ಅಂತರಾಷ್ಟ್ರೀಯ ಟೆಕೊಂಡೋ ಚಾಂಪಿಯನ್ ಶಿಪ್ ಕಾರ್ಕಳದ ಪ್ರೀತಮ್ ದೇವಾಡಿಗಗೆ ದ್ವಿತೀಯ ಸ್ಥಾನ

ಕಾರ್ಕಳ: ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡೆ ಆಗಿರುವ ಟೆಕೊಂಡೋ ಸ್ಪರ್ಧೆಯಲ್ಲಿ ಗುಂಡ್ಯಡ್ಕ ದ ಪ್ರೀತಮ್ ದೇವಾಡಿಗ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಎಂಪಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಸುರೇಶ್ ದೇವಾಡಿಗ ಇವರ ಬಳಿ ಟೆಕೊಂಡೋ ಅಭ್ಯಾಸ ಮಾಡುತ್ತಿದ್ದಾರೆ. ಇವರು ಗುಂಡ್ಯಡ್ಕ ಪ್ರೇಮನಾಥ್ ದೇವಾಡಿಗ ಮತ್ತು ಪುಷ್ಪ ದೇವಾಡಿಗ ದಂಪತಿಗಳ ಪುತ್ರ.

ಕುಂದಾಪುರ: ಟಿಪ್ಪ‌ರ್ ಡಿಕ್ಕಿ ಹೊಡೆದು ಬಿಎಸ್ಸಿ ವಿದ್ಯಾರ್ಥಿ ಮೃತ್ಯು.

ಉಡುಪಿ: ಕಾಲೇಜ್ ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪ‌ರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಕ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಎಂದು ಗುರುತಿಸಲಾಗಿದೆ. ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ […]

ಮಂಗಳೂರು: ಫಲ್ಗುಣಿ ನದಿಯಲ್ಲಿ ಈಜಾಡಲು ತೆರಳಿದ್ದ ನಾಲ್ವರಲ್ಲಿ ಇಬ್ಬರು ನೀರುಪಾಲು; ಓರ್ವನ ಮೃತದೇಹ ಪತ್ತೆ.

ಮಂಗಳೂರು: ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ. ಉರ್ವಸ್ಟೋರಿನ ಅನೀಶ್ (19) ಅವರ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಅನೀಶ್ ಅವರ ಮೃತದೇಹವನ್ನು ಬೆಂಗ್ರೆಯ ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ. ಕೊಟ್ಟಾರ ಚೌಕಿಯ ಸುಮಿತ್ (20) ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಿನ್ನೆ ಬೆಳಗ್ಗೆ ಬೆಂಗ್ರೆಯಿಂದ ಮುಳುಗು ತಜ್ಞರು ಆಗಮಿಸಿ ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಮುಳುಗು ತಜ್ಞರೊಂದಿಗೆ […]

ಉಡುಪಿ ಎಪಿಎಂಸಿಯಲ್ಲಿ ನಿಷೇಧಿತ ಚೀನಿ ಬೆಳ್ಳುಳ್ಳಿ ಮಾರಾಟ; ಅಧಿಕಾರಿಗಳಿಂದ ದಾಳಿ

ಉಡುಪಿ: ಕೆಲವು ದಿನಗಳಿಂದ ನಿಷೇಧಿತ ಚೀನೀ ಬೆಳ್ಳುಳ್ಳಿ ಹಾವಳಿ ಹೆಚ್ಚುತ್ತಿದೆ. ಉಡುಪಿ ಎಪಿಎಂಸಿಯಲ್ಲಿಯೂ ಚೀನೀ ಬೆಳ್ಳುಳ್ಳಿ ಪತ್ತೆಯಾಗಿದೆ. ಇಲ್ಲಿನ ಆದಿಉಡುಪಿ ಎಪಿಎಂಸಿ ಗೋದಾಮಿನಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಸಂಗ್ರಹಿಸಿಡಲಾಗಿತ್ತು. ಖಚಿತ ಮಾಹಿತಿ ಪಡೆದ ಉಡುಪಿ ನಗರಸಭೆ ಮುಖ್ಯ ಆಯುಕ್ತ ರಾಯಪ್ಪ ದಿಢೀ‌ರ್ ದಾಳಿ ನಡೆಸಿ 5 ಕ್ವಿಂಟಾಲ್‌ ಬೆಳ್ಳುಳ್ಳಿಯನ್ನು ಪತ್ತೆ ಮಾಡಿದ್ದಾರೆ.ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು. ಚೀನಿ ಬೆಳ್ಳುಳ್ಳಿ ಮಾರಾಟದ ವಿರುದ್ಧಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮಾರಕ ರೋಗಗಳಿಗೆ ಕಾರಣವಾಗುವ ಚೀನಿ ಬೆಳ್ಳುಳ್ಳಿ ಮಾರಾಟಗಾರರ ವಿರುದ್ಧ […]