ಸುಳ್ಯ ರಂಗ ಮನೆಯಲ್ಲಿ ಬಣ್ಣದ ಮಾಲಿಂಗ ಅವರ ಯಕ್ಷ ಪ್ರತಿಮೆ ಅನಾವರಣ: ವನಜ ರಂಗಮನೆ ಪ್ರಶಸ್ತಿ ಪ್ರದಾನ

ಮಂಗಳೂರು: ಬಣ್ಣದ ಮಾಲಿಂಗ ಅವರು ಚೌಕಿಗೆ ಬಂದು ತಪಸ್ಸಿನಂತೆ ವೇಷ ಹಾಕುವುದನ್ನು ಕಂಡಿದ್ದೇನೆ. ಅವರು ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಈ ದಂತಕಥೆಯನ್ನು ಅವರ ಪ್ರತಿಮೆ ಮೂಲಕ ಇತಿಹಾಸ ಮಾಡಿದ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಸಾಧನೆ ಪ್ರಶಂಸನೀಯ, ಇದು ರಂಗಮನೆಯ ಹೆಗ್ಗಳಿಕೆಯಾಗಿದೆ ಎಂದು ಡಾ.ಮೋಹನ್ ಆಳ್ವ ಹೇಳಿದರು. ಅವರು ಭಾನುವಾರ ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗ ಮನೆಯಲ್ಲಿ ಹಮ್ಮಿಕೊಂಡ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯನ್ನು […]

ಅ.9ರಂದು ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ನವೀಕೃತ ಪುರುಷರ ವಿಭಾಗದ ಉದ್ಘಾಟನೆ

ಉಡುಪಿ: ಕರಾವಳಿ ಕರ್ನಾಟಕ ಅತೀ ವಿಶಾಲವಾದ ಮಳಿಗೆ ಉಡುಪಿಯ ಗೀತಾಂಜಲಿ ಸಿಲ್ಕ್ಸ್’ನಲ್ಲಿ ಸ್ವದೇಶಿ ಹಾಗೂ ವಿದೇಶಿಯ ಎಲ್ಲ ಪ್ರಮುಖ ಬ್ರಾಂಡ್ ಗಳನ್ನೊಳಗೊಂಡ ನವೀಕೃತ ಪುರುಷರ ವಿಭಾಗವು ಇದೇ ಬರುವ ಅ.9ರಂದು ಶುಭಾರಂಭಗೊಳ್ಳಲಿದೆ. ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಗೀತಾಂಜಲಿ ಸಿಲ್ಕ್ಸ್ ಪಾಲುದಾರ ಸಂತೋಷ್ ವಾಗ್ಳೆ ಮಾಹಿತಿ ನೀಡಿದರು. ಅಂದು ಬೆಳಗ್ಗೆ 9.45ಕ್ಕೆ ನವೀಕೃತ ಪುರುಷರ ವಿಭಾಗದ ಉದ್ಘಾಟನೆ ನಡೆಯಲಿದೆ. ಗ್ರಾಹಕರೇ ನಮ್ಮ ದೇವರು ಎಂಬ ಪರಿಕಲ್ಪನೆಯೊಂದಿಗೆ ಈ ವಿಭಾಗವನ್ನು ಗ್ರಾಹಕರಿಂದಲೇ ಉದ್ಘಾಟಿಸಲಾಗುವುದು ಎಂದರು. […]

ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ; ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಚಿತಾ ರಾಮ್ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕ ಸಮೀಪ ಇರುವ ಮುಳ್ಳಗುಡ್ಡೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಅನ್ನ ಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಚಲನಚಿತ್ರ ಒಂದರ ಶೂಟಿಂಗ್ ನಲ್ಲಿ ಉಡುಪಿ ಮತ್ತು ಕರಾವಳಿ ಭಾಗದಲ್ಲಿ ಬೀಡುಬಿಟ್ಟಿರುವ ನಟಿ, ಮುಳ್ಳಗುಡ್ಡೆ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರಕ್ಕೆ ತೆರಳಿದ ತಮ್ಮ ಚಿತ್ರಗಳನ್ನು […]

ಅ.9ಕ್ಕೆ ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉದ್ಘಾಟನೆ

ಉಡುಪಿ: ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ ನ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಇದೇ ಅ.9ಕ್ಕೆ ಉಡುಪಿಯ ಕಲ್ಸಂಕದಲ್ಲಿರುವ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ದಿ ಓಷಿಯನ್ ಪರ್ಲ್ ಹೋಟೆಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ರೋಷನ್ ಬನಾನ್ ಹೇಳಿದರು. ಉಡುಪಿ ಟೈಮ್ಸ್ ಸ್ಕ್ವೇರ್ ಮಾಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೂತನ ಹೋಟೆಲ್ ನಲ್ಲಿ “ಗ್ಯಾಂಡ್ […]

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ಪಿಡಿಒ, ನೌಕರರಿಂದ ಮುಷ್ಕರ

ಉಡುಪಿ: ಅಕ್ಟೋಬರ್ 4 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಗ್ರಾಮ ಪಂಚಾಯಿತಿಗಳ ಸೇವೆಯನ್ನು ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರ ಜಿಲ್ಲಾ ಕೇಂದ್ರಗಳಿಗೆ ಸ್ಥಳಾಂತರಗೊಂಡಿದೆ. ಇಂದಿನಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಪಂ ಪಿಡಿಒ ಹಾಗೂ ಪಂಚಾಯತ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲ 155 ಗ್ರಾಮ ಪಂಚಾಯಿತಿಯ ನೌಕರರು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದರಿಂದಾಗಿ ಜಿಲ್ಲೆಯ ಬಹುತೇಕ ಪಂಚಾಯತ್ ಗಳಲ್ಲಿ ಜನರ ಸೇವೆ […]