ಉಡುಪಿ:ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಜೋಡಿ ಚಂಡಿಕಾಯಾಗ ಸಂಪನ್ನ

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ನವರಾತ್ರಿಯ ಪರ್ವಕಾಲದ ಪ್ರಥಮ ದಿನದಂದು ಕದಿರು ಕಟ್ಟುವಿಕೆಯಿಂದ ನವರಾತ್ರಿ ಮಹೋತ್ಸವ ಶುಭಾರಂಭಗೊಂಡಿತು. ಪ್ರಾತಃಕಾಲ ಮಂಗಳವಾದ್ಯ ಸಹಿತವಾಗಿ ಕದಿರನ್ನು ಬರಮಾಡಿಕೊಳ್ಳಲಾಯಿತು. ಪೂಜೆ ನೆರವೇರಿಸಿ ಸಾನಿಧ್ಯಕ್ಕೆ ಕದಿರು ಕಟ್ಟಲಾಯಿತು.ನಂತರ ಕ್ಷೇತ್ರದ ವತಿಯಿಂದ ಬಂದ ಭಕ್ತಾದಿಗಳಿಗೆ ಕದಿರನ್ನು ವಿತರಿಸಲಾಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಆದ್ಯ ಗಣಪತಿಯಾಗ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಹಾಗೂ ಚಂಡಿಕಾ ಯಾಗ, ಹಾಗೂ ದುರ್ಗಾ ಹೋಮಗಳು ಸಂಪನ್ನಗೊಂಡವು.ಸುನಿಲ್ ಪುಷ್ಪಾ ದಂಪತಿಗಳಿಂದ ಹಾಗೂ ಗೀತಾ […]

ಕಾಪು: ಮುಖದಲ್ಲಿ ತಂಪು ಪಾನೀಯದ ಟಿನ್ ಸಿಲುಕಿಕೊಂಡು ಒದ್ದಾಡಿದ ಉಡ; ಉರಗ ತಜ್ಞರಿಂದ ರಕ್ಷಣೆ

ಉಡುಪಿ: ಆಹಾರ ಅರಸಿ ಬಂದ ಉಡವೊಂದರ ಮುಖಕ್ಕೆ ತಂಪು ಪಾನೀಯದ ಟಿನ್ ಸಿಲುಕಿಕೊಂಡಿತ್ತು. ಇದರ ಪರಿಣಾಮ ಕಳೆದ ಎರಡು ದಿನಗಳಿಂದ ಅತ್ತಿಂದಿತ್ತ ಅಲೆಯುತ್ತಿದ್ದ ಉಡವು ತನ್ನ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿತ್ತು. ಕಾಪುವಿನ ದಂಡ ತೀರ್ಥ ನಡಿಕೆರೆ ರತ್ನಕರ ಶೆಟ್ಟಿ ಅವರ ಜಮೀನಿನಲ್ಲಿ ಈ ಘಟನೆ ನಡೆದಿತ್ತು. ಕಾಪುವಿನ ಸ್ಥಳೀಯ ಉರಗ ರಕ್ಷಕ ಪ್ರಶಾಂತ್ ಪೂಜಾರಿ ಹಾಗೂ ಶಿವಾನಂದ ಪೂಜಾರಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಡವನ್ನು ಹಿಡಿದು ಅದರ ಮುಖಕ್ಕೆ ಅಂಟಿಕೊಂಡ ತಂಪು ಪಾನೀಯದ ಟಿನ್‌ಅನ್ನು ಸುರಕ್ಷಿತವಾಗಿ ಬಿಡಿಸಿದರು. […]

ಬೆಳ್ತಂಗಡಿ: ತಲೆ ಮೇಲೆ ದಾರಂದ ಬಿದ್ದು ಪುಟ್ಟ ಬಾಲಕಿ ಮೃತ್ಯು.

