ಪೆರ್ಡೂರು: ಚಿರತೆ ದಾಳಿಗೆ ಸಾಕು ನಾಯಿ ಬಲಿ
ಉಡುಪಿ: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚಿದೆ. ಅದರಲ್ಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳು ಹೆಚ್ಚು ಆತಂಕದಲ್ಲಿದೆ. ನಾಯಿಗಳ ಬೇಟೆಯಾಡುವ ಚಿರತೆ ಹೆಚ್ಚಾಗಿ ಸಾಕುಪ್ರಾಣಿಗಳನ್ನೇ ಟಾರ್ಗೆಟ್ ಮಾಡುತ್ತವೆ. ಉಡುಪಿಯ ಪೆರ್ಡೂರು ಸಮೀಪ ಇತ್ತೀಚೆಗೆ ಚಿರತೆ ದಾಳಿ ನಡೆದಿದೆ. ಪೆರ್ಡೂರು ಗೋರೇಲಿನಲ್ಲಿ ಹರಿನಾರಾಯಣ ಭಂಡಿ ಅವರ ನಿವಾಸದಲ್ಲಿ ಚಿರತೆಯ ಹಾವಳಿಗೆ ಸಾಕು ನಾಯಿ ಬಲಿಯಾಗಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿರತೆ ದಾಳಿಯಿಂದ ಈ ಭಾಗದ ಜನರು ಭಯಭೀತಗೊಂಡಿದ್ದಾರೆ.
ಮಂಗಳೂರಿನಲ್ಲಿ ‘apple iphone’ ಕಂಪೆನಿ ವಿರುದ್ದ ರೊಚ್ಚಿಗೆದ್ದು ಗ್ರಾಹಕರ ಬೃಹತ್ ಪ್ರತಿಭಟನಾ ಜಾಥಾ..!
ಮಂಗಳೂರು: ಆ್ಯಪಲ್ ಐ ಫೋನ್( ‘apple iphone’) ಸರ್ವಿಸ್ ವಿರುದ್ದ ಮಂಗಳೂರಿನಲ್ಲಿ ಗ್ರಾಹಕರು ರೊಚ್ಚಿಗೆದ್ದಿದ್ದು ಕಂಪೆನಿ ವಿರುದ್ದ ಬೀದಿಗಿಳಿದು ಬೃಹತ್ ಪ್ರತಿಭಟನೆಯನ್ನು ಮಾಡಿದ್ದಾರೆ.ಆಪಲ್ ಐ ಫೋನ್ ಸರ್ವಿಸ್ ಸೆಂಟರ್ ವಿರುದ್ಧ ರಿಟೇಲರ್ ಹಾಗೂ ಗ್ರಾಹಕರ ಬೃಹತ್ ಪ್ರತಿಭಟನಾ ಜಾಥಾ ಮಂಗಳವಾರ ನಗರದಲ್ಲಿ ಜರುಗಿತು. ಜ್ಯೋತಿ ಸರ್ಕಲ್ ನಿಂದ ಆಪಲ್ ನ ಸರ್ವಿಸ್ ಸೆಂಟರ್ ಮ್ಯಾಪಲ್ ನ ಎದುರುಗಡೆಯಿಂದ ಕ್ಲಾಕ್ ಟವರ್ ವರಗೆ ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾಕಾರರು ಕ್ಲಾಕ್ ಟವರ್ ಬಳಿ ತಮ್ಮ ಬೇಡಿಕೆಗಳನ್ನು ಕೂಡಲೇ ಪೂರೈಸುವಂತೆ ಸಂಸ್ಥೆಯನ್ನು […]
ಮಂಗಳೂರಿನ ಪಿಲಿಕುಳಕ್ಕೆ ಪೆಂಗ್ವಿನ್, ಅನಕೊಂಡ ತರಿಸುವ ಮಹತ್ವದ ನಿರ್ಧಾರ
ಮಂಗಳೂರು: ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮುಂಬಯಿಯ ಬೈಕುಲಾ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ “ಪೆಂಗ್ವಿನ್’ ಪಕ್ಷಿಯನ್ನು ತರಿಸುವ ಮಹತ್ವದ ನಿರ್ಧಾರವೊಂದು ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ “ಮಾರ್ಶ್ ಮೊಸಳೆ’ಯನ್ನು ಬೈಕುಲಾಕ್ಕೆ ನೀಡಲಾಗುತ್ತದೆ. ಸಾಮಾನ್ಯವಾಗಿ ತಂಪಾದ, ಹಿಮಚ್ಛಾದಿತ ವಾತಾವರಣವಿರುವ ದಕ್ಷಿಣಾರ್ಧ ಗೋಲದಲ್ಲಿ, ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಪೆಂಗ್ವಿನ್‌ಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸುತ್ತವೆ. ಪಿಲಿಕುಳದಲ್ಲಿ ಪೆಂಗ್ವಿನ್‌ಗಳಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾನಿಗಳು ಅಥವಾ ಸಿಎಸ್‌ಆರ್ […]
ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಬೃಹತ್ ಗಾತ್ರದ ಬ್ಲೂವೆಲ್ ಮೀನು!
ಉಡುಪಿ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರ ಬಲೆಗೆ ಬೃಹತ್ ಗಾತ್ರದ ಬ್ಲೂವೆಲ್ ಮೀನು ಬಿದ್ದಿದೆ.ಮೀನುಗಳಲ್ಲಿಯೇ ಅತಿ ಅಪಾಯಕಾರಿಯೆಂದು ಗುರುತಿಸಲ್ಪಟ್ಟಿರುವ ಬ್ಲೂವೆಲ್ ಮೀನು, ಮೀನುಗಾರರಿಗೆ ಕಂಟಕವಾಗಿದೆ. ಆಳ ಸಮುದ್ರ ಮೀನುಗಾರಿಕೆಯ ವೇಳೆ ಮೀನುಗಾರರ ಬೋಟ್ ಗಳಿಗೂ ಈ ಮೀನು ತೊಂದರೆ ಉಂಟುಮಾಡುತ್ತದೆ. ಪರ್ಸಿನ್ ಬೋಟ್ ನ ಬಲೆಗೆ ಸಿಲುಕಿದ ಬ್ಲೂವೆಲ್ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿದರು. ಬಳಿಕ ಮರಳಿ ಸಮುದ್ರಕ್ಕೆ ಬ್ಲೂವೆಲ್ ಮೀನನ್ನು ಬಿಡಲಾಯಿತು.
35ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್: ಉಡುಪಿ ಕರಾಟೆ ವಿದ್ಯಾರ್ಥಿಗಳ ತಂಡ ಫಸ್ಟ್ ರನ್ನರ್ ಅಪ್ ಓವರ್ ಆಲ್ ಚಾಂಪಿಯನ್ ಶಿಪ್.
ಉಡುಪಿ: ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನ ದಲ್ಲಿ ಜರಗಿದ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್ಸ್ ಆಯೋಜಿಸಿದ 35ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ವಿಜೇತರಾದ ಉಡುಪಿಯ ಕರಾಟೆ ಶಿಕ್ಷಕ ಸಂತೋಷ್ ಶೆಟ್ಟಿ ಅವರ ವಿದ್ಯಾರ್ಥಿಗಳ ತಂಡವು ಫಸ್ಟ್ ರನ್ನರ್ ಅಪ್ ಓವರ್ ಆಲ್ ಚಾಂಪಿಯನ್ ಶಿಪ್ ಬಹುಮಾನ ಪಡೆದರು.