ಉಡುಪಿ: ಸೆ.15ರಂದು ಕುಕ್ಕಿಕಟ್ಟೆಯಲ್ಲಿ ನೂತನ “ಬ್ರಹ್ಮಶ್ರೀ ನಾರಾಯಣಗುರು ಸಭಾಭವನ” ಉದ್ಘಾಟನೆ.

ಉಡುಪಿ: ಉಡುಪಿ ಕುಕ್ಕಿಕಟ್ಟೆ ಇಂದಿರಾ ನಗರದಲ್ಲಿ (ಬೈಲೂರು, ಕೊರಂಗ್ರಪಾಡಿ, ಅಲೆವೂರು, ಚಿಟ್ಟಾಡಿ, ಇಂದಿರಾ ನಗರ, ಮಾರ್ಪಳ್ಳಿ, ಕೆಮ್ತೂರು ಮತ್ತು ಮಂಚಿ ಗ್ರಾಮಗಳ ಬಿಲ್ಲವರ ಒಕ್ಕೂಟ) ನೂತನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಉದ್ಘಾಟನೆಯು ಸೆ.15 ರವಿವಾರ ನಡೆಯಲಿದೆ. ಸೆ.14 ಶನಿವಾರ ರಾತ್ರಿ ವಾಸ್ತುಪೂಜೆ, ಹೋಮ, ದಿಕ್ಪಾಲಕ ಬಲಿ ನಡೆಯಲಿದ್ದು, ಸೆ.15 ರವಿವಾರ ಬೆಳಿಗ್ಗೆ ಗಂಟೆ 8.00ರಿಂದ ಗಣಹೋಮ ಮತ್ತು “ಶ್ರೀ ಸತ್ಯನಾರಾಯಣ ಪೂಜೆ” ನಡೆಯಲಿದೆ. ಬೆಳಿಗ್ಗೆ ಗಂಟೆ 10.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ:ಅಧ್ಯಕ್ಷತೆಯನ್ನು ಶ್ರೀ ಗೋಪಾಲ ಪೂಜಾರಿ, ಮಂಚಿ, […]

ರಾಜ್ಯ ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ

ಉಡುಪಿ: ಸಿಎಂ ಸಿದ್ದರಾಮಯ್ಯ ಬರೇ ಮುಖವಾಡವಷ್ಟೇ , ಸರಕಾರವನ್ನು ಜಿಹಾದಿ, ಮತೀಯವಾದಿಗಳು ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ ವಾಗ್ದಾಳಿ ನಡೆಸಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲುತೂರಾಟ, ಪೆಟ್ರೋಲ್ ಬಾಂಬ್ ಎಸೆದು ಹಿಂದೂಗಳ ಅಂಗಡಿಗಳನ್ನು ಬಸ್ಮ ಮಾಡಲಾಗಿದೆ. ಗೃಹ ಸಚಿವರು ಈ ಘಟನೆಯನ್ನು ಅಕಸ್ಮಿಕ ಎಂದು ಹೇಳಿದ್ದಾರೆ. ಇದು ಅತ್ಯಂತ ಹೇಡಿತನ ಹಾಗೂ ನಾಚಿಕೆಗೇಡಿನ ಹೇಳಿಕೆ.‌ ಮೆರವಣಿಗೆಯ ವೇಲೆ ಒಬ್ಬನೇ ಪೊಲೀಸ್ […]

ಉಡುಪಿ: ಪ್ರಧಾನಿ ಹುಟ್ಟುಹಬ್ಬಕ್ಕೆ ಪೂರ್ವಭಾವಿಯಾಗಿ ಕಡಿಯಾಳಿ ಮಹಿಷಮರ್ದಿನಿ ದೇವಿಗೆ ಬಳೆ ಸಮರ್ಪಣೆ

ಉಡುಪಿ: ಸೆಪ್ಟೆಂಬರ್ 17ಕ್ಕೆ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಕಡಿಯಾಳಿ ಮಹಿಷಮರ್ದಿನಿ ