ಸಂತೆಕಟ್ಟೆ ರಸ್ತೆ ದುರಸ್ತಿಗಾಗಿ ಹಾಡು ರಚನೆ

ಉಡುಪಿ: ಉಡುಪಿ ಸಂತೆಕಟ್ಟೆಯ ಅಂಡರ್ ಪಾಸ್ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ವಾಹನ ಸವಾರರು ನಿತ್ಯ ಪರದಾಟ ನಡೆಸುತ್ತಿದ್ದಾರೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೀಗ ಸಂತೆಕಟ್ಟೆ ರಸ್ತೆ ಅವ್ಯವಸ್ಥೆ ಕುರಿತು ‘ಮದನ್ ಮಣಿಪಾಲ್’ ಎಂಬವರು ಹಾಡು ರಚಿಸಿದ್ದು, ಅದು ಭಾರೀ ವೈರಲ್ ಆಗಿದೆ. ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಅವ್ಯವಸ್ಥೆಯಿಂದಾಗಿ ಈ ಭಾಗದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದಾಗಿ ಇಲ್ಲಿ ಅಪಘಾತಗಳು ನಡೆದಿದ್ದಕ್ಕೆ ಲೆಕ್ಕವೇ ಇಲ್ಲ. ಹಾಗೆ ಅಪಘಾತಕ್ಕೆ ಈಡಾದವರು ಮದನ್ ಅವರಿಗೆ […]
ಕೋಡಿ: ಕೈರಂಪಣಿ ಬಲೆಗೆ ಬಿದ್ದ ಬೃಹತ್ ಕಡಲಾಮೆಗಳ ರಕ್ಷಣೆ

ಉಡುಪಿ: ಮೀನುಗಾರಿಕೆಯ ವೇಳೆ ಬೃಹತ್ ಗಾತ್ರದ ಕಡಲಾಮೆಗಳೆರಡು ಕೈರಂಪಣಿ ಬಲೆಗೆ ಬಿದ್ದಿದ್ದು, ಮೀನುಗಾರರು ವಾಪಾಸು ಸಾಗರದಾಳಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಕುಂದಾಪುರ ತಾಲೂಕಿನ ಎಂ. ಕೋಡಿ ಸಮೀಪ ಸಮುದ್ರದಲ್ಲಿ ಎರಡು ಕಡಲಾಮೆಗಳು ಮೀನುಗಾರರ ಬಲೆಗೆ ಸೆರೆ ಸಿಕ್ಕಿದ್ದವು. ಬ್ರಹ್ಮಲಿಂಗೇಶ್ವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 40 ಕೆಜಿ, ಭಾರದ ಹಾಗೂ 20 ಕೆಜಿ ತೂಕದ ಎರಡು ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿದ್ದವು. ಬಲೆ ಮೇಲಕ್ಕೆತ್ತಿದ್ದಾಗ ಕಡಲಾಮೆಗಳು ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಮೀನುಗಾರರಾದ ಪ್ರವೀಣ್ […]
ಉಡುಪಿ: FUNKIDZನಲ್ಲಿ ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ.

ಉಡುಪಿ:ಉಡುಪಿ/ಮಣಿಪಾಲ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ ಒಳಾಂಗಣ ಆಟದ ಪ್ರದೇಶ ಮತ್ತು ಮಕ್ಕಳ ಚಟುವಟಿಕೆ ಕೇಂದ್ರವಾದ FUNKIDZನಲ್ಲಿ ಕೆಲಸ ನಿರ್ವಹಿಸಲು ಮಹಿಳಾ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಕೆಲಸದ ಸಮಯ: ಮಧ್ಯಾಹ್ನ 12 ರಿಂದ ರಾತ್ರಿ 8.30ರ ವರೆಗೆ, ಕಂಪ್ಯೂಟರ್ನಲ್ಲಿ ಸಾಮಾನ್ಯ ಜ್ಞಾನ ಹೊಂದಿರಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8317346853
ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ.

ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿಪೂರ್ವ ಶಿಕಯ ಉಲಾಖೆ ಉಡುಪಿ)ಹಾಗೂ ವೆಂಕಟರಮಣ ಪದವಿಪೂರ್ವ ಕಾಲೇಜು ಕುಂದಾಪುರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಬಾಲಕ/ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಕ್ರಮವಾಗಿ, ಸೂರಜ್ ಪೂಜಾರಿ,ಅಕ್ರಮ್ ಯತೀಶ್, ರೋನಿತ್ ಪೂಜಾರಿ, ನವನೀತ್, ಆಕಾಶ್,ಸುಮೀತ್. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ: ರಿಬ್ಬನ್ಸ್ ಆ್ಯಂಡ್ ಬಲೂನ್ಸ್ ನ ಬ್ರಾಂಡೆಡ್ ಕೇಕ್ ಶಾಪ್ ಆ್ಯಂಡ್ ಕೆಫೆಗೆ ಕೂಡಲೇ ಸಿಬ್ಬಂದಿ ಬೇಕಾಗಿದ್ದಾರೆ

ಉಡುಪಿ: ಉಡುಪಿಯ ರಿಬ್ಬನ್ಸ್ ಅಂಡ್ ಬಲೂನ್ಸ್ ನ ಬ್ರಾಂಡೆಡ್ ಕೇಕ್ ಶಾಪ್ ಆ್ಯಂಡ್ ಕೆಫೆಗೆ ಸಿಬ್ಬಂದಿ (staff) ಬೇಕಾಗಿದ್ದಾರೆ.ಉಡುಪಿಯ ಆಸುಪಾಸಿನವರಿಗೆ ಪ್ರಥಮ ಆದ್ಯತೆ. ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಬಹುದು: [email protected] ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9886745555 ವಿಳಾಸ: ರಿಬ್ಬನ್ಸ್ ಅಂಡ್ ಬಲೂನ್ಸ್, ಉಡುಪಿ ಕೋರ್ಟ್ ನ ಎದುರು, ಐಡಿಯಲ್ ಟವರ್, ಗ್ರೌಂಡ್ ಫ್ಲೋರ್, ಕೋರ್ಟ್ ರೋಡ್, ಉಡುಪಿ.