ಉಡುಪಿ: ಬಿಜೆಪಿ ಯುವಮೋರ್ಚಾದಿಂದ ಸದಸ್ಯತ್ವ ಅಭಿಯಾನ
ಉಡುಪಿ: ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ನೇತೃತ್ವದಲ್ಲಿ ಉಡುಪಿ ನಗರದ ಮೀನು ಮಾರುಕಟ್ಟೆ, ರಿಕ್ಷಾನಿಲ್ದಾಣ ಹಾಗೂ ಅಂಗಡಿ ಮುಗ್ಗಟ್ಟುಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರು ಮಿಸ್ ಕಾಲ್ ನೀಡಿ ಬಿಜೆಪಿ ಸದಸ್ಯತ್ವ ಪಡೆದರು.ಯುವಮೋರ್ಚಾ ಪ್ರಭಾರಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾಪು ,ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಶಶಾಂಕ್ ಶಿವತ್ತಾಯ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ, ಉಡುಪಿ […]
ಇತಿಹಾಸ ಪ್ರಸಿದ್ಧ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.03 ರಿಂದ ಅ.12ರ ವರೆಗೆ ಶರನ್ನವರಾತ್ರಿ ಮಹೋತ್ಸವ
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.03 ರಿಂದ ಅ.12ರ ವರೆಗೆ ಶರನ್ನವರಾತ್ರಿ ಮಹೋತ್ಸವ ದೇವರ ಸನ್ನಿಧಿಯಲ್ಲಿ ನಡೆಯಿದೆ. ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರ ದಿವ್ಯ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಸತ್ಕರ್ಮಗಳು, ಸತ್ ಸಂಪ್ರದಾಯದಂತೆ ಸಂಪನ್ನಗೊಳ್ಳಲಿದೆ. ನವರಾತ್ರಿಯ ಕಾರ್ಯಕ್ರಮಗಳು: ದಿನಾಂಕ: 03-10-2024 ಗುರುವಾರ:ಬೆಳಿಗ್ಗೆ 5.30ರಿಂದ ತ್ರಿಕಾಲ ಪೂಜೆಯ ಜೊತೆಯಲ್ಲಿ ವಿಶೇಷ ಅಲಂಕಾರದೊಂದಿಗೆ ಯೋಗ ನಿದ್ರಾ ದುರ್ಗಾ ಪೂಜೆ, ಶೂಲಿನೀ ದುರ್ಗಾ ಹೋಮ. ಬೆಳಿಗ್ಗೆ 8.30ರಿಂದ ಚಂಡಿಕಾ ಹೋಮ – […]
ಅ.3 ರಿಂದ ಅ.12ರ ವರೆಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ.
ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ಶರನ್ನವರಾತ್ರಿ ಮಹೋತ್ಸವವು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. 09-10-2024ನೇ ಬುಧವಾರ ಮೂಲ ನಕ್ಷತ್ರ ದಿನ “ಚಂಡಿಕಾಯಾಗ” ಜರಗಲಿರುವುದು. ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಸ್ವಾಗತ ಬಯಸುವ ಜಯಮ್ಮ ಪಿ., ಕಾರ್ಯನಿರ್ವಹಣಾಧಿಕಾರಿ ಹೆಚ್.ಧನಂಜಯ ಶೆಟ್ಟಿ, ಅಧ್ಯಕ್ಷರು ಹೆಚ್. ಪ್ರಭಾಕರ ಶೆಟ್ಟಿ, ಆನುವಂಶಿಕ ಮುಕ್ತೇಸರರು ಹೆಚ್ಚು ಶಂಭು ಶೆಟ್ಟಿ, ಅನುವಂಶಿಕ ಮುಕ್ತೇಸರರು ಆರ್. ಶ್ರೀನಿವಾಸ ಶೆಟ್ಟಿ, ಅನುವಂಶಿಕ ಮುಕ್ತೇಸರರು ಹಾಗೂ ಊರ ಸಮಸ್ತರು, […]
ಶ್ರೀ ಯಕ್ಷೇಶ್ವರೀ ದೇವಸ್ಥಾನ ಗಾಣಿಗರಬೆಟ್ಟು, ಕೊಲಗೇರಿಯಲ್ಲಿ ಅಕ್ಟೋಬರ್ 3 ರಿಂದ 12 ರ ತನಕ ಶರನ್ನವರಾತ್ರಿ ಉತ್ಸವ
ಉಡುಪಿ:ನವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 12 ರ ತನಕ ಪ್ರತಿದಿನ ಚಂಡಿಕಾ ಪಾರಾಯಣ, ಯಕ್ಷೇಶ್ವರಿ ತಂಡದಿಂದ ಭಜನೆ,ವಿಶೇಷ ಪೂಜೆ ಜರುಗಲಿದ್ದು, ಭಕ್ತಾಧಿಗಳು ಎಲ್ಲಾ ದಿನಗಳಂದು ಆಗಮಿಸಿ,ಶ್ರೀ ದೇವಿಯ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ. ಚಂಡಿಕಾ ಪಾರಾಯಣದ ಸೇವಾಕರ್ತರು: 03-10-2024 ಸಂಜೆಕಾವೇರಿ ನಾರಾಯಣ ರಾವ್ ಮತ್ತು ಮನೆಯವರು 04-10-2024 ಸಂಜೆ ಕಮಲಾಕ್ಷಿ ರಾಘವೇಂದ ಗಾಣಿಗ ಮತ್ತು ಮನೆಯವರು 05-10-2024 ಬೆಳಿಗ್ಗೆಇಂದಿರಾ ಆನಂದ ಗಾಣಿಗ ಮತ್ತು ಮನೆಯವರು ಸಂಜೆ ವಿನುತಾ ಅಶೋಕ್ ಗಾಣಿಗ ಮತ್ತು ಮನೆಯವರು ಸಂಜೆ […]
ಸಂಭ್ರಮದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಕ್ಷಣಗಣನೆ; ಮಧುವಣಗಿತ್ತಿಯಂತೆ ಶೃಂಗಾರಗೊಂಡ ಉಚ್ಚಿಲ
ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿ ಉತ್ಸವವದ ಪ್ರಯುಕ್ತ ಅ. 3ರಿಂದ 12ರವರೆಗೆ ನಡೆಯಲಿರುವ 3ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ’ಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗಿದ್ದು, ಕ್ಷಣಗಣನೆ ಆರಂಭವಾಗಿದೆ.ಶಿಸ್ತುಬದ್ಧವಾಗಿ, ಸಂಪ್ರದಾಯಿಕವಾಗಿ ಹಾಗು ವಿಭಿನ್ನವಾದ ಸಾಂಸ್ಕೃತಿಕ ವೈಭವದೊಂದಿಗೆ ‘ಉಡುಪಿ ಉಚ್ಚಿಲ ದಸರಾ’ವನ್ನು ಆಚರಿಸಲು ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ನೇತೃತ್ವದಲ್ಲಿ ಅಂತಿಮ ತಯಾರಿ ನಡೆಸಲಾಗಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು […]