ಭಾವನೆಗೆ ಧಕ್ಕೆ ಆಗದಂತೆ ಮಹಿಷಾ ದಸರಾ ಆಚರಣೆ ಮಾಡಿದರೆ ಸಂತೋಷ

ಉಡುಪಿ: ಚಾಮುಂಡಿ ಬೆಟ್ಟ ಧಾರ್ಮಿಕ ಪ್ರದೇಶವಾಗಿದ್ದು, ಚಾಮುಂಡೇಶ್ವರಿ ತಾಯಿಯನ್ನು ಮಹಿಷಾಸುರ ಮರ್ದಿನಿ ಎಂದು ನಾವು ನಂಬುತ್ತೇವೆ. ಹೀಗಾಗಿ ಈ ಭಾವನೆಗೆ ಧಕ್ಕೆ ಆಗದಂತೆ ಮಹಿಷಾ ದಸರಾ ಆಚರಣೆ ಮಾಡಿದರೆ ನಮಗೆ ಸಂತೋಷ ಎಂದು ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಮೈಸೂರು ಮಹಿಷಾ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆ ಉತ್ತರಿಸಿದ ಅವರು, ನಾನೊಬ್ಬ ಜವಾಬ್ದಾರಿಯುತ ಪ್ರತಿನಿಧಿ. ಸಂವಿಧಾನದಲ್ಲಿ ಯಾವುದೇ ನಂಬಿಕೆಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ. ಮನೆಯಲ್ಲಿ ಯಾವುದೇ ಆಚರಣೆ ಮಾಡಬಹುದು. […]
ಕುಂದಾಪುರ: ಬೈಕುಗಳ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು, ಇಬ್ಬರು ಗಂಭೀರ.

ಕುಂದಾಪುರ ಸೆ.29: ನಗರ ಸಮೀಪದ ಹಂಗಳೂರಿನ ನಸರ್ವಿಸ್ ರಸ್ತೆಯಲ್ಲಿ ಬೈಕುಗಳೆರಡು ಮುಖಾಮುಖಿ ಡಿಕ್ಕಿ ಆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಮೃತಪಟ್ಟ ಬೈಕ್ ಸವಾರ ಕುಂದಾಪುರದ ಬಾಳೆಹಿತ್ತು ನಿವಾಸ ವೆಂಕಟೇಶ್ ಅವರ ಪುತ್ರ ಖಾಸಗಿ ಕಂಪನಿಯೊಂದರ ಉದ್ಯೋಗಿ ಶಶಾಂಕ್ ಮೊಗವೀರ(22). ಶಶಾಂಕ್ ಮೊಗವೀರ ಅವರು ನಿನ್ನೆ ರಾತ್ರಿ 11ರ ವೇಳೆಗೆ ಹಂಗಳೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಮನೆಗೆ ಹಿಂತಿರುಗುವ ಸಮಯದಲ್ಲಿn ಅಪಘಾತ ನಡೆದಿದೆ. […]
ಕಾರ್ಕಳ: ಎದೆ ನೋವಿನಿಂದ ಬಳಲುತ್ತಿದ್ದ ಕೃಷಿಕ ಮೃತ್ಯು.

ಕಾರ್ಕಳ: ತಾಲೂಕಿನ ರೆಂಜಾಳ ಗ್ರಾಮದಲ್ಲಿ ಎದೆನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಕೃಷಿಕ ಶಿವಣ್ಣ (72). ಅವರಿಗೆ ಸೆ.27ರಂದು ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಸಂಬಂಧಿಕರು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆಗೆ ರಾಜ್ಯ ಸರ್ಕಾರ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುವಂತೆ ಯಶ್ಪಾಲ್ ಸುವರ್ಣ ಆಗ್ರಹ.

ಉಡುಪಿ: ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿಯೂ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅವರ ಈ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ […]
ಉದ್ಯೋಗವಕಾಶಗಳು

ಉಡುಪಿ:ಉಡುಪಿ-ಬ್ರಹ್ಮಾವರದ ಹೆಸರಾಂತ ಐಟಿ ಸರ್ವಿಸ್ ಕಂಪೆನಿಯಲ್ಲಿ ಉದ್ಯೋಗ ಅವಕಾಶಗಳು.