ಕಾರ್ಕಳ: ಕಾಲು ಜಾರಿ ಹೊಳೆಗೆ ಬಿದ್ದು ಬಾಲಕ ಮೃತ್ಯು.
ಕಾರ್ಕಳ: ತಾಲೂಕಿನ ಇರ್ವತ್ತೂರು ಗ್ರಾಮದ ಗೊಲ್ದಿಂಡಿ ಎಂಬಲ್ಲಿ ಬಾಲಕನೋರ್ವ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸೆ.21ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಗೊಲ್ದಿಂಡಿ ನಿವಾಸಿ ಪುಷ್ಪಎಂಬವರ ಮಗ ಚರಣ್‌ರಾಜ್(13) ಎಂದು ಗುರುತಿಸಲಾಗಿದೆ. ಸಾಣೂರು ಹೈಸ್ಕೂಲಿ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ, ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ಇತರ ಮಕ್ಕಳ ಜೊತೆ ಆಟ ಆಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದು, ಕೂಡಲೇ ಸಾರ್ವಜನಿಕರು ಆತನನ್ನು ನೀರಿನಿಂದ ಮೇಲಕ್ಕೆ […]
ಕಾರ್ಕಳ: ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ ನಿಧನ.
ಕಾರ್ಕಳ: ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಮುಂಡ್ಕೂರು ವಸಂತ ಶೆಟ್ಟಿ (83) ಸೆ.21 ರಂದು ನಿಧನರಾದರು. ಮುಂಡ್ಕೂರು ಕೃಷ್ಣ ಶೆಟ್ಟಿಯವರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು, ಮುಂಡ್ಕೂರು ಮೇಳದಲ್ಲಿ ಹವ್ಯಾಸಿ ವೇಷಧಾರಿಯಾಗಿ, ಮುಂದೆ ಉದ್ಯೋಗ ನಿಮಿತ್ತ ಮುಂಬಯಿ ಸೇರಿದರು. ಬಳಿಕ ಯಕ್ಷಗಾನಾಸಕ್ತಿಯಿಂದ ಮತ್ತೆ ಊರಿಗೆ ಬಂದು ಕಟೀಲು ಮೇಳ ಸೇರಿದರು. ಬೆಳ್ಮಣ್ಣು ಮತ್ತು ಬಪ್ಪನಾಡು ಮೇಳಗಳಲ್ಲೂ ಕೆಲವು ತಿರುಗಾಟ ಮಾಡಿದ್ದರು. ಪೀಠಿಕಾ ಮತ್ತು ಒಡ್ಡೋಲಗದ ಪಾತ್ರಗಳಿಂದ ಆರಂಭಗೊಂಡ ಇವರ ಯಕ್ಷ ಪಯಣ, ಮುಂದೆ ಹವ್ಯಾಸಿ ಸಂಘ ಸಂಸ್ಥೆಗಳ ಆಟಗಳಲ್ಲಿ […]
ಉಡುಪಿ: ಥಾಮಸ್ ಕುಕ್ ನಲ್ಲಿ ‘ದಿ ಗ್ರ್ಯಾಂಡ್ ಇಂಡಿಯನ್ ಹಾಲಿಡೇ ಸೇಲ್’: ಸೆ.25 ರವರೆಗೆ ಇರಲಿದೆ ಈ ಆಫರ್..!
ಉಡುಪಿ: ಥಾಮಸ್ ಕುಕ್ ನಲ್ಲಿ ಈಗಾಗಲೇ ಸೆ.12 ರಂದು ‘ದಿ ಗ್ರ್ಯಾಂಡ್ ಇಂಡಿಯನ್ ಹಾಲಿಡೇ ಸೇಲ್’ ಆರಂಭಗೊಂಡಿದ್ದು ಸೆ.25 ರವರೆಗೆ ಈ ಆಫರ್ ಇರಲಿದೆ. ಥಾಮಸ್ ಕುಕ್ ಪ್ರವಾಸಿಗರಿಗೆ ಅತ್ಯುತ್ತಮ ಬೆಲೆಯಲ್ಲಿ ಒಳ್ಳೆಯ ಸ್ಥಳಗಳನ್ನು ಹುಡುಕಿ, ಅದನ್ನು ಹೊಂದಿಸುತ್ತವೆ ಹಾಗೂ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ರೂ.20,000 ವರೆಗೆ ತ್ವರಿತ ರಿಯಾಯಿತಿ ನೀಡಲಾಗಿದ್ದು, ಪ್ರವಾಸಿಗರು ರೂ.50,000 ವರೆಗೆ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಸಂಕಾಶ್ ಅವರು ವಿಶೇಷ ಇಎಮ್ಐ ಆಫರ್ ನಡೆಸುತ್ತಿದ್ದು, 0% ಡೌನ್ ಪೇಮೆಂಟ್, […]
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ 14 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ಆಡಳಿತ)ಉಡುಪಿ ಹಾಗೂ ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ನೆಟ್ ಬಾಲ್ ಪಂದ್ಯಾಟ 2024-25, ಇದರಲ್ಲಿ 14ರ ವಯೋಮಾನದ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ರಜತ್(7ನೇ ತರಗತಿ), ಪ್ರವೀಶ್(8ನೇ ತರಗತಿ), ಭರತ್(7ನೇ ತರಗತಿ), ಆಶಿಶ್(8ನೇ ತರಗತಿ) ರಾಜ್ಯಮಟ್ಟಕ್ಕೆ ಆಯ್ಕೆ […]
ದೊಡ್ಡಣಗುಡ್ಡೆಯ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ತಪ್ಪಿದ ಭಾರೀ ದುರಂತ
ಉಡುಪಿ: ದೊಡ್ಡಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಇರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಮಂದಿ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ರೋಗಿಗಳು ಯಾರು ಇರಲಿಲ್ಲ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ತಕ್ಷಣವೇ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.