ನಾಳೆ (ಸೆ.17)ಉಡುಪಿಯಲ್ಲಿ “ಎಕ್ಸ್ ಫೀನೋ” ಶ್ರೇಷ್ಠತಾ ಕೇಂದ್ರ ಉದ್ಘಾಟನೆ

ಉಡುಪಿ: ತಾಂತ್ರಿಕ ಉದ್ಯೋಗ ನೇಮಕಾತಿ ಸಂಸ್ಥೆ “ಎಕ್ಸ್ ಫೀನೋ” (Xpheno) ಇದರ ರಾಜ್ಯದ ಎರಡನೇ ಹಾಗೂ ಕರಾವಳಿಯ ಪ್ರಪ್ರಥಮ “ಎಕ್ಸ್ ಫೀನೋ ಶ್ರೇಷ್ಠತಾ ಕೇಂದ್ರ” ಉಡುಪಿಯ ಕುಂಜಿಬೆಟ್ಟುವಿನಲ್ಲಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭ ನಾಳೆ (ಸೆ.17) ನಡೆಯಲಿದೆ ಎಂದು ಸಹ ಸ್ಥಾಪಕ ಐರೋಡಿ ಕಮಲ್ ಕಾರಂತ್ ಹೇಳಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ-ಮಂಗಳೂರು ಪ್ರದೇಶದ ಪ್ರತಿಭಾವಂತರಿಗೆ ಉದ್ಯೋಗಾವಕಾಶದ ಬಗ್ಗೆ ಮಾರ್ಗದರ್ಶನ ನೀಡಲಿದೆ. ಸಂಸ್ಥೆಯು ಸ್ಥಳೀಯ ಪ್ರತಿಭಾವಂತರನ್ನು ತರಬೇತಿಗೊಳಿಸಿ ಜಾಗತಿಕ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಿಕೊಡಲಿದೆ […]

ಉಡುಪಿ: ಸೈಂಟ್ ಮೇರೀಸ್ ದ್ವೀಪ ಪ್ರಯಾಣ ಆರಂಭ; 4 ತಿಂಗಳ ನಿರ್ಬಂಧ ತೆರವು

ಉಡುಪಿ: ರಾಜ್ಯದ ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್ ಮೇರೀಸ್ ದ್ವೀಪಯಾನಕ್ಕೆ ಹೇರಲಾಗಿದ್ದ ಪ್ರವೇಶ ನಿರ್ಬಂಧ ತೆರವುಗೊಂಡಿದ್ದು, ಸೆಪ್ಟೆಂಬರ್ 15ರಿಂದ ಮತ್ತೆ ದ್ವೀಪಯಾನ ಆರಂಭಗೊಂಡಿದೆ. ಮಳೆಗಾಲದಲ್ಲಿ 4 ತಿಂಗಳ ಕಾಲ ಸೈಂಟ್ ಮೇರೀಸ್ ದ್ವೀಪ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಅದರ ಅವಧಿ ಮುಗಿದಿದೆ. ಮಲ್ಪೆ ಬೀಚ್ ನಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ ಎಂದು ಪ್ರತಿವರ್ಷ ಮೇ 15ರಿಂದ ಸೆಪ್ಟೆಂಬರ್ 14ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ. ಮಲ್ಪೆ […]

ಕಲ್ಜಿಗ ಸಿನಿಮಾಕ್ಕಲ್ಲ, ಕೊರಗಜ್ಜ ದೈವದ ದೃಶ್ಯಕ್ಕೆ ನಮ್ಮ ವಿರೋಧ: ಸಹನಾ‌ ಕುಂದರ್

ಉಡುಪಿ: ಕಲ್ಜಿಗ ಸಿನಿಮಾದಲ್ಲಿ ಬರುವ ಕೊರಗಜ್ಜ ದೈವದ ದರ್ಶನದ ದೃಶ್ಯಕ್ಕೆ ನಮ್ಮ ವಿರೋಧವೇ ವಿನಾಃ ಕಲ್ಜಿಗ ಸಿನಿಮಾಕ್ಕೆ ನಮ್ಮ ವಿರೋಧವಿಲ್ಲ ಎಂದು ಮಂಗಳೂರು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆಯ ಸಹನಾ ಕುಂದರ್ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾದ ನಾಯಕ ನಟ, ನಿರ್ದೇಶಕ ಅಥವಾ ಇನ್ನುಳಿದ ಯಾವುದೇ ನಟ, ತಂತ್ರಜ್ಞರ ಬಗ್ಗೆ ಟಾರ್ಗೆಟ್ ಇಲ್ಲ. ಯಾರನ್ನೂ ನಾವು ಟೀಕೆ ಕೂಡ ಮಾಡ್ತಿಲ್ಲ. ಸಿನಿಮಾದಲ್ಲಿ ಬರುವ ಹತ್ತು ನಿಮಿಷದ ಕೊರಗಜ್ಜ ದೈವದ ದೃಶ್ಯವನ್ನು ತೆಗೆಯುವಂತೆ […]

ತ್ರಿಶಾ ಕ್ಲಾಸಸ್ : ಸಿಎಸ್ಇಇಟಿ 14 ದಿನಗಳ ರಿವಿಷನ್ ತರಗತಿಗಳು

ಉಡುಪಿ: ಸಿ ಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 26 ವರ್ಷಗಳಿಂದ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ನವೆಂಬರ್ ತಿಂಗಳಲ್ಲಿ ಸಿಎಸ್ಇಇಟಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ರಿವಿಷನ್ ತರಗತಿಗಳು ಸೆ. 30 ರಿಂದ ಆರಂಭವಾಗಲಿದೆ. ತರಗತಿಯ ವೈಶಿಷ್ಟ್ಯತೆಗಳು ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜು ಮತ್ತು ಮಂಗಳೂರು ಅಳಕೆಯ ಶ್ರೀನಿಧಿ ಕಾಂಪ್ಲೆಕ್ಸ್ ನ 2ನೇ ಮಹಡಿಯಲ್ಲಿರುವ ತ್ರಿಶಾ ಕ್ಲಾಸಸ್ […]

ಚಿಕ್ಕಮಗಳೂರು: ಪ್ಯಾಲೆಸ್ಟೈನ್ ಬಾವುಟ ಹಿಡಿದು ಬೈಕ್ ನಲ್ಲಿ ಸಂಚರಿಸುತ್ತಿದ್ದ 6 ಅಪ್ರಾಪ್ತ ಯುವಕರ ಬಂಧನ.

ಚಿಕ್ಕಮಗಳೂರು: ನಗರದಲ್ಲಿ ಪ್ಯಾಲೆಸ್ಟೈನ್ ಬಾವುಟ ಹಿಡಿದು ಎರಡು ಬೈಕ್‌ನಲ್ಲಿ ಆರು ಜನ ಅಪ್ರಾಪ್ತ ಯುವಕರು ಸಂಚರಿಸಿದ್ದು, ಸದ್ಯ ಅವರೆಲ್ಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಮಾಹಿತಿ ನೀಡಿದ್ದು ಭಾನುವಾರ ನಗರದ ದಂಟರಮಕ್ಕಿ ಕೆರೆ ಏರಿ ಮೇಲಿನ ರಸ್ತೆಯಲ್ಲಿ ಬಾವುಟ ಹಿಡಿದು ಫ್ರೀ ಪ್ಯಾಲೆಸ್ಟೈನ್ ಎಂದು ಘೋಷಣೆ ಕೂಗಿಕೊಂಡು ಬೈಕ್ ಮತ್ತು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದರು. ಎಲ್ಲರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರೆಲ್ಲರೂ ಅಪ್ರಾಪ್ತರು. ಜತೆಗೆ ಬಾವುಟ ಮತ್ತು ದ್ವಿಚಕ್ರ […]