ಯುವಜನತೆ ಉತ್ತಮ ಭವಿಷ್ಯದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

ಉಡುಪಿ: ಯುವ ಜನತೆ ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೇ, ಶೈಕ್ಷಣಿಕ ಬೆಳವಣಿಗೆಯ ಕಡೆ ಗಮನಹರಿಸುವ ಮೂಲಕ ತಮ್ಮ ಬದುಕು ರೂಪಿಸಲು ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು ಉತ್ತಮ ಭವಿಷ್ಯದ ನಿರ್ಮಾಣದತ್ತ ಹೆಜ್ಜೆ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು. ಅವರು ಶನಿವಾರ ನಗರದ ಅಮೃತ್ ಗಾರ್ಡನ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಲಯನ್ಸ್ ಕ್ಲಬ್ ಅಮೃತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ […]

ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತ್ಯು.

ಮಂಜೇಶ್ವರ: ಮಂಜೇಶ್ವರ ಸಮೀಪದ ಕಡಂಬಾರ್ ಎಂಬಲ್ಲಿ ಆಟವಾಡುತ್ತಿದ್ದ 1ವರ್ಷದ ಮಗು ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಡಂಬಾರ್ ನ ಹ್ಯಾರಿಸ್ ಹಾಗೂ ಕೈರುನ್ನಿಸ ದಂಪತಿ ಯವರ ಒಂದು ವರ್ಷದ ಫಾತಿಮಾ ಎಂಬ ಮಗು ಮನೆಯಲ್ಲಿ ಆಟ ಆಡುತ್ತಾ ಬಾತ್ ರೂಮ್ ಒಳ ಬಂದು ಅಲ್ಲಿ ನೀರು ತುಂಬಿದ ಬಕೆಟ್ ಗೆ ತಲೆ ಹಾಕಿದ ಪರಿಣಾಮ ಉಸಿರುಕಟ್ಟಿ ಮೃತಪಟ್ಟಿರುತ್ತದೆ ಎನ್ನೆಲಾಗಿದೆ.

ಮಂಗಳೂರು: ವಿದ್ಯಾರ್ಥಿಯ ಮರ್ಮಾಂಗ ಹಿಡಿದೆಳೆದ ಸಹಪಾಠಿಗಳು; ಆಸ್ಪತ್ರೆ ದಾಖಲು.

ಮಂಗಳೂರು: ಶಾಲೆಗೆ ಹೋಗುತ್ತಿದ್ದ ಬಾಲಕನ ಮರ್ಮಾಂಗವನ್ನು ಇಬ್ಬರು ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗ ಊದಿಕೊಂಡು ಬಾಲಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಬಾಲಕನ ಮರ್ಮಾಂಗವನ್ನು ಹಿಡಿದೆಳೆದರು:ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷದ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ವಸತಿ ನಿಲಯದಲ್ಲಿ ಶಾಲೆಗೆ ಹೋಗುತ್ತಿದ್ದು ಸೆ.14ರಂದು ರಾತ್ರಿ ವಸತಿ ನಿಲಯದಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಬಳಿಕ ಬಾಲಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ […]

ಉಡುಪಿ: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು.

ಉಡುಪಿ: ಉಡುಪಿ ತಾಲೂಕಿನ ಕೊಡಿಬೆಟ್ಟು ಗ್ರಾ.ಪಂ. ಸದಸ್ಯ ಗಣಪತಿ ಪ್ರಭು (39) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಪತ್ನಿ, 8 ವರ್ಷದ ಪುತ್ರ ಹಾಗೂ 8 ತಿಂಗಳ ಪುತ್ರಿ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಗಣಪತಿ ಪ್ರಭು ಅಂಜಾರು-ಕೊಡಿಬೆಟ್ಟು ಗ್ರಾ.ಪಂ.ನ ಕಾಜರಗುತ್ತು ವಾರ್ಡಿನ ಸದಸ್ಯರಾಗಿದ್ದರು.

ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ವಿವಾದ: ಎಸ್‌ಐಟಿ ತನಿಖೆಗೆ ಆದೇಶ ನೀಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಅಮರಾವತಿ: ತಿರುಪತಿ ಪ್ರಸಾದದಲ್ಲಿ ಕಲಬೆರಕೆ ನಡೆಯುತ್ತಿದೆ ಎಂಬ ಆರೋಪದ ವಿವಾದದ ನಡುವೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಆದೇಶಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.