ತಿರುಪತಿ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ.

ತಿರುಪತಿ: ಪ್ರಾಣಿಗಳ ಕೊಬ್ಬು ಬಳಸಿ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ತಿರುಪತಿಯ ಭಕ್ತರ ನಂಬಿಕೆಗೆ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಧಕ್ಕೆ ತಂದಿದೆ ಎಂದು ಟಿಟಿಡಿ ಅಧಿಕಾರಿಗಳು ವಾದಿಸಿದ್ದರು. ಟಿಟಿಡಿ ಮಾಜಿ ಮುಖ್ಯಸ್ಥರು ಚಂದ್ರಬಾಬು ನಾಯ್ಡು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಆರೋಪ ಸತ್ಯ ಎಂಬುದು ಇದೀಗ ಬಂದಿರುವ ಲ್ಯಾಬ್ […]

ಸುಳ್ಯ: ಬಾಲಕಿಯ ಮೇಲೆ‌ ಲೈಂಗಿಕ ದೌರ್ಜನ್ಯ ಆರೋಪ; ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಬಂಧನ.

ಸುಳ್ಯ: ಬಾಲಕಿಯ ಮೇಲೆ‌ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೊ ಪ್ರಕರಣದಲ್ಲಿ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಎಂಬಾತನನ್ನು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕೌನ್ಸಿಲಿಂಗ್ ಸಂದರ್ಭ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಬೆಳ್ಳಾರೆ ಪೊಲೀಸರು ಸೆ.19ರ ಬೆಳಗ್ಗಿನ ಜಾವ ಪ್ರಸಾದ್ ಪಂಗಣ್ಣಾಯನನ್ನು ಆತನ ಮನೆಯಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಪ್ರಸಾದ್ ಪಾಂಗಣ್ಣಾಯ ಕಾಣಿಯೂರು ಸಮೀಪದ […]

ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು,450ಕ್ಕೂ ಅಧಿಕ ಮಂದಿ ಗಾಯ

ಬೈರುತ್‌: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ನಲ್ಲಿ ಒಂದೇ ಬಾರಿಗೆ 1 ಸಾವಿರಕ್ಕೂ ಅಧಿಕ ಪೇಜರ್‌ಗಳನ್ನು ಸ್ಫೋಟಿಸಿದ್ದ ಬೆನ್ನಲ್ಲೇ ಬುಧವಾರ ಮತ್ತೆ 3 ಸಾವಿರ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ವಾಕಿಟಾಕಿ, ವೈರ್‌ಲೆಸ್‌ ರೇಡಿಯೋ ಗಳನ್ನು ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೇಜರ್‌ಗಳನ್ನು ಖರೀದಿಸಿದ್ದ ಸಂದರ್ಭದಲ್ಲೇ ಈ ವಾಕಿ-ಟಾಕಿ ಮತ್ತು ರೇಡಿಯೋಗಳನ್ನೂ ಖರೀದಿಸಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದ್ದು, ಲೆಬನಾನ್‌ ಜನರಲ್ಲಿ ಘಟನೆ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೈರೂತ್‌, […]

ಕಿರಿದಾಗುತ್ತಿದೆ‌ ಮಂಗಳೂರಿನ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

ಮಂಗಳೂರು: ಪಣಂಬೂರು ಕಡಲತೀರ ಚಿಕ್ಕದಾಗುತ್ತಿದೆಯೇ? ಕೆಲವು ವರ್ಷಗಳಲ್ಲಿ ಪಣಂಬೂರು ಕಡಲತೀರದವರು ನೋಡುತ್ತಿರುವ ಪ್ರಕಾರ ಕಡಲ ಕಿನಾರೆ ಹಿಂದಿನಂತಿಲ್ಲ. ಹಿಂದೆ ಸಹಸ್ರಾರು ಮಂದಿ ಓಡಾಡಿಕೊಂಡಿದ್ದ ಬೀಚ್‌ನಲ್ಲಿ ಈಗ ನೂರು ಮಂದಿಗೂ ನಿಲ್ಲಲಾಗುತ್ತಿಲ್ಲ. ಬಹುತೇಕ ಭೂಭಾಗವನ್ನು ಸಮುದ್ರ ಕಬಳಿಸಿಕೊಂಡಿದೆ. ಮಳೆಗಾಲದಲ್ಲಿ ಸಮುದ್ರ ಮಟ್ಟ ಮೇಲೆ ಬರುವುದು ಸಾಮಾನ್ಯವಾದರೂ ಆಗಸ್ಟ್‌ ವೇಳೆ ಮತ್ತೆ ಮಟ್ಟ ಕೆಳಗೆ ಹೋಗುತ್ತದೆ. ಆದರೆ 2-3 ವರ್ಷಗಳಿಂದ ಸೆಪ್ಟಂಬರ್‌ – ಅಕ್ಟೋಬರ್‌ನಲ್ಲೂ ನೀರಿನ ಮಟ್ಟ ಕೆಳಗಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು. ಹಿಂದೆ ಬೀಚ್‌ ಉತ್ಸವ, ಗಾಳಿಪಟ ಉತ್ಸವ ಸಹಿತ […]

ಉಡುಪಿ: ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ (ನಿ) 10 ನೇ ವಾರ್ಷಿಕ ಮಹಾಸಭೆ

ಉಡುಪಿ:ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ 10 ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ದಿನೇಶ ಸಿ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ಜರುಗಿತು. ಸಂಘವು 10 ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು 3,508 ಸದಸ್ಯರನ್ನು ಹೊಂದಿದ್ದು ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ನೀಡಿ ಶೇ.97.36 ಸಾಲ ವಸೂಲಾತಿ ನಡೆಸಿದೆ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು 40.8 ಕೋಟಿ ವ್ಯವಹಾರ ನಡೆದಿದ್ದು ಸಂಘವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಂದಿನ ವರ್ಷಗಳಲ್ಲಿ ಐದು […]