ಉಡುಪಿ: ಪ್ರಜಾಪ್ರಭುತ್ವದ ಸಂದೇಶ ಸಾರಿದ ಬೃಹತ್ ಮಾನವ ಸರಪಳಿ; ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿ

ಉಡುಪಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ಉಡುಪಿ ಜಿಲ್ಲೆಯ ಗಡಿಭಾಗಗಳಾದ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ನಿಂದ ಕಾಪು ತಾಲೂಕಿನ ಹೆಜಮಾಡಿ ಸೇತುವೆ ವರೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಮಾರು 107 ಕಿ. ಮೀ ಉದ್ದದ ಮಾನವ ಸರಪಳಿ ರಚನೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರಸ್ಪರ ಕೈಯನ್ನು ಹಿಡಿದುಕೊಂಡು ಮಾನವ ಸರಪಳಿ ರಚಿಸಿದರು. ಉಡುಪಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಆಯೋಜಿಸಿದ ಜಿಲ್ಲಾಮಟ್ಟದ […]

ಇಂಡೋನೇಷ್ಯಾದ ಜಖಾರ್ತಾದಲ್ಲಿ ಗಣೋಶೋತ್ಸವ ಆಚರಣೆ

ಉಡುಪಿ: ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂಡೋನೇಷ್ಯಾದ ರಾಜಧಾನಿ ಜಖಾರ್ತಾದಲ್ಲಿ ಐದು ದಿನಗಳ ಕಾಲ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಯಿತು. ಸಾವಿರಾರು ಭಾರತೀಯರು ಜಕಾರ್ತದಲ್ಲಿ ಉದ್ಯೋಗ ಮಾಡಿಕೊಂಡಿದ್ದು, 2,000ಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಳೆದ 13 ವರ್ಷಗಳ ಹಿಂದೆ ಗಣೇಶ ಚತುರ್ಥಿಯನ್ನು ಕಾರ್ಕಳ ತಾಲೂಕು ಹೊಸ್ಮಾರು ಮೂಲದ ಸುಧಾಕರ ಶೆಟ್ಟಿಯವರು ಆರಂಭ ಮಾಡಿದ್ದರು. ಭಾರತೀಯರ ಆಚರಣೆಯಲ್ಲಿ ಇಂಡೋನೇಷ್ಯಾದ ಪ್ರಜೆಗಳು ಸುತ್ತಮುತ್ತಲ ದೇಶಗಳಿಂದ ಉದ್ಯೋಗ ನಿಮಿತ್ತ ಬಂದವರು ಭಾಗಿಯಾದರು. ಗಣೇಶ ಮೂರ್ತಿಯನ್ನು ಭಾರತದಿಂದ […]

ಉಡುಪಿ: ‘ರಿಲಯನ್ಸ್ ಕ್ಯಾಪಿಟಲ್’ನಲ್ಲಿ ಪದವೀಧರ ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಉಡುಪಿ ರಿಲಯನ್ಸ್ ಕ್ಯಾಪಿಟಲ್ (Reliance Capital) ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ವೇತನ: ತಿಂಗಳಿಗೆ 22,000 ದಿಂದ 32,000 ಜೊತೆಗೆ ಪಿಎಫ್, ಇಎಸ್ಐ ಹಾಗೂ ಫ್ಯಾಮಿಲಿ ಇನ್ಸೂರೆನ್ಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಚೇರಿ ಸಮಯ: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ.ಆಸಕ್ತರು ಕೂಡಲೆ ಸಂಪರ್ಕಿಸಿ: 9343349670