ಬೆಳ್ತಂಗಡಿ: ಬೆಳ್ತಂಗಡಿಯ ಪುತ್ತಿಲ ಗ್ರಾಮದ ಕುಂಡಡ್ಕ ಸಮೀಪದ ಕೇರ್ಯಾದ ಕೊನಲೆ ಎಂಬಲ್ಲಿ ತಲೆ ಮೇಲೆ ದಾರಂದ ಬಿದ್ದು ಪುಟ್ಟ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಹಾರೀಸ್ ಮುಸ್ಲಿಯಾರ್ ಮತ್ತು ಅಸ್ಮಾ ದಂಪತಿ ಪುತ್ರಿ, ಕೇರ್ಯಾ ಸರಕಾರಿ ಶಾಲೆಯ 1 ನೇ ತರಗತಿಯ ಅಲ್ಫಿಯಾ (6) ಮೃತ ಬಾಲಕಿ. ಮಗುವಿನ ತಂದೆ ಕುಂಡಡ್ಕದಲ್ಲಿ ನೂತನ ಮನೆಯನ್ನು ನಿರ್ಮಾಣ ಮಾಡುತ್ತಿದ್ದು, ಮನೆಯ ಮುಖ್ಯ ದ್ವಾರಕ್ಕೆ ದಾರಂದ ಜೋಡಿಸಲು ಮನೆಯ ಪಕ್ಕದಲ್ಲಿ ದಾರಂದವನ್ನು ಜೋಡಿಸಿದ್ದರು. ಈ ಸಂದರ್ಭದಲ್ಲಿ ಮಗು ಅದರ […]

ಉಡುಪಿ: ಗಗನಕ್ಕೇರಿದ ತೆಂಗಿನಕಾಯಿ ದರ; ಗ್ರಾಹಕರು ಕಂಗಾಲು

ಉಡುಪಿ: ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿವೆ. ನವರಾತ್ರಿಯ ಹೊಸ್ತಿಲಲ್ಲಿ ತೆಂಗಿನ ದರ ಗಗನಕ್ಕೇರಿದೆ. ಪ್ರತಿ ಕೆಜಿ ತೆಂಗಿನಕಾಯಿಗೆ 50 ರೂಪಾಯಿ ನೀಡಬೇಕಾಗಿದೆ. ಪ್ರತಿಕೂಲ ಹವಾಮಾನ ಹಾಗೂ ರೋಗ ಬಾಧೆಗಳಿಂದ ತೆಂಗಿನ ಇಳುವರಿಗೆ ಹಿನ್ನಡೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ತೆಂಗಿನ ದರ ಮತ್ತಷ್ಟು ಏರುವ ಸಾಧ್ಯತೆಗಳಿವೆ. ತೆಂಗಿನಕಾಯಿಗೆ ಕೆಜಿಗೆ 50 ರೂಪಾಯಿ ತಲುಪಿದ್ದು ಕರಾವಳಿಯಲ್ಲಿ ಇದೇ ಮೊದಲು. ಈವರೆಗೆ ಅತಿಹೆಚ್ಚೆಂದರೆ 42 ರೂಪಾಯಿ ದರ ಇತ್ತು. ಹಿಂದೆಂದೂ ಕಂಡಿರದ ದರ ಏರಿಕೆ ಗ್ರಾಹಕನ್ನು ಕಂಗಾಲು ಮಾಡಿದೆ.ಪ್ರತಿಕೂಲ ಹವಾಮಾನದಿಂದ ತೆಂಗಿನ […]

ವೈಭವದ ‘ಉಡುಪಿ- ಉಚ್ಚಿಲ ದಸರಾ-2024’ ಕ್ಕೆ ವಿದ್ಯುಕ್ತ ಚಾಲನೆ

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ-ಉಚ್ಚಿಲ ದಸರಾ ಮಹೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.ದೇವಸ್ಥಾನದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು. ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರು ಪ್ರತಿಷ್ಠಾಪನಾ ಪೂಜೆ ನೆರವೇರಿಸಿ […]