ಕಾರ್ಕಳ: ಬೈಲೂರಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ; ವ್ಯಕ್ತಿ ಮೃತ್ಯು ‌

ಕಾರ್ಕಳ: ತಾಲೂಕಿನ ಬೈಲೂರಿನಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೆ. 30ರಂದು ಸಂಭವಿಸಿದೆ. ಮೃತರು ಯರ್ಲಪ್ಪಾಡಿಯ ವಸಂತ ಆಚಾರ್ಯ (64). ಇವರು ಬೈಲೂರಿನಲ್ಲಿ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ ಸಂದರ್ಭ ಉಡುಪಿಯಿಂದ ಕಾರ್ಕಳ ಕಡೆ ಸಾಗುತ್ತಿದ್ದ ಲಾರಿ ವಸಂತ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ವಸಂತ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.

ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಉದ್ಘಾಟನೆ.

ಉಪ್ಪೂರು: ರೇಬಿಸ್ ಮಾರಣಾಂತಿಕ ಖಾಯಿಲೆ, ವ್ಯವಸ್ಥಿತ ಹಾಗೂ ಸಂಘಟಿತ ಕಾರ್ಯಕ್ರಮದ ಮೂಲಕ ನಿರ್ಮೂಲನೆ ಸಾಧ್ಯ: ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ಗ್ರಾಮ ಪಂಚಾಯತ್ ಉಪ್ಪೂರು, ಪಶು ಆಸ್ಪತ್ರೆ ಬ್ರಹ್ಮಾವರ, ಪ್ರಾಥಮಿಕ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರ ಕೊಳಲಗಿರಿ, ವಿಚಾರ ವೇದಿಕೆ ಕೊಳಲಗಿರಿ, ಯುವಜನ ಮಂಡಲ ಉಪ್ಪೂರು, ಜನತಾ ವ್ಯಾಯಮ ಶಾಲೆ ಜಾತಾಬೆಟ್ಟು, ಗೆಳೆಯರ ಬಳಗ ಲಕ್ಷ್ಮಿನಗರ, ಸವಿನಯ ಪ್ರೆಂಡ್ಸ್ ಕ್ಲಬ್ ನರ್ನಾಡು, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ, ವಿಶ್ವಾಸ್ ಪ್ರೆಂಡ್ಸ್ ಸಾಲ್ಮರ […]

ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಪದವಿ ಪ್ರದಾನ ಸಮಾರಂಭ

ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಬೆಂಗಳೂರು ಸೆ.27 ರಂದು ತನ್ನ ಮೊದಲ ಬ್ಯಾಚ್ ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಥಿಗಳಿಗೆ ಮೊದಲ ಪದವಿಪ್ರದಾನ ಸಮಾರಂಭದೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿತು. 21 ಪೋಸ್ಟ್ ಗ್ರಾಜ್ಯುಯೇಟ್ ಕಾರ್ಯಕ್ರಮಗಳಿಂದ ಒಟ್ಟು 694 ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು. ಪದವಿಪ್ರದಾನ ಸಮಾರಂಭ ಮೆರವಣಿಗೆಯ ರೆಜಿಸ್ಟ್ರಾರ್ ಡಾ.ಮೆಲ್ವಿನ್ ಕೊಲಾಸೊ ಮತ್ತು ಪರೀಕ್ಷಾ ನಿಯಂತ್ರಕ ಡಾ. ಸಿ ಮೋಹನ ದಾಸ್ ನೇತೃತ್ವ ವಹಿಸಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿ ರೆ. ಡಾ. ವಿಕ್ಟರ್ ಲೋಬೋ ಎಸ್.ಜೆ. ಅವರು ಸಭೆಯನ್ನು ಸ್ವಾಗತಿಸಿದರು. ವಿಶ್ವವಿದ್ಯಾಲಯದ […]

ಉಡುಪಿ: ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಾಜಾರಾಮ್ ತಲ್ಲೂರಿಗೆ ಪ್ರಶಸ್ತಿ ಪ್ರದಾನ.

ಉಡುಪಿ: ಕ್ರಿ.ಶ 1930 ರಲ್ಲಿ ಸ್ಥಾಪನೆಗೊಂಡಿರುವ ಹಿರಿಯ ಸಂಸ್ಥೆಯಾದ ಶಿವಮೊಗ್ಗದ ಕರ್ನಾಟಕ ಸಂಘದ ಈ ಬಾರಿಯ ‘ಎಸ್‌. ವಿ. ಪರಮೇಶ್ವರ ಭಟ್ಟ ‘ ಪುಸ್ತಕ ಪ್ರಶಸ್ತಿಗೆ ಉಡುಪಿಯ ರಾಜಾರಾಮ್ ತಲ್ಲೂರು ಅವರ ಡಾಕ್ಯುಮೆಂಟ್ ಎಂಬ ಅನುವಾದಿತ ಕೃತಿ ಹಾಗೂ ‘ಎಂ. ಕೆ. ಇಂದಿರಾ ‘ ಪುಸ್ತಕ ಪ್ರಶಸ್ತಿಗೆ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರವಿನ ಅರಿವು’ ವಿಮರ್ಶಾಕೃತಿ ಪಾತ್ರವಾಗಿದ್ದು, ಸೆ.28 ರಂದು ಶಿವಮೊಗ್ಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಶರತ್ ಅನಂತಮೂರ್ತಿಯವರು […]

ಉಡುಪಿ: ಅ.2ರಂದು ಬೃಹತ್ ಜಾಥಾ ಮತ್ತು ಜನಜಾಗೃತಿ ಸಮಾವೇಶ

ಉಡುಪಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಬೆಳಿಗ್ಗೆ ಗಂಟೆ 9ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ರಾಜಾಂಗಣದವರೆಗೆ ‘ಬೃಹತ್ ಜನಜಾಗೃತಿ ಜಾಥಾ’ ಹಾಗೂ 11ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ‘ಬೃಹತ್ ಜನಜಾಗೃತಿ ಸಮಾವೇಶ’ ವನ್ನು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹೇಳಿದರು. ಉಡುಪಿ ಜಿಲ್ಲಾ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]