ನಾಗಮಂಗಲ ಗಲಭೆ ಸ್ಥಳಕ್ಕೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ನೇತೃತ್ವದ ತಂಡ ಭೇಟಿ, ಪರಿಶೀಲನೆ.
ನಾಗಮಂಗಲ: ಸಕಲೇಶಪುರ ಶಾಸಕರು ಮತ್ತು ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಸಿಮೆಂಟ್ ಮಂಜುರವರು, ರಾಜ್ಯ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ದಿನಕರ್ ಬಾಬುರವರು, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಕೌತಾಳ್ ರವರು ನಾಗಮಂಗಲದಲ್ಲಿ ಗಲಭೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಗಣೇಶೋತ್ಸವದ ಆಯೋಜಕರು ಮತ್ತು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಇಂದ್ರೇಶ್ ಕುಮಾರ್, ಪ್ರಶಾಂತ್ ಕಛೇರಿ ಕಾರ್ಯದರ್ಶಿ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಂಕರ್, ಪ್ರಧಾನ ಕಾರ್ಯದರ್ಶಿ ಧರಣೇಂದ್ರ, ಸೋಮಶೇಖರ್, […]
ಮಣಿಪಾಲ: ತನುಜಾ ಮಾಬೆನ್ ಅವರ “ಇಮೋಷನಲ್ ಎಕೋಸ್” ಕೃತಿಯ ವಿಮರ್ಶೆ- ಸಂವಾದ
ಉಡುಪಿ: ಆಪ್ತ ಸಮಾಲೋಚಕಿ ಮತ್ತು ಮಾನಸಿಕ ತಜ್ಞೆ ತನುಜಾ ಮಾಬೆನ್ ಅವರ “ಇಮೋಷನಲ್ ಎಕೋಸ್” ಕೃತಿಯ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ಇಂದು ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ನಡೆಯಿತು. ಲೇಖಕಿ ತನುಜಾ ಮಾಬೆನ್ ಮಾತನಾಡಿ ,ಈ ಕೃತಿಯಲ್ಲಿ ತಾನು ಭಾವನೆಗಳ ಸಂಘರ್ಷಕ್ಕೆ ಒಳಗಾದ ಕುರಿತು ,ಆ ಭಾವನೆಗಳಿಂದಲೇ ತಾನು ಇತರರನ್ನು ಕಂಡ ಬಗೆಯನ್ನು ವಿವರಿಸಿದರು. ಜೊತೆಗೆ ಒಬ್ಬ ಮಹಿಳೆಯಾಗಿ ಪತ್ನಿಯಾಗಿ ತಾಯಿಯಾಗಿ ಭಾವನೆಗಳ ವಿವಿಧ ಮಜಲುಗಳನ್ನು ದಾಟಿ ಬಂದ ಬಗೆ ಮತ್ತು ಆ ಅನುಭವಗಳಿಂದ […]
ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿ; ವ್ಯಕ್ತಿ ಸ್ಥಳದಲ್ಲೇ ಮೃತ್ಯು.
ಮಂಗಳೂರು: ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ತಡಂಬೈಲು ಸುಪ್ರೀಂ ಹಾಲ್ ಜಂಕ್ಷನ್ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬಸ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಉತ್ತರ ಕರ್ನಾಟಕ ಮೂಲದ ಭೀಮಪ್ಪ (40)ಎಂದು ಗುರುತಿಸಲಾಗಿದೆ. ಮೃತ ಭೀಮಪ್ಪ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಉಡುಪಿ ಕಡೆ ನಮ್ಮ ಮಂಗಳೂರು ಕಡೆಗೆ ಹೋಗುತ್ತಿದ್ದ ತಡೆರಹಿತ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಭೀಮಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರಿ ಪೊಲೀಸರು […]
ನಾಗಮಂಗಲ ಗಣಪತಿ ಸಂಘಟಕರ ಮೇಲೆ ಎಫ್ ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ
ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ನಾಗಮಂಗಲ ಗಣಪತಿ ಸಂಘಟಕರ ಮೇಲೆ ಎಫ್ ಐಆರ್ ದಾಖಲಿಸಿರುವುದು ಅತ್ಯಂತ ಖಂಡನೀಯ. ಹಿಂದೂ ಯುವಕರು ಹಿಂದೂ ವಿಚಾರದಲ್ಲಿ ಹೋರಾಟ, ಮೆರವಣಿಗೆ ಮಾಡಬಾರದೆಂದು ನೈತಿಕ ಸ್ಥೈರ್ಯ ಕುಗ್ಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ ಹೇಳಿದರು. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮ್ ಸಮುದಾಯದ ಸಂಪ್ರದಾಯದ ಬಗ್ಗೆ ಹೆಚ್ಚು ಒಳವು ಹೊಂದಿರುವ ಕಾಂಗ್ರೆಸ್ ಗೆ ಹಿಂದೂ ಸಂಪ್ರದಾಯದ ಬಗ್ಗೆ […]
ಉಡುಪಿ: ಟಿಕೆಟ್ ರಹಿತ ಪ್ರಯಾಣ- ಇಬ್ಬರು ಅಪ್ರಾಪ್ತರು ವಶಕ್ಕೆ
ಉಡುಪಿ : ರೈಲಿನಲ್ಲಿ ಟಿಕೆಟ್ ಇಲ್ಲದೆ, ದಿವ್ಯಾಂಗರಿಗೆ ಮೀಸಲಿಟ್ಟಿದ್ದ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಪ್ರಾಯದ ಬಾಲಕ- ಬಾಲಕಿಯನ್ನು ಕರ್ತವ್ಯ ನಿರ್ವಹಿಸುತ್ತಿದ್ದ ತಪಾಸಾಣಾಧಿಕಾರಿ ಕೆ. ವಾಸುದೇವ್ ಪೈ ವಶಕ್ಕೆ ಪಡೆದುಕೊಂಡಿರುವ ಘಟನೆಯು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ. ತಪಾಸಾಣಾಧಿಕಾರಿ ಅಪ್ರಾಪ್ತ ಮಕ್ಕಳನ್ನು ಕಾನೂನು ಪ್ರಕ್ರಿಯೆ ನಡೆಸಲು ರೈಲ್ವೆ ಆರ್.ಪಿ.ಎಫ್ ಸುಧೀರ್ ಶೆಟ್ಟಿಯವರ ಸಮ್ಮುಖ ಹಾಜರುಪಡಿಸಿದರು. ಇವರಿಬ್ಬರು ಸಹೋದರ ಸಹೋದರಿಯರಾಗಿದ್ದು, ದರ್ಶನ್ (15) ಧನಲಕ್ಷ್ಮೀ (12) ಎಂದು ತಿಳಿದುಬಂದಿದೆ. ಇವರು ಬೆಂಗಳೂರು ಬ್ಯಾಟರಾಯನಪುರದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ನಿವಾಸಿಗಳೆಂದು […]