಿಜಯದಶಮಿ ಉತ್ಸವ.
ಉಡುಪಿ: ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ(ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿದ್ದು)ದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.13ರಂದು ವಿಜಯದಶಮಿ ಉತ್ಸವ ನಡೆಯಲಿದೆ. ಕಾರ್ಯಕ್ರಮಗಳು:ಪ್ರತಿದಿನ ಶ್ರೀದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ.09-10-2024 ನೇ ಬುಧವಾರ: ಶಾರದಾ ಪೂಜೆ ತಾ.11-10-2024 ನೇ ಶುಕ್ರವಾರ: ದುರ್ಗಾಷ್ಟಮಿ, ದುರ್ಗಾನಮಸ್ಕಾರ ಪೂಜೆ. ತಾ. 13-10-2024 ನೇ ರವಿವಾರ: ವಿಜಯದಶಮಿ, ಕಲಶ ವಿಸರ್ಜನೆ. ತಾ.15-10-2024 ನೇ ಮಂಗಳವಾರ: ಚಂಡಿಕಾಯಾಗ, ಪೂರ್ಣಾಹುತಿ, […]
ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.12ರಂದು ವಿಜಯದಶಮಿ ಉತ್ಸವ.
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅ.12ರ ವರೆಗೆ ದೇವರ ಸನ್ನಿಧಿಯಲ್ಲಿ ನಡೆಯಿದೆ. ದಿನಾಂಕ: 09-10-2024 ನೇ ಬುಧವಾರ:ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಚಂಡಮುಂಡಹಾ ದುರ್ಗಾ ಪೂಜೆ, ಸರಸ್ವತಿ ಹೋಮ. ಬೆಳಿಗ್ಗೆ 8:30 ರಿಂದ ಚಂಡಿಕಾ ಹೋಮ ಮೂಲಾ ನಕ್ಷತ್ರ- ದೇವಸ್ಥಾನದ ವತಿಯಿಂದ. ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮತ್ತು 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4.00 ರಿಂದ ರುದ್ರ […]
ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಶುಭಾರಂಭ.
ಉಡುಪಿ: ಉಡುಪಿಯ ಹೃದಯಭಾಗ ಕಲ್ಸಂಕದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಹೋಟೆಲ್ ಇಂದು ಶುಭಾರಂಭಗೊಂಡಿತು.ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಜಂಟಿಯಾಗಿ ನೂತನ ಹೋಟೆಲ್ ಅನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದ ಪೇಜಾವರ ಶ್ರೀಗಳು, ಶ್ರೀಕೃಷ್ಣನ ಉಡುಪಿಗೆ ಜಯರಾಮ್ ಬನಾನ್ ಅವರು ಈ ಹೋಟೆಲ್ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಕೃಷ್ಣನ ಅನುಗ್ರಹದಿಂದ ನೂತನ ಹೋಟೆಲ್ ಯಶಸ್ವಿಯಾಗಲಿ […]
ಉಡುಪಿ: ಕಾರು ಡಿಕ್ಕಿ ಹೊಡೆದು ಯುವಕ ಮೃತ್ಯು.
ಉಡುಪಿ: ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದ್ರಾಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬುಧವಾರ ನಡೆದಿದೆ. ಮೃತ ಸವಾರನನ್ನು ಮಣಿಪಾಲದ ಉದ್ಯೋಗಿ ದೀಪೇಶ್ ದೇವಾಡಿಗ ಎಂದು ಗುರುತಿಸಲಾಗಿದೆ. ಇಂದ್ರಾಳಿ ದೇವಸ್ಥಾನದಿಂದ ಕೆಳಗೆ ಬರುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿದ್ದು, ಎರಡೂ ಬದಿಯಲ್ಲಿದ್ದ ವಾಹನಗಳು ಸಹಿತ ಜನರಿಗೆ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ದೀಪೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೆಲವು ಮಂದಿ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ […]