ಉಡುಪಿ: ಮೂರೂವರೆ ವರ್ಷದ ಮಗುವಿಗೆ ಬಾಸುಂಡೆ ಬರುವ ಹಾಗೆ ಹಲ್ಲೆ; ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 3 ವರ್ಷ 9 ತಿಂಗಳ ಮಗುವನ್ನು ಪೋಷಕರು ಗುರುವಾರ ಬೆಳಿಗ್ಗೆ ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತಂದಿದ್ದರು. ಮಗುವಿಗೆ ಹುಷಾರಿಲ್ಲ ಎಂದು ಚಿಕಿತ್ಸೆ ಕೊಡಿಸಲು ಕರೆ ತಂದಿದ್ದ ತಾಯಿ ಮಗುವಿನ ಮೈ ಮೇಲೆ ತೀವ್ರ ತರಹದ ಗಾಯ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಡಿಹೆಚ್‌ಓ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. […]
ಉಡುಪಿ:ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗತನು ತರ್ಪಣ ಮಂಡಲ ಸೇವೆ ಸಂಪನ್ನ
ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸರಪೋಜಿತ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲೆಯದ ಶ್ರೀ ನಾಗರಾಜ ನಾಗರಾಣಿಯರ ಸನ್ನಿಧಾನದಲ್ಲಿ ಬಹು ವಿಶೇಷವಾದ ನಾಗತನು ತರ್ಪಣಾ ಮಂಡಲ ಸೇವೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ಬಹು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಆ ಪ್ರಯುಕ್ತ ನಾಗಾಲಯದಲ್ಲಿ ಲೋಕಕಲಶ ಪ್ರಧಾನ ಹೋಮ ಕೆಲಸ ಅಭಿಷೇಕ ಸುಬ್ರಮಣ್ಯದ ಸನ್ನಿಧಾನದಲ್ಲಿ ಪವಮಾನ ಸೂಕ್ತ ಕಲಶಾಭಿಷೇಕ ಪ್ರಸನ್ನ ಪೂಜೆಗಳು ನೆರವೇರಿತು.. ಸಂಜೆ ಸಾಮೂಹಿಕ […]
ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರಿಗೆ ‘ಪಾರ್ತಿಸುಬ್ಬ ಪ್ರಶಸ್ತಿ’
ಉಡುಪಿ: ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ ಎಂದರು. 2023ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಗವತರಾದ ದಿನೇಶ್ ಅಮ್ಮಣ್ಣಾಯ, ನಾರಾಯಣಪ್ಪ […]
ಉಡುಪಿ “ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್” ನಲ್ಲಿ ಶ್ರವಣ ಸಂಬಂಧಿತ ಸಮಸ್ಯೆಗೆ ಸೂಕ್ತ ಪರಿಹಾರ.
ಉಡುಪಿ: ಶ್ರವಣದಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದರೆ ಉಡುಪಿಯ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ನಿಮ್ಮ ಅನುಮಾನವನ್ನು ಬಗೆಹರಿಸಿಕೊಂಡು ನಿಮ್ಮ ಜೀವನವನ್ನು ಮತ್ತು ಸಂಬಂಧಗಳನ್ನು ಬಲಪಡಿಸಿಕೊಳ್ಳಿ. ◾ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುತ್ತೀರಾ? ◾ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುತ್ತದೆಯೇ ? ◾ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿ ಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುತ್ತದೆಯೇ ? ◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ? ◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ […]
ಮಣಿಪಾಲ: ಸೆ.20 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಮೊಡವೆ ಚಿಕಿತ್ಸೆ” ಕಾರ್ಯಾಗಾರ
ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಮೊಡವೆ ಚಿಕಿತ್ಸೆ” ಕಾರ್ಯಾಗಾರ ಸೆ.20 ರಂದು ಮಧ್ಯಾಹ್ನ 2:30 ರಿಂದ 3:30 ರವರೆಗೆ ನಡೆಯಲಿದೆ. ಈ ಕಾರ್ಯಗಾರದಲ್ಲಿ ಹೈ ಫ್ರೀಕ್ವೆನ್ಸಿ ಯಂತ್ರವನ್ನು ಬಳಸಿಲಾಗುವುದು ಹಾಗೂ ನೋಡಿ ಕಲಿಯಬಹುದು. ಪ್ರಯೋಜನಗಳು:▪️ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ▪️ ಚರ್ಮದ ವಿನ್ಯಾಸವನ್ನು ಸುಧಾರಿಸುತ್ತದೆ.▪️ಅತಿಯಾದ ಮೇದೋಗ್ರಂಥಿಗಳ ಸ್ರಾವವನ್ನು ಒಣಗಿಸುತ್ತದೆ▪️ ಚರ್ಮದ ಮೇಲೆ ಬ್ಯಾಕ್ಟೀರಿಯಾ ಮತ್ತು ಕ್ರಿಮಿನಾಶಕ ಪರಿಣಾಮವನ್ನು ಉತ್ಪಾದಿಸುತ್ತದೆ ಆಸಕ್ತರು ಹಾಜರಾಗಬಹುದು ವಿಶೇಷವಾಗಿ ಸ್ಕಿನ್ ಥೆರಪಿಸ್ಟ್/ಬ್ಯೂಟಿಷಿಯನ್ಸ್ ಮತ್ತು ಸಲೂನ್ ಮಾಲೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಶುಲ್ಕ: ರೂ. […]