ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ

ಉಡುಪಿ: ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ (58) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಉಡುಪಿ: ಗುರುಪ್ರಸಾದ್ ಎ. ಅವರಿಗೆ ಆತ್ಮೀಯ ಬಿಳ್ಕೊಡುಗೆ.

ಉಡುಪಿ: ಸುಮಾರು ಮೂವತ್ನಾಲ್ಕು ವರುಷಗಳಿಂದ, ಮಣಿಪಾಲ ತಾಂತ್ರಿಕ ವಿದ್ಯಾಲಯದ ಇಲೆಕ್ಟಿಕಲ್ ಮೆಂಟೇನೆನ್ಸ್ ವಿಭಾಗದಲ್ಲಿ ಟೆಕ್ನಿಷಿಯನ್ ಆಗಿ ವೃತ್ತಿ ಜೀವನ ಆರಂಭಿಸಿ ಫೋರ್ ಮೆನ್ ಆಗಿ ನಿವೃತ್ತರಾದ ಶ್ರೀ ಗುರುಪ್ರಸಾದ್ ಎ. ಅವರ ಬೀಳ್ಕೊಡುಗೆ ಸಮಾರಂಭ ಇತೀಚಿಗೆ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನೆರವೇರಿತು. ಸಂಸ್ಥೆಯ ನಿರ್ದೇಶಕರಾದ ಕಮಾಂಡರ್ ಅನಿಲ್ ರಾಣ ಹಾಗೂ ಜಂಟಿ ನಿರ್ದೇಶಕರಾದ ಡಾ. ಸೋಮಶೇಖರ ಭಟ್ ಜೊತೆಯಾಗಿ ಸನ್ಮಾನಿಸಿದರು. ಅತಿಥಿಗಳಾಗಿ ಸಂಸ್ಥೆಯ ಮುಖ್ಯ ಭದ್ರತಾ ಅಧಿಕಾರಿ ಶ್ರೀ ಅಶೋಕ್ ರಾವ್ ಹಾಗೂ ವಿಭಾಗದ ಮುಖ್ಯಸ್ಥರಾದ […]
ಉಡುಪಿ:ನವರಾತ್ರಿ ಹಬ್ಬದ ಪ್ರಯುಕ್ತ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನಪ್ರದೇಶಗಳಿಗೆ “ದಸರಾ ದರ್ಶನಿ-2024” ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ಕಾರ್ಯಾಚರಿಸಲಾಗುತ್ತಿದೆ. ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30ಕ್ಕೆ ತಲುಪಿ, 11.00 […]
ಉಡುಪಿ:ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಬೀಚ್ ಸ್ವಚ್ಛತಾ ಕಾರ್ಯಕ್ರಮ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ “ವಿಶ್ವಪ್ರವಾಸೋದ್ಯಮ ದಿನಾಚರಣೆ” ಅಂಗವಾಗಿ ಇಂದು ಕೋಡಿ ಕನ್ಯಾನ (ಡೆಲ್ಟಾ ಬೀಚ್) ಬೀಚ್‌ನಲ್ಲಿ ನಡೆದ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಡಾ.ಕೆ.ವಿದ್ಯಾಕುಮಾರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ ಪೂರಕವಾಗುವ ಚಟುವಟಿಕೆಗಳನ್ನು ಕೈಗೊಳ್ಳುವ ಜೊತೆಗೆ ಸ್ಥಳೀಯಜನರಿಗೆ ಉದ್ಯೋಗ ಅವಕಾಶಗಳು ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರು ಆಕರ್ಷಿತರಾಗುವಂತೆ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕು ಎಂದರು. ಹೊಸ ಬೀಚಿನ ಅಭಿವೃದ್ಧಿಯ ದೃಷ್ಠಿಕೋನದೊಂದಿಗೆ ಕೋಡಿ ಕನ್ಯಾನ ಬೀಚಿನಲ್ಲಿ […]
ಕಟಪಾಡಿ ತ್ರಿಶಾ ವಿದ್ಯಾ ಪಿಯು ಕಾಲೇಜು : ಸಂಸ್ಕೃತ ಉಪನ್ಯಾಸಕರ ಕಾರ್ಯಗಾರ

ಕಟಪಾಡಿ:ಭಾಷೆಗಳ ಅರಿವು ಹೆಚ್ಚುತ್ತಾ ಹೋದಹಾಗೆ ವ್ಯಕ್ತಿ ಪ್ರಭುದ್ಧನಾಗುತ್ತಾನೆ. ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆಯ ಒಲವು ಹೆಚ್ಚಿಸುವ ಕಾರ್ಯ ಶಿಕ್ಷಕರು ಕೈಗೊಳ್ಳಬೇಕು ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿಯ ಸಂಸ್ಕೃತ ಉಪನ್ಯಾಸಕರು ಡಾಕ್ಟರ್ ಮಹೇಶ್ ಕಾಕತ್ಕರ್ ಹೇಳಿದರು. ಇತ್ತೀಚಿಗೆ ಪದವಿಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ , ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ಸಂಸ್ಕೃತ ಭಾಷಾ ವಿಷಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವೇಕ ಪದವಿ ಪೂರ್ವ ಕಾಲೇಜು ಕೋಟದ […]