ಉಡುಪಿ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ; ಪವರ್ ಕಟ್ ಮಾಡಿದ ಮೆಸ್ಕಾಂ

ಉಡುಪಿ: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಉಡುಪಿ ಹಳೆ ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಉಡುಪಿ ಶಾಸಕರ ಮಧ್ಯಪ್ರವೇಶದ ಬಳಿಕ ತಾತ್ಕಾಲಿಕ ಪುನರ್ ಸಂಪರ್ಕ ನೀಡಿದ ಪ್ರಸಂಗ ನಡೆದಿದ್ದು, ರಾಜ್ಯ ಸರಕಾರ ದಿವಾಳಿಯಾಗಿದೆ ಎಂದು ಶಾಸಕ ಯತ್ಪಾಲ್ ಸುವರ್ಣ ಕಿಡಿಕಾರಿದ್ದಾರೆ. ಬನ್ನಂಜೆಯಲ್ಲಿರುವ ಹಳೆ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಇದ್ದು, ಬಿಲ್ ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೆಸ್ಕಾಂ ತನ್ನ ನಿಯಮ ಪಾಲನೆ ಮಾಡಿತ್ತು. ಪ್ರವಾಸಿ ಮಂದಿರದಲ್ಲಿ ಇಬ್ಬರು […]
ಅಕ್ರಮ ಬುಲ್ ಟ್ರೋಲ್ ಮೀನುಗಾರಿಕೆಗೆ ವಿರೋಧ

ಉಡುಪಿ: ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 40ಕ್ಕೂ ಅಧಿಕ ಬುಲ್ ಟ್ರಾಲ್ ಬೋಟ್ ಗಳನ್ನು ಬೈಂದೂರು ಮೀನುಗಾರರು ಅಡ್ಡಗಟ್ಟಿ ವಾಪಸ್ ಕಳುಹಿಸಿದ ಘಟನೆ ಬೈಂದೂರು ವ್ಯಾಪ್ತಿಯ ಗಂಗೊಳ್ಳಿ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ಬುಲ್ ಟ್ರೋಲ್ ಮೀನುಗಾರಿಕೆಗೆ ನಿಷೇಧವಿದೆ. ನಿರಂತರವ ಬುಲ್ ಟ್ರೋಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಬುಲ್ ಟ್ರೋಲ್ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಆದರೂ ಅನಧಿಕೃತವಾಗಿ ಬುಲ್ ಟ್ರೋಲ್ ಮೀನುಗಾರಿಕೆ ಮಾಡುತ್ತಿದ್ದು, ಇದರಿಂದ ಸಣ್ಣಪುಟ್ಟ ಮೀನುಗಾರರಿಗೆ […]
ಜಾಗ ಮಾರಟಕ್ಕಿದೆ

ಉಡುಪಿ:ನಿಮ್ಮ ಜಾಗವನ್ನು ಹುಡುಕಿ, ನಿಮ್ಮ ಕನಸನ್ನು ನಿರ್ಮಿಸಿ, ಗುರು ಡೆವಲಪರ್ಸ್ ನೊಂದಿಗೆ. ಮೂಡುಬೆಳ್ಳೆ ಮುಖ್ಯ ರಸ್ತೆಯಲ್ಲಿರುವ ವಸತಿ ಬಡಾವಣೆ.(housing estate) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8197035017, ಗುರು ಡೆವಲಪರ್ಸ್ ದುರ್ಗಾ ಕಾಂಪ್ಲೆಕ್ಸ್, ಹಿರಿಯಡಕ, ಉಡುಪಿ. https://www.facebook.com/share/p/b8x1wnwqtXWrUgHt/?mibextid=qi2Omg
ಉಡುಪಿ: ಕಾರ್ಮಿಕರ ನಡುವೆ ಹೊಡೆದಾಟ; ಹಲವರು ಪೊಲೀಸ್ ವಶಕ್ಕೆ

ಉಡುಪಿ: ಉಡುಪಿಗೆ ಕೂಲಿ ಕೆಲಸಕ್ಕಾಗಿ ಹೊರರಾಜ್ಯದಿಂದ ಬಂದ ಕಾರ್ಮಿಕರ ತಂಡವು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ.ನಗರದ ಪುತ್ತೂರು ನಯಂಪಳ್ಳಿ ಸ್ವರ್ಣ ನದಿ ಸೇತುವೆ ಸಮೀಪದ ಎಪಿಜಿ ಲೇಬರ್ ಕಾಲನಿಯಲ್ಲಿ ಗಲಾಟೆ ಮಾಡಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿದ್ದ ತಂಡದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೈಪ್‌ಲೈನ್ ಕಾಮಗಾರಿಗಾಗಿ ಛತ್ತೀಸಗಡದಿಂದ ಉಡುಪಿಗೆ ಬಂದಿದ್ದ ಈ ಯುವಕರು ಯಾವುದೋ ಕಾರಣಕ್ಕೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದು, ಪೊಲೀಸರು ಬರುವಷ್ಟರಲ್ಲಿ ಗಲಾಟೆ ನಿಲ್ಲಿಸಿದ್ದಾರೆ. ಕ್ಷುಲ್ಲಕ […]
ಉಡುಪಿ ಅಪ್ರೆಂಟಿಶಿಪ್ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್), ಬೆಂಗಳೂರು ಇವರ ವತಿಯಿಂದಐ.ಟಿ.ಐ ತೇರ್ಗಡೆ ಹೊಂದಿದ ಫಿಟ್ಟರ್, ಟರ್ನರ್, ಮೆಕ್ಯಾನಿಸ್ಟ್, ಎಲೆಕ್ಟ್ರೀಷಿಯನ್, ವೆಲ್ಡರ್, ಸಿ.ಓ.ಪಿ.ಎ, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂಲ್ ಅಂಡ್ ಡೈ ಮೇಕರ್, ಸಿ.ಎನ್.ಸಿ ಪ್ರೋಗ್ರಾಮ್ಮರ್ ಕಮ್ ಆಪರೇಟರ್‌ನಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರಜತಾದ್ರಿ, […]