ಉಡುಪಿ: ಕುಕ್ಕಿಕಟ್ಟೆಯಲ್ಲಿ ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟಿನೆ

ಉಡುಪಿ: ನಾರಾಯಣ ಗುರುಗಳ ಹೆಸರಿನಲ್ಲಿ ನೂತನ ಸಭಾಭವನ ನಿರ್ಮಿಸಿರುವುದು ಉತ್ತಮ ನಡೆಯಾಗಿದೆ. ಯುತ ಸಂಘಟನೆ, ಸಭಾಭವನ ನಿರ್ಮಾಣದಿಂದ ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇಂದಿರಾನಗರ- ಕುಕ್ಕಿಕಟ್ಟೆ ವತಿಯಿಂದ ಕುಕ್ಕಿಕಟ್ಟೆಯಲ್ಲಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವಲ್ಲಿ ಶ್ರಮಿಸಿದ ನಾರಾಯಣ ಗುರುಗಳ […]
ಮಣಿಪಾಲ: ಮಾಂಟೆಸ್ಸರಿ/ ನರ್ಸರಿ ಟೀಚರ‍್ಸ್ ಟ್ರೈನಿಂಗ್ ಕೋರ್ಸ್’ಗೆ ಸೆಪ್ಟೆಂಬರ್ 30 ಕೊನೆಯ ದಿನ.

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2024-25) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತಿ ಇರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿರುತ್ತದೆ.
ಓಣಂ ಪ್ರಯುಕ್ತ ಇಡ್ಲಿ ತಿನ್ನುವ ಸ್ಪರ್ಧೆ: ಉಸಿರುಗಟ್ಟಿ ವ್ಯಕ್ತಿ ಮೃತ್ಯು..!

ಕೇರಳ: ಕೇರಳದ ಪಾಲಕ್ಕಾಡ್ ನ ವಾಳಯಾರ್ ನಲ್ಲಿ ಓಣಂ ಅಂಗವಾಗಿ ನಡೆದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳೀಯ ಕ್ಲಬ್ ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಮೃತ ಸುರೇಶ್ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಇಡ್ಲಿ ತಿನ್ನುವ ವೇಳೆ ಉಸಿರುಗಟ್ಟಿತು ಮತ್ತು ಅಲ್ಲಿದ್ದವರು ಅವರನ್ನು ರಕ್ಷಿಸಲು ಪ್ರಯತ್ನಿಸಿದರು ಮತ್ತು ಗಂಟಲಲ್ಲಿ ಸಿಲುಕಿದ್ದ ಇಡ್ಲಿಯನ್ನು ಹೊರತೆಗೆದರು ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸುವುದಕ್ಕೂ ಮುನ್ನ ಆತ ಸಾವನ್ನಪ್ಪಿದ್ದರು. ವಾಳಯಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಅಸ್ವಾಭಾವಿಕ […]
ಉಡುಪಿ: ಬೆಡ್‌ಶೀಟ್ ಮಾರುವ ನೆಪದಲ್ಲಿ ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿ ಪರಾರಿ: ಪ್ರಕರಣ ದಾಖಲು

ಉಡುಪಿ: ಬೆಡ್‌ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಪರಾರಿಯಾಗಿರುವ ಘಟನೆ ಸೆ.14ರಂದು ಸಂಜೆ ವೇಳೆ ನಡೆದಿದೆ. ಪಿರ್ಯಾದಿದಾರರಾದ ಕಿರಣ್ ಕಮಾರ್ ಜಿ(56), ಕೆಳಾರ್ಕಳಬೆಟ್ಟು, ಉಡುಪಿ ಇವರ ಸ್ನೇಹಿತ ಪ್ರವೀಣ್ ರವರು ದುಬೈನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಅವರ ತಾಯಿ ಉಡುಪಿಯ ಅಂಬಲಪಾಡಿ ಕಾರ್ತೀಕ್ ಹೋಟೆಲ್ ಎದುರು ಇರುವ ಶ್ಯಾಂ ಸದನದಲ್ಲಿ ವಿನೋದಿನಿ(82) ಎಂಬವರು ಒಂಟಿಯಾಗಿ ವಾಸ ಮಾಡಿಕೊಂಡಿದ್ದು, ಅಪರಿಚಿತ ವ್ಯಕ್ತಿಯು ಬೆಡ್ ಶೀಟನ್ನು ಮಾರುವ ನೆಪದಲ್ಲಿ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ವಿನೋದಿನಿರವರಿಗೆ ಬೆಡ್ […]
ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 15.23 ಕೋ.ರೂ. ನಿವ್ವಳ ಲಾಭ

ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2023-24ನೆ ಸಾಲಿನಲ್ಲಿ 15.23ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ.ಉಡುಪಿ ಅಜ್ಜರಕಾಡು ಪುರಭವನದಲ್ಲಿ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 18,309 ಸದಸ್ಯರಿಂದ 4.77ಕೋಟಿ ರೂ. ಪಾಲು ಬಂಡವಾಳ […]