ಉಡುಪಿ: ಕುಂಜಿಬೆಟ್ಟು ಶ್ರೀ ಕೃಷ್ಣ ಪ್ರಜ್ಞಾ ಪ್ರತಿಷ್ಠಾನದಲ್ಲಿ ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ
ಉಡುಪಿ:ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯು ಕುಂಜಿಬೆಟ್ಟು ಶ್ರೀ ಕೃಷ್ಣ ಪ್ರಜ್ಞಾ ಪ್ರತಿಷ್ಠಾನದಲ್ಲಿ 14.09.2024 ರಂದು ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಸತ್ಯಪ್ರಸಾದ್ ಶೆಣೈ, ಮಾತನಾಡಿ, ಸಂಘವು 11,95,385.71ರೂ, ನಿವ್ವಳ ಲಾಭ ಗಳಿಸಿ ಶೇ.9 ಡಿವಿಡೆಂಡ್ ಘೋಷಿಸಿದರು.ಸಂಸ್ಥೆಯು ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ.ನಮ್ಮ ಸಹಕಾರಿಯ ಸದಸ್ಯರಾದ ಶ್ರೀಮತಿ ಡಾ.ಉಷಾ ಎಚ್ ಇವರು ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ಹರೀಶ್ ಪ್ರಭು ನಿರ್ದೇಶಕರಾದ ಸಂಜೀವ ಪ್ರಭು […]
ಪದವಿಪೂರ್ವ ಕಾಲೇಜುಗಳ ಮೂಡುಬಿದಿರೆ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಆಳ್ವಾಸ್‌ಗೆ ಅವಳಿ ಪ್ರಶಸ್ತಿ
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ರೋಟರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ಸೋಮವಾರ ನಡೆದತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜು ತಂಡವನ್ನು 2-0 ಅಂತರದಿಂದಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ರೋಟರಿ ಪದವಿ ಪೂರ್ವ ಕಾಲೇಜಿನ ತಂಡವನ್ನು 2-1 ಅಂತರದಿಂದ ಸೋಲಿಸಿಪ್ರಶಸ್ತಿಯನ್ನು ಪಡೆಯಿತು.
ಕುಂದಾಪುರ: ಯೋಗಾಸನ ಸ್ಪರ್ಧೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.
ಕುಂದಾಪುರ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ವಿದ್ಯೋದಯ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸೆ. 13 ರಂದು ಆಯೋಜಿಸಿದ ಪದವಿಪೂರ್ವ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ಮೂವರು ವಿದ್ಯಾರ್ಥಿಗಳು ನಿರೀಕ್ಷಾ, ತನ್ವಿತಾ ಹಾಗೂ ಪ್ರಜ್ಞಾ ಜಿಲ್ಲಾ ಮಟ್ಟದಲ್ಲಿ ಪ್ರಥಯ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬಂಟಕಲ್ ಕಾಲೇಜಿನಲ್ಲಿ “ ರಾಷ್ಟ್ರ ಮಟ್ಟದ 36 ಗಂಟೆಗಳ ಹ್ಯಾಕೋತ್ಸವ” ಉದ್ಘಾಟನೆ
ಬಂಟಕಲ್:ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಇನ್ನೋವೇಶನ್ ಘಟಕ, ಐಎಸ್‌ಟಿಇ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ರಾಷ್ಟ್ರಮಟ್ಟದ 36 ಗಂಟೆಗಳ ಹ್ಯಾಕೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ 11 ಸೆಪ್ಟೆಂಬರ್ 2024 ರಂದು ನಡೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇರ‍್ವ ಭಟ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿ ಉದ್ಯೋಗವಕಾಶವನ್ನು ಪಡೆದುಕೊಳ್ಳಲು ನೆರವಾಗುತ್ತದೆ ಎಂದರು. ಸಂಸ್ಥೆಯ ಉಪ […]
ಇಂಜಿನಿಯರ್ಸ್ ದಿನಾಚರಣೆಯ ಶುಭಾಶಯಗಳು.
ಇಂಜಿನಿಯರ್ಸ್ ದಿನಾಚರಣೆಗೆ ನಾಡಿನ ಗಣ್ಯರಿಂದ ಶುಭ ಹಾರೈಕೆ. ಉಡುಪಿ: ಭಾರತದಲ್ಲಿ ಸೆಪ್ಟಂಬರ್ 15ರಂದು ಪ್ರತಿವರ್ಷ ಇಂಜಿನಿಯರ್‌ಗಳ ದಿನ’ ಆಚರಿಸಲಾಗುತ್ತದೆ. ಇಂದು ಇಂಜಿನಿಯರ್ ದಿನಾಚರಣೆಯ ಪ್ರಯುಕ್ತ ನಾಡಿನ ಗಣ್ಯರು ಶುಭವನ್ನು ಹಾರೈಸಿದ್ದಾರೆ.