ಉಡುಪಿ: ಅ.10ರಂದು ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್’ನ ಕ್ಯಾಂಟಿನ್ ಉದ್ಘಾಟನೆ

ಉಡುಪಿ, ಅ.9: ಉಡುಪಿಯ ಲೋಂಬಾರ್ಡ್ ಮೆಮೋರಿಯಲ್ ಹಾಸ್ಪಿಟಲ್(ಮಿಷನ್ ಆಸ್ಪತ್ರೆ)ನ ಕ್ಯಾಂಟಿನ್ ಉದ್ಘಾಟನೆ ಅ.10ರಂದು ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ. ಸಿಎಸ್‌ಐ- ಕೆಎಸ್‌ಡಿಯ ಬಿಷಪ್ ರೆ.ಹೇಮಚಂದ್ರ ಕುಮಾರ್ ಆಶೀರ್ವಚನ ನೀಡಲಿರುವರು. ಕ್ಯಾಂಟಿನ್‌ನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಸಿಎಸ್‌ಐ ಕೆಎಸ್‌ಡಿ ಏರಿಯಾ ಚೈಯರ್‌ಮೆನ್ ರೆ.ಐವನ್ ಡಿ ಸೋನ್ಸ್ ಭಾಗವಹಿಸಲಿರುವರು ಎಂದು ಆಸ್ಪತ್ರೆಯ ನಿರ್ದೇಶಕ […]

ಕೊಕ್ಕರ್ಣೆಯಲ್ಲಿ ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ ಉದ್ಘಾಟನೆ

ಉಡುಪಿ: ಬ್ರಹ್ಮಾವರ, ತೀರ್ಥಹಳ್ಳಿ, ಕೊಪ್ಪದಲ್ಲಿ ವಸ್ತ್ರ ವೈವಿಧ್ಯಗಳ ಮಾರಾಟ ಮತ್ತು ಸೇವೆಗೆ ಹೆಸರುವಾಸಿಯಾದ 75 ವರ್ಷಗಳಿಂದ ಗ್ರಾಹಕರ ಮನೆಮಾತಾಗಿರುವ ‘ಸತ್ಯನಾಥ ಸ್ಟೋರ್ಸ್’ನ ನೂತನ ಶಾಖೆ “ಶ್ರೀರಾಮ್ ಟೆಕ್ಸ್‌ ಟೈಲ್ಸ್” ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಮುಖ್ಯರಸ್ತೆಯ ಓಂಶ್ರೀ ಸಂಕೀರ್ಣದಲ್ಲಿ ಇಂದು ಉದ್ಘಾಟನೆಗೊಂಡಿತು. ಗರಿಕೆಮಠ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಜಿ. ರಾಮಪ್ರಸಾದ ಅಡಿಗ ಹಾಗೂ ಕೋರ್ಚಿಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕ ಕೆ. ಶಿವರಾಮ ಅಡಿಗ ಅವರು ದೀಪ ಪ್ರಜ್ವಲಿಸಿ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು‌. ವೇದಮೂರ್ತಿ […]

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಕ್ಕೆ ನೂತನ ಫಾರ್ಮಸಿ ಪದವಿ ಕಾಲೇಜು ಸೇರ್ಪಡೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆಯು ತನ್ನಲ್ಲಿರುವ 20 ವಿವಿಧ ಶಿಕ್ಷಣ ಸಂಸ್ಥೆಗಳ ಜೊತೆಗೆ ಫಾರ್ಮಸಿ ಪದವಿ ಕಾಲೇಜನ್ನು ಈ ವರ್ಷವೇ ನೂತನವಾಗಿ ಪ್ರಾರಂಭಿಸುತ್ತಿದೆ. ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ 4 ವರ್ಷಗಳ ಪದವಿ ಶಿಕ್ಷಣ ಇದಾಗಿದ್ದು ಈ ವರ್ಷದಿಂದಲೇ ಅಂದರೆ, 2024-25ನೇ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ನೀಡಿದ್ದು, ಇದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಿಂದ ಸಂಯೋಜಿಸಲ್ಪಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ […]

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಜೃಂಭಣೆಯ ಶರನ್ನವರಾತ್ರಿ ಮಹೋತ್ಸವ.

ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.12ರವರೆಗೆ ಶರನ್ನವರಾತ್ರಿ ಮಹೋತ್ಸವ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ವಿಜ್ರಂಭಣೆಯಿಂದ ನಡೆಯುಲಿದೆ. 09-10-2024ನೇ ಬುಧವಾರ ಮೂಲ ನಕ್ಷತ್ರ ದಿನ “ಚಂಡಿಕಾಯಾಗ” ಜರಗಲಿರುವುದು. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಸ್ವಾಗತ ಬಯಸುವ ಜಯಮ್ಮ ಪಿ., ಕಾರ್ಯನಿರ್ವಹಣಾಧಿಕಾರಿ ಹೆಚ್.ಧನಂಜಯ ಶೆಟ್ಟಿ, ಅಧ್ಯಕ್ಷರು ಹೆಚ್. ಪ್ರಭಾಕರ ಶೆಟ್ಟಿ, ಆನುವಂಶಿಕ ಮುಕ್ತೇಸರರು ಹೆಚ್ಚು ಶಂಭು ಶೆಟ್ಟಿ, ಅನುವಂಶಿಕ ಮುಕ್ತೇಸರರು ಆರ್. ಶ್ರೀನಿವಾಸ ಶೆಟ್ಟಿ, ಅನುವಂಶಿಕ ಮುಕ್ತೇಸರರು ಹಾಗೂ ಊರ ಸಮಸ್ತರು, ಹೆಗ್ಗುಂಜೆ ನಾಲ್ಕು ಮನೆಯವರು […]

ಕುಂದಾಪುರ: ನಕಲಿ ಚಿನ್ನ ಕೊಟ್ಟು ಅಸಲಿ ಚಿನ್ನ ಪಡೆದು ವಂಚನೆ; ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರ ಕೃತ್ಯ ಸಿಸಿಟಿವಿಯಲ್ಲಿ ಸೆರೆ..!

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ನಕಲಿ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿಸಿ ಪರಾರಿಯಾದ ಘಟನೆ ಕುಂದಾಪುರ ನಗರದ ಅಪೂರ್ವ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ.ಜ್ಯುವೆಲ್ಲರ್ಸ್ ಗೆ ಬಂದ ಮಹಿಳೆಯರು, ಹಳೆಯ ಚಿನ್ನ ಕೊಟ್ಟು ಹೊಸ ಚಿನ್ನ ಖರೀದಿ ಮಾಡಲು ಇದೆ ಎಂದು ಹೇಳಿದ್ದಾರೆ. ಅಂಗಡಿ ಮಾಲೀಕರು ಆ ಚಿನ್ನದಲ್ಲಿ ಹಾಲ್ ಮಾರ್ಕ್ ಪರೀಕ್ಷೆ ಮಾಡಲು ತಿಳಿಸಿದ್ದರು. ಬಳಿಕ ಮಹಿಳೆಯರ ಚಿನ್ನ ಪಡೆದು ಅವರಿಗೆ ಹೊಸ ಚಿನ್ನ ಕೊಟ್ಟು ಕಳುಹಿಸಿದ್ದರು. ಆದರೆ, ಮಹಿಳೆಯರು ಕೊಟ್ಟ ಚಿನ್ನ ಪರಿಶೀಲಿಸಿದಾಗ […]