ಬೈಂದೂರು: ಕಾರಿನ ಬಾನೆಟ್ ನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಕಾರು ಮಾಲೀಕ
ಉಡುಪಿ: ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾದ ಘಟನೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಬೃಹತ್ ಹೆಬ್ಬಾವು ಕಂಡು ಕಾರು ಮಾಲೀಕ ಬೆಚ್ಚಿಬಿದ್ದಿದ್ದಾರೆ. ಬಡಕೆರೆ ಜೋಯಿಸರಬೆಟ್ಟು ನಿವಾಸಿ ಚಂದ್ರಪ್ರಕಾಶ್ ಶೆಟ್ಟಿ ಎಂಬವರ ಕಾರಿನ ಬಾನೆಟ್ ನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅವರು ಕಾರು ಚಲಾಯಿಸಿಕೊಂಡು ಬರುವಾಗ ಕಾರಿನಲ್ಲಿ ವಿಪರೀತ ಸದ್ದು ಕೇಳಿಸಿದೆ. ಕಾರು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 12ಅಡಿ ಉದ್ದದ ಹೆಬ್ಬಾವೊಂದು ಬಾನೆಟ್ ಒಳಗೆ ತಣ್ಣಗೆ ಮಲಗಿತ್ತು. ಕಾರು ಚಲಾಯಿಸಿಕೊಂಡು ಹೋದಾಗ […]
2024-25 ನೇ ಸಾಲಿನ ಕಲಾರ್ಘ್ಯ ತೆಂಕುತಿಟ್ಟು ಯಕ್ಷಗಾನ ಹಾಗೂ ಭರತನಾಟ್ಯ ಅಭ್ಯಾಸ ತರಗತಿಯ ಶುಭಾರಂಭ
ಉಡುಪಿ:ಪ್ರಾಥಮಿಕ ಹೆಜ್ಜೆಗಳು- ನಾಟ್ಯಗಾರಿಕೆ ಅಭ್ಯಾಸ ಬಣ್ಣಗಾರಿಕೆಯ ವಿಶೇಷ ಕಾರ್ಯಾಗಾರ ಮತ್ತು ಪಾರಂಪರಿಕ ರಂಗನಡೆಗಳ ಅಧ್ಯಯನ ಅಭಿನಯ ಮಾತುಗಾರಿಕೆಯ ತರಗತಿಗಳು ಪೂರ್ವರಂಗ, ಪ್ರಸಂಗಾಧ್ಯಯನದ ವರೆಗಿನ ಸಿದ್ಧತೆ. 04-10-2024 ರಂದು ದಾಖಲಾತಿ ಆರಂಭ.ಸಮಯ:3ರಿಂದ 6ರ ತನಕ. ಯಕ್ಷಗಾನ ಗುರುಗಳು: ಆದಿತ್ಯ ಅಂಬಲಪಾಡಿ 7353144990ಭರತನಾಟ್ಯ ಗುರುಗಳು: ವಿದುಷಿ ಧನ್ಯಶ್ರೀ ಪ್ರಭು 8105104073 ವಿಶೇಷ ಸೂಚನೆ:- ಅಧ್ಯಯನದ ಪರೀಕ್ಷೆಗಳನ್ನು ಏರ್ಪಡಿಸಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ನೀಡಲಾಗುವುದು. ಹೆಸರು ನೊಂದಾಯಿಕೊಳ್ಳಲು ಈ ಕೂಡಲೇ ಸಂಪರ್ಕಿಸಿ:ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ನರಸಿಂಹ ವೇದಿಕೆ, ಜೈ ಹಿಂದ್ ಶಾಲೆಯ ಎದುರು, […]
ಉಡುಪಿ: ಸಚಿವ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇನೆ – ಟಿ.ಜೆ ಅಬ್ರಹಾಂ ಗುಡುಗು
ಉಡುಪಿ: ಸಚಿವ ಜಮೀರ್ ಹೈಕೋರ್ಟ್ ತೀರ್ಪು ಬಗ್ಗೆ ನಾಲಿಗೆ ಹರಿಬಿಟ್ಟದ್ದು ಸರಿಯಲ್ಲ. ಈ ತೀರ್ಪನ್ನು ಪೊಲಿಟಿಕಲ್ ಆದೇಶ ಎಂದು ಹೇಳುತ್ತಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವೆ ಎಂದು ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಗುಡುಗಿದ್ದಾರೆ. ಸಿಎಂ ಕುರಿತ ಹೈಕೋರ್ಟ್ ತೀರ್ಪು ರಾಜಕೀಯಪ್ರೇರಿತ ತೀರ್ಪು ಎಂಬ ಸಚಿವ ಜಮೀರ್ ಹೇಳಿಕೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೈಕೋರ್ಟ್ ತೀರ್ಪು ಬಗ್ಗೆ ಮಾತನಾಡುವುದು ಅಂದರೆ ಹುಡುಗಾಟನಾ?. ರಾಜಕಾರಣದಲ್ಲಿ ಭಾಷಣ ಬಿಗಿದ ಹಾಗೆ ಮಾತನಾಡಿದರೆ ಆಗುತ್ತಾ?. […]
ಬೆಂಗಳೂರಿನ ರಾಯರ ಮಠಕ್ಕೆ 80 ಕೆಜಿ ಬೆಳ್ಳಿಯ ಪುಷ್ಪ ರಥ ನಿರ್ಮಾಣ
ಉಡುಪಿ: ಕೃಷ್ಣನಗರಿಯ ರಥಶಿಲ್ಪಿಗಳಿಗೆ ವಿಶೇಷ ಬೇಡಿಕೆ ಇದೆ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಅನೇಕ ದೇವಾಲಯಗಳಿಗೆ ಉಡುಪಿಯ ಶಿಲ್ಪಿಗಳೇ ಮರದ ಹಾಗೂ ವಿವಿಧ ಲೋಹದ ಅನೇಕ ರಥಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿ ರಾಯರ ಮಠಕ್ಕೆ ಸುಮಾರು 80 ಕೆಜಿ ಬೆಳ್ಳಿಯ ಪುಷ್ಪ ರಥ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇದನ್ನು ಚಂದ್ರಮಂಡಲ ರಥ ಎಂದು ಕರೆಯಲಾಗುತ್ತದೆ. ಈ ರಥವನ್ನು ಉಡುಪಿಯ ಕಬ್ಯಾಡಿ ದೇವರತ್ನ ಶಿಲ್ಪ ಶಾಲೆಯ ಶಿಲ್ಪಿ ಗುರುರಾಜ ಆಚಾರ್ಯ ರವರು ತಮ್ಮ ತಂಡದ ಜೊತೆ ರಚಿಸಿದ್ದಾರೆ. ಸುಮಾರು […]
ಅಯೋಧ್ಯೆಯಲ್ಲಿ ಪೇಜಾವರ ಸ್ವಾಮೀಜಿ ನೇತೃತ್ವದಲ್ಲಿ ರಾಮ ತಾರಕ ಯಜ್ಞ ಸಂಪನ್ನ
ಉಡುಪಿ: ಅಯೋಧ್ಯೆಯಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ರಾಮ ತಾರಕ ಯಜ್ಞ ನಡೆಯುತ್ತಿದೆ. ಚೆನ್ನೈನಲ್ಲಿ ಜಾತುರ್ಮಾಸ್ಯ ವೃತ ಮುಗಿಸಿದ ಬಳಿಕ ಅಯೋಧ್ಯೆಯಲ್ಲಿ ತಂಗಿರುವ ಪೇಜಾವರ ಶ್ರೀಗಳು ಒಂದು ವಾರಗಳ ಕಾಲ ಈ ಯಾಗದಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಉಡುಪಿಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಂಗಳವಾರ ರಾತ್ರಿ ಅಯೋಧ್ಯೆ ತಲುಪಿದ್ದಾರೆ. ಬುಧವಾರ ಬೆಳಿಗ್ಗೆ ಅಲ್ಲಿನ ಪೇಜಾವರ ಮಠದಲ್ಲಿ ಪ್ರಾತಃ ಪೂಜಾವಿಧಿಗಳನ್ನು ಮುಗಿಸಿದ ಬಳಿಕ ಪೇಜಾವರ ಶ್ರೀಗಳೊಂದಿಗೆ ರಾಮಮಂದಿರಕ್ಕೆ ತೆರಳಿ ಶ್ರೀರಾಮದೇವರ […]