ಬೈಂದೂರಿನ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ ನಿಧನ

ಉಡುಪಿ: ಬೈಂದೂರಿನ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ (85) ಅವರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ‌ ಅವರು, ಬೆಂಗಳೂರಿನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಇವರು 2008ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸ್ನಾತಕೋತ್ತರ ಪದವಿಧದರಾಗಿರುವ ಇವರು ಉದ್ಯಮಿಯಾಗಿ ಹೆಸರು ಗಳಿಸಿದ್ದರು.

ಉಡುಪಿ:ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ:ಜಿಲ್ಲೆಯಲ್ಲಿ ಸಪ್ಟೆಂಬರ್ 29 ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಜರುಗಲಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೇ ಸುವ್ಯವಸ್ಥಿತವಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚಿಸಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ನಡೆಸುವ ಕನ್ನಡ ಭಾಷೆ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರದಲ್ಲಿ ಮೇಲ್ವಿಚಾರಣೆ ನಡೆಸಲು ನೇಮಕ ಮಾಡಲಾದ […]

ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಧಾರ್ಮಿಕ ಸ್ಥಳಗಳ ವೀಕ್ಷಣೆಗೆಂದು ಜಿಲ್ಲೆಗೆ ಬಂದಿದ್ದ ಕೇರಳ ಮೂಲದ ಜಯ ವಿಜಯನ್(62) ಎಂಬ ವ್ಯಕ್ತಿಯು ಸೆಪ್ಟಂಬರ್ 22 ರಂದು ಕೃಷ್ಣ ಮಠಕ್ಕೆ ತೆರಳಿದ ಸಂದರ್ಭದಲ್ಲಿ ನಾಪತ್ತೆಯಾಗಿರುತ್ತಾರೆ. 167 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಮಲಯಾಳಂ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಉಡುಪಿ: ರಸ್ತೆ ಸುರಕ್ಷತೆ ಮತ್ತು ಜಲಸಾಕ್ಷರತೆ ಬಗ್ಗೆ ಫಲಕ ಉದ್ಘಾಟನೆ.

ಉಡುಪಿ: ಆಮ್ ಕೇರ್ ಕ್ಲಿನಿಕ್, ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಉಡುಪಿ ಇವರುಗಳಿಂದ ಲಕ್ಷ್ಮೀಂದ್ರನಗರದ ಆಮ್ ಕೇರ್ ಕ್ಲಿನಿಕ್ ನ ಮುಂಬಾಗದಲ್ಲಿ ರೋ.ಡಾ.ಸುರೇಶ್ ಶೆಣೈ ಯವರ ಪ್ರಾಯೋಜಕತ್ವದಲ್ಲಿ ರಸ್ತೆಸುರಕ್ಷತೆ ಮತ್ತು ಜಲಸಾಕ್ಷರತೆಬಗ್ಗೆ ಜನಜಾಗೃತಿ ಗಾಗಿ ಹಾಕಿದ ಫಲಕಗಳನ್ನು ರೋಟರಿಗವರ್ನರ್ ರೋ. ಸಿಎ ದೇವಾನಂದರವರು ಉದ್ಘಾಟಿಸಿ ಈವರ್ಷದ ಜಿಲ್ಲಾಯೋಜನೆಯ ಈ ಕಾರ್ಯಕ್ರಮ ಬಹಳ ಸುತ್ಯ ಎಂದು ಹೇಳಿ ಇದನ್ನು ಸಾಕಾರಗೊಳಿಸಿದ ರೋ.ಡಾ.ಸುರೇಶ್ ಶೆಣೈ ಯವರನ್ನು ಅಭಿನಂದಿಸಿದರು. ಮೊದಲಿಗೆ ರೋಟರಿ ಅಧ್ಯಕ್ಷ ರೋ.ಗುರುರಾಜ ಭಟ್ ರು ಎಲ್ಲರನ್ನೂ ಸ್ವಾಗತಿಸಿದರು. […]