ಸೆ.20ರಂದು ರಾಜ್ಯಾದ್ಯಂತ “ಪಯಣ್” ಕೊಂಕಣಿ ಚಲನಚಿತ್ರ ತೆರೆಗೆ.

ಮಂಗಳೂರು: ʻಸಂಗೀತ್ ಘರ್, ಮಂಗಳೂರುʼ ಬ್ಯಾನರ್ನಡಿಯಲ್ಲಿ ತಯಾರಾಗಿರುವ ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಸೆ.20ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಮುಹೂರ್ತದಿಂದಲೇ ಕೌತುಕ ಬೆರೆತ ಸೆಳೆತವೊಂದನ್ನು ಬಚ್ಚಿಟ್ಟುಕೊಂಡಂತಿರುವ ಈ ಚಿತ್ರದ ಟೀಜರ್ ಬಿಡುಗಡೆಯಾದದ್ದೇ ಕೊಂಕಣಿ ಚಲನಚಿತ್ರ ಪ್ರೇಮಿಗಳಿಂದ ಪ್ರಸಂಶೆಯ ಸುರಿಮಳೆ ಹರಿದು ಬಂದಿತ್ತು. ಚಲನಚಿತ್ರದ ಟ್ರೇಲರ್‌ಗೂ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ದೊರಕಿತ್ತು. ಈಗಾಗಲೇ ಮಂಗಳೂರು ಮತ್ತು ಪುತ್ತೂರಿನಲ್ಲಿ ಪ್ರೀಮಿಯರ್ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿವೆ ಮತ್ತು ವೀಕ್ಷಕರಿಂದ ಕೊಂಕಣಿ ಚಲನಚಿತ್ರದ ಇತಿಹಾಸದಲ್ಲಿ ʻಪಯಣ್ʼ ಒಂದು ಮೈಲಿಗಲ್ಲು […]

ಗ್ಲೋಬಲ್ ಇನ್‌ಕ್ಯುಬೇಟರ್ ಫಾರ್ ವುಮೆನ್ ನಿಂದ ‘ಡಾ.ಶೆರ್ಲಿ ಎಲ್ ಸಾಲಿನ್ಸ್’ ಅವರಿಗೆ ಪ್ರತಿಷ್ಠಿತ ಮನ್ನಣೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ (KMC) ರೇಡಿಯೊಥೆರಪಿ ಮತ್ತು ಆಂಕೊಲಾಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ. ಶೆರ್ಲಿ ಎಲ್ ಸಾಲಿನ್ಸ್ ಅವರು ಆರೋಗ್ಯ ರಕ್ಷಣೆ ವೃತ್ತಿಪರ ವಿಭಾಗದಲ್ಲಿ ಭಾರತದ ಅಗ್ರ 100 ಮಹಿಳಾ ನವ ಆವಿಷ್ಕಾರಕರಲ್ಲಿ (ಇನ್ನೊವೇಟರ್ )ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ನವದೆಹಲಿಯ ಮಂಡಿ ಹೌಸ್‌ನಲ್ಲಿರುವ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗ್ಲೋಬಲ್ ಇನ್‌ಕ್ಯುಬೇಟರ್ ಫಾರ್ ವುಮೆನ್ (ವುಮೆನ್‌ನೋವೇಟರ್) ಈ ಪ್ರತಿಷ್ಠಿತ ಮನ್ನಣೆಯನ್ನು ನೀಡಿ ಗೌರವಿಸಿದರು. […]

ಉಡುಪಿ: ಗೆಳೆಯರ ಬಳಗ, ಕಾರಂತ ಪುರಸ್ಕಾರ-2024 ಪ್ರಶಸ್ತಿಗೆ ಡಾ.ನಾ.ಮೊಗಸಾಲೆ ಆಯ್ಕೆ

ಉಡುಪಿ: ಗೆಳೆಯರ ಬಳಗ(ರಿ.)ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ, ಕಾರಂತ ಪುರಸ್ಕಾರ – 2024 ಪ್ರಶಸ್ತಿಗೆ ಈ ನಾಡಿನ ಹಿರಿಯ ಸಾಹಿತಿ, ಸಂಘಟಕ, ಕವಿ, ಕಾದಂಬರಿಕಾರ, ಸಾಂಸ್ಕೃತಿಕ ಚಿಂತಕ, ಡಾ. ನಾ. ಮೊಗಸಾಲೆ ಆಯ್ಕೆಯಾಗಿದ್ದಾರೆ. ಅತ್ಯಂತ ಗ್ರಾಮೀಣ ಪ್ರದೇಶವಾದ ಕಾಂತಾವರದಲ್ಲಿ ಕನ್ನಡ ಸಂಘ ಸ್ಥಾಪಿಸಿ ನಿರಂತರ ಚಟುವಟಿಕೆಯ ಮೂಲಕ ವಿಶ್ವ ಭೂಪಟದಲ್ಲಿ ಕಾಂತಾವರವನ್ನು ಗುರುತಿಸುವಂತೆ ಮಾಡಿದ ಡಾ. ಮೊಗಸಾಲೆಯವರ ಸಾಧನೆ […]

ಕಾಪು: ಪೊಲಿಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆ

ಕಾಪು, ಸೆ.17: ಕಾಪು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಾಹಿದ್ ಬಝಾರ್ ಆಯ್ಕೆಯಾಗಿದ್ದಾರೆ. ಪೊಲಿಪು ಜಾಮೀಯ ಮಸೀದಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಆರಿಫ್ ಕಲ್ಯಾಲು, ಉಪಾಧ್ಯಕ್ಷರಾಗಿ ರಹೀಂ ಕಲ್ಯಾ, ಕಾರ್ಯದರ್ಶಿಯಾಗಿ ರಜಬ್ ನೈನ್ ಫ್ಯಾನ್ಸಿ, ಜಂಟಿ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ಸಂಶುದ್ದೀನ್ ಕಲ್ಲಾಪು, ಸಂಘಟನಾ ಕಾರ್ಯದರ್ಶಿಯಾಗಿ ಅಜೀಝ್, ಖಜಾಂಚಿಯಾಗಿ ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಮೊಯ್ದೀನ್ ಮಾಸ್ಟರ್, ರಜಬ್ ಉಮ್ಮರಬ್ಬ, ಮುಹಮ್ಮದ್ ಹಸನ್ ಬಿಡಿ […]

ಕುಂದಾಪುರ: ಮೂಡ್ಲಕಟ್ಟೆ ಎಂಐಟಿಯಲ್ಲಿ ಎಐಎಂಎಲ್ ಮತ್ತು ಡೇಟಾ ಸೈನ್ಸ್ ಕುರಿತು ಮೊದಲ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ.

ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ತನ್ನ ಮೊದಲ ಅಂತರರಾಷ್ಟ್ರೀಯ ಸಮ್ಮೇಳನವನ್ನು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ದತ್ತಾಂಶ ವಿಜ್ಞಾನದ ಕುರಿತು ಹೈಬ್ರಿಡ್ ವಿಧಾನ ದಲ್ಲಿ ಆಯೋಜಿಸಿದ್ದು, ಸಂಸ್ಥೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಎ ಐ ಎಂ ಎಲ್ ವಿಭಾಗ ಮುಖ್ಯಸ್ಥರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಇಂದ್ರವಿಜಯ್ ಸಿಂಗ್, ಸಭೆಯನ್ನುದ್ದೇಶಿಸಿ ಮಾತನಾಡಿ ಎ ಐ ಮತ್ತು ಎಂ ಎಲ್ ದೈನಂದಿನ ಜೀವನಕ್ಕೆ ಹೇಗೆ ಅವಿಭಾಜ್ಯವಾಗುತ್ತಿವೆ […]