ಉಡುಪಿ: ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ.

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ವತಿಯಿಂದ ಸರ್ಕಾರಿ ಬಾಲಕಿಯರ ಪ.ಪೂ ಕಾಲೇಜು ಇಲ್ಲಿನ ಎನ್.ಎಸ್.ಎಸ್ ವಿದ್ಯಾಥಿ೯ಗಳಿಗೆ ಸಹಕಾರಿಯಾಗುವಂತೆ ಸುಮಾರು 13 ಸಾವಿರ ರೂ. ಮೊತ್ತದ ಪುಸ್ತಕಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ರವರಿಗೆ ಹಸ್ತಾಂತರಿಸಲಾಯಿತು. ಖ್ಯಾತ ಸಾಹಿತಿ ಕು.ಗೋ ರವರು ಪುಸ್ತಕಗಳನ್ನು ನೀಡಿದ್ದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾ.ಅಧ್ಯಕ್ಷ ರವಿರಾಜ್ ಹೆಚ್.ಪಿ ರವರು ಪುಸ್ತಕಗಳನ್ನು ಹತ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ, ಸಾಹಿತಿ ಸುಧಾ ಅಡುಕಳ, ತಾಲೂಕು ಗೌ. ಕಾರ್ಯದರ್ಶಿ ರಂಜಿನಿ ವಸಂತ್, […]

ಉಡುಪಿ: ತಿರುಮಲ ಸನ್ನಿಧಿಯಲ್ಲಿ ನಡೆದ ಲಡ್ಡೂಪ್ರಸಾದ ಘಟನೆ ಅತ್ಯಂತ ಖಂಡನೀಯ: ಪುತ್ತಿಗೆ ಶ್ರೀ

ಉಡುಪಿ: ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾಕೇಂದ್ರವಾದ ತಿರುಪತಿಯ ಶ್ರೀವೇಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಪ್ರಸಾದವನ್ನು ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಈ ಮೂಲಕ ಬಹು ದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ. ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ […]