ತಕ್ಷಣ ಬೇಕಾಗಿದ್ದಾರೆ
ನೇಜಾರಿನಲ್ಲಿ ಹಿಂದೂ ಬಾಂಧವರಿಂದ ತಂಪು ಪಾನೀಯ ವಿತರಣೆ
ಉಡುಪಿ: ನೇಜಾರು ಜಾಮೀಯ ಮಸೀದಿ ವತಿಯಿಂದ ನಡೆದ ಈದ್ ಮಿಲಾದ್ ರ‌್ಯಾಲಿಯಲ್ಲಿ ಹಿಂದೂ ಭಾಂಧವರು ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಕೋಮುಸೌಹಾರ್ದತೆಯನ್ನು ಮೆರೆದರು. ಮಸೀದಿಯಿಂದ ಹೊರಟ ರ್ಯಾಲಿಯು ಸಂತೆಕಟ್ಟೆ, ಕಲ್ಯಾಣಪುರ ತಲುಪಿ, ಅಲ್ಲಿಂದ ವಾಪಾಸ್ಸು ನಿಡಂಬಳ್ಳಿ ಮಾರ್ಗವಾಗಿ ನೇಜಾರು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಸುಮಾರು ಐದು ಕಿ.ಮೀ. ಉದ್ದ ಸಾಗಿ ಬಂದ ಮೆರವಣಿಗೆ ಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ, ನೇಜಾರು ಮಸೀದಿ ಅಧ್ಯಕ್ಷ ಅಯ್ಯುಬ್ ಸಾಹೇಬ್, ಖತೀಬ್ ಉಸ್ಮಾನ್ ಮದನಿ, […]
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ
ಉಡುಪಿ: ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಜನ್ಮ ದಿನಾಚರಣೆ ಮಿಲಾದುನ್ನಬಿಯನ್ನು ಸೋಮವಾರ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕಾಪು, ಉಚ್ಚಿಲ, ಮೂಳೂರು, ಪಡುಬಿದ್ರೆ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ದೊಡ್ಡಣಗುಡ್ಡೆ, ಕುಂದಾಪುರ ಕೋಡಿ ಸೇರಿದಂತೆ ಹಲವು ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ವಾಪಾಸ್ಸು ಮಸೀದಿಗಳಿಗೆ ಆಗಮಿಸುವ ಮೂಲಕ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ ಸಂದೇಶ ಸಾರುವ ಹಾಡು ಗಳು, ದಫ್ ಕುಣಿತ, ಸ್ಕೌಟ್ […]
ಕುಂದಾಪುರ: ಚಡ್ಡಿ ಮತ್ತು ಬನಿಯನ್ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ
ಉಡುಪಿ: ಕುಂದಾಪುರದ ಕೋಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಡ್ಡಿ ಮತ್ತು ಬನಿಯನ್ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಆತನನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಂದಾಪುರ ತಾಲೂಕಿನ ಕೋಡಿ ಭಾಗದ ಫಿಶರೀಸ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ರಿಂದ 35 ವರ್ಷ ವಯಸ್ಸಿನ ಯುವಕ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಇದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು […]
ಉಡುಪಿ:ಬೇಕ್ ದಿ ಬ್ರೈನ್ಸ್ (Bake the Brains)ಯೆಂಬ ಬೇಕರಿ ಹಾಗೂ ಆಹಾರೋದ್ಯಮ ಕ್ಷೇತ್ರದ ಅವಕಾಶ ಮತ್ತು ತರಬೇತಿ ಕಾರ್ಯಕ್ರಮ
ಉಡುಪಿ:25th ಸೆಪ್ಟಂಬರ್ 2024 ರಂದು ಬುಧವಾರ ಸಂಜೆ 3.30 ರಿಂದ 7.30 ರವರೆಗೆ ಬೇಕ್ ದಿ ಬ್ರೈನ್ಸ್ (Bake the Brains.)ಯೆಂಬ ಬೇಕರಿ ಹಾಗೂ ಆಹಾರೋದ್ಯಮ ಕ್ಷೇತ್ರದ ಅವಕಾಶ ಮತ್ತು ತರಬೇತಿ ಕಾರ್ಯಕ್ರಮವನ್ನು, 1.ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ (ರಿ). (Udupi District Bakery & Food Manufacturer & Sellers ಅಸೋಸಿಯೇಷನ್.) 2.ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ. (CFTRI – Central Food Technological Research […]