ಕಾಪು: ಕಾಲೇಜಿನ ಕೊಠಡಿಗೆ ಬಂದ ಉಡ; ಬೆಚ್ಚಿಬಿದ್ದ ಶಿಕ್ಷಕರು

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಡವೊಂದು ಕಾಣಿಸಿಕೊಂಡಿದೆ. ಉಡವನ್ನು ನೋಡಿದ ಶಿಕ್ಷಕರು ಒಂದು ಕ್ಷಣ ಬೆಚ್ಚಿಬಿದ್ದರು. ದಿಢೀರ್ ಆಗಿ ಕಾಲೇಜಿನ ಕೊಠಡಿಯೊಳಗೆ ಪ್ರವೇಶಿದ ಉಡ‌ ಗಾಬರಿ ಗಲಿಬಿಲಿಯಿಂದ ಅತ್ತಿಂದಿತ್ತಾ ಓಡಾಡಿದೆ. ಕೊಠಡಿಯಲ್ಲಿ ಹರಿದಾಡುವ ಸರೀಸೃಪ ಕಂಡ ಶಿಕ್ಷಕ ಶಿಕ್ಷಕಿಯರು ಭಯಭೀತರಾಗಿ ಹೊರಗೆ ಓಡಿಬಂದರು. ತಕ್ಷಣವೇ ಉರಗ ತಜ್ಞರಾದ ಪ್ರಶಾಂತ್ ಪೂಜಾರಿ ಮತ್ತು ಶಿವಾನಂದ ಪೂಜಾರಿ ಅವರಿಗೆ ಮಾಹಿತಿ ನೀಡಲಾಯಿತು. ಅವರು ಸ್ಥಳಕ್ಕೆ ಬಂದು ಕಾರ್ಯಾಚರಣೆ ಮೂಲಕ ಉಡವನ್ನು ಸೆರೆ […]

ಉಡುಪಿ: ಪ್ರಯಾಣ ಚೀಟಿ ತಪಸಾಣಾಧಿಕಾರಿಯ ಮಾನವೀಯಪ್ರಜ್ಞೆಗೆ ಪ್ರಶಂಸೆ.

ಉಡುಪಿ: ಎಕ್ಸ್ ಪ್ರೆಸ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣ ಚೀಟಿ ತಪಾಸಣಾಧಿಕಾರಿ ವಾಸುದೇವ ಪೈ ಅವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅಸಹಾಯಕ ಸ್ಥಿತಿಯಲ್ಲಿರುವುದನ್ನು ಗಮನಿಸಿ, ನೆರವಿಗೆ ಬಂದು ಮಾನವೀಯತೆ ಮೆರೆದಿರುವ ವಿದ್ಯಮಾನವು ಬುಧವಾರ ನಡೆದಿದೆ. ತಪಾಸಣಾಧಿಕಾರಿಯ ಮಾನವೀಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪ್ರಯಾಣಚೀಟಿ ತಪಾಸಾಣಧಿಕಾರಿ ಅವರು ರಕ್ಷಿಸಿರುವ ವ್ಯಕ್ತಿಯನ್ನು ರೈಲು ಇಂದ್ರಾಳಿ ನಿಲ್ದಾಣದಲ್ಲಿ ಇಳಿಸಿ, ರೈಲ್ವೆ ಸಂರಕ್ಷಣಾ ದಳದ ಇನ್ಸ್‌ಪೆಕ್ಟರ್ ಮುಂದೆ ಹಾಜರುಪಡಿಸಿ, ಜೀನಾ ಪಿಂಟೋ ಕಾನೂನು ಪ್ರಕ್ರಿಯೆಗಳನ್ನು ನಡೆದಾದ ಬಳಿಕ, ಮಣಿಪಾಲ […]

ಮಂಗಳೂರು:ತ್ರಿಶಾ ಸಮೂಹ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ಮಂಗಳೂರು:ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಒಂದು ಕಲೆಯಾಗಿದೆ. ಶಿಕ್ಷಣದ ಗುರಿ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ಕಳೆದ 26 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿರುವ ತ್ರಿಶಾ ಸಮೂಹ ಸಂಸ್ಥೆಯ ಮಂಗಳೂರಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಅಕ್ಟೋಬರ್ 4 ರಂದು ನಡೆಯಿತು. ಶ್ರೀ ಶ್ರೀ ಶ್ರೀ ವಿಠ್ಠಲದಾಸ ಸ್ವಾಮೀಜಿ, ಸಾಂದೀಪನಿ ಸಧಾನಾಶ್ರಾಮ ಶ್ರೀ ಕ್ಷೇತ್ರ ಕೇಮಾರು, ರವರು ಉದ್ಘಾಟನೆಯನ್ನು ನೆರವೇರಿಸಿ ಭಗವದ್ಗೀತೆಯ ಪ್ರಕಾರ […]

ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷ ನೋಡಬೇಡಿ, ವ್ಯಕ್ತಿಗಳನ್ನು ನೋಡಿ ಮತದಾನ ಮಾಡಿ

ಉಡುಪಿ: ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಆಧಾರದ ಮೇಲೆ ಮತದಾನ ಮಾಡಬೇಕೆಂದಿಲ್ಲ. ವ್ಯಕ್ತಿಗಳ ಸಾಧನೆ ನೋಡಿ ಮತದಾನ ಮಾಡಿ. ಈ ಚುನಾವಣೆಯಿಂದ ಸರ್ಕಾರಗಳು ನಿರ್ಧಾರವಾಗುವುದಿಲ್ಲ. ಹೀಗಾಗಿ ಕರಾವಳಿಯ ಸಮಸ್ಯೆಗಳ ಬಗ್ಗೆ ಅನುಭವ ಇರುವವರನ್ನು ಆಯ್ಕೆ ಮಾಡಿ ಎಂದು ಬಿಜೆಪಿಯ ಉಚ್ಚಾಟಿತ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.‌ ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ಹೇಳುತ್ತೇನೆ. ಆದರೆ ಇದು ವಿಧಾನಪರಿಷತ್ ಚುನಾವಣೆ, ಇಲ್ಲಿ ಪಕ್ಷ ನೋಡಬೇಡಿ ಎಂದರು.ಬಿಜೆಪಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ […]

ಉಪ್ಪುಂದ:ಕಲುಷಿತ ನೀರು ಕುಡಿದು ನೂರಾರು ಮಂದಿ ಅಸ್ವಸ್ಥ

ಉಡುಪಿ: ಕಲುಷಿತ ನೀರು ಕುಡಿದು ನೂರಾರು ಮಂದಿ ಗ್ರಾಮಸ್ಥರು ಅಸ್ವಸ್ಥಗೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಮತ್ತು 7ನೇ ವಾರ್ಡ್ ನಲ್ಲಿ ಕುಡಿಯುವ ನೀರು ಕಲುಷಿತಗೊಂಡಿದೆ. ಇಲ್ಲಿನ ಕಾಸಿನಾಡಿ ಎಂಬಲ್ಲಿರುವ ಟ್ಯಾಂಕ್ ನಿಂದ ಬಿಡಲಾಗುವ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಪರಿಣಾಮ ಕರ್ಕಿ ಕಳ್ಳಿ ಮತ್ತು ಮಡಿಕಲ್ ಎನ್ನುವ ಪ್ರದೇಶದಲ್ಲಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದಾರೆ. ವಾರ್ಡ್ ನ […]