ಮೂಡುಬಿದಿರೆ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಮೂಡುಬಿದಿರೆಯ ಹೋಲಿರೋಸರಿ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ಶನಿವಾರ ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಹೋಲಿರೋಸರಿ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನುಪಡೆಯಿತು.

ಉಡುಪಿ: ಸ್ನಾನದ ಕೋಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ.

ಪಡುಬಿದ್ರಿ: ಪಡುಬಿದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊರ್ವ ಮನೆಯ ಬಚ್ಚಲು ಕೋಣೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಬೇಂಗ್ರೆ ನಿವಾಸಿ ಶ್ರೀಧರ ಪೂಜಾರಿ (67)‌. ಸೆ.15ರಂದು ಸಂಜೆಯ ವೇಳೆ ಕುತ್ತಿಗೆಗೆ ನೈಲಾನ್‌ ಹಗ್ಗ ಬಿಗಿದು ಕೊಂಡು ಬಚ್ಚಲು ಕೋಣೆಯಲ್ಲಿ ವಿಷ ಸೇವಿಸಿ ಬಿದ್ದಿದ್ದವರನ್ನು ಮನೆಯವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಸಾವನ್ನಪ್ಪಿದ್ದಾರೆ. ಮನೆಯ ಕೋಣೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಮೃತರಿಗೆ ರಕ್ತದೊತ್ತಡ ಹಾಗೂ ಕಾಲು ನೋವು […]

ಮಂಗಳೂರು:ಲಿವರ್ ದಾನ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಉಪನ್ಯಾಸಕಿ

ಉಡುಪಿ: ಸಂಬಂಧಿಕರೊಬ್ಬರ ಜೀವ ಉಳಿಸಲು ಹೋಗಿ ಉಪನ್ಯಾಸಕಿಯೋರ್ವರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಕುಂದಾಪುರ ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) ಮೃತಪಟ್ಟ ಮಹಿಳೆ. ಇವರು 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಬಯಸಿದ್ದರು. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಸೋಂಕಿಗೆ ತುತ್ತಾಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ‌. ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯರಾಗಿದ್ದರು. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ […]

ಪೆರ್ಡೂರು ದೇವಾಲಯಕ್ಕೆ ಧಕ್ಕೆ ಆಗದಂತೆ ಪರ್ಯಾಯ ಮಾರ್ಗದಲ್ಲಿ ಹೆದ್ದಾರಿ ನಿರ್ಮಿಸಿ; ಹೈಕೋರ್ಟ್ ಸಲಹೆ

ಉಡುಪಿ: ಪೆರ್ಡೂರಿನ ಸಾವಿರ ವರ್ಷಗಳ ಇತಿಹಾಸದ ಅನಂತ ಪದ್ಮನಾಭ ದೇವಾಲಯದ ನಾಗವನ ಹಾಗೂ ವಾಸ್ತು ಪರಿಧಿಗೆ ಧಕ್ಕೆ ಆಗ ದಂತೆ ರಾಷ್ಟ್ರೀಯ ಹೆದ್ದಾರಿ-169ಎ ಕಾಮಗಾರಿ ನಡೆಸಲು ಸಾಧ್ಯವೇ ಎಂದು ಪರಿಶೀಲಿಸಲು ಹೆದ್ದಾರಿ ಇಲಾಖೆಗೆ ಹೈಕೋರ್ಟ್‌ ಸಲಹೆ ನೀಡಿದೆ. ಮಲ್ಪೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪೆರ್ಡೂರು ಭಾಗದಲ್ಲಿ ದೇವಸ್ಥಾನಕ್ಕೆ ತಾಗಿಕೊಂಡು ಹಾದು ಹೋಗುವ ನೀಲನಕ್ಷೆ ತಯಾರಾಗಿದೆ. ಇದನ್ನುಸ್ಥಳೀಯರಾದ ರಂಜಿತ್‌ ಪ್ರಭು ಕೋರ್ಟ್‌ನಲ್ಲಿ ಪ್ರಶ್ನಿಸಿ, ದೇಗುಲಕ್ಕೆ ಧಕ್ಕೆ ಯಾಗುವುದನ್ನು ತಡೆ ಯುವಂತೆ ಮನವಿ ಮಾಡಿದ್ದರು. ಪ್ರಸ್ತುತ ದೇವಸ್ಥಾನದ ಆಡಳಿತ ಮಂಡಳಿಯೂ […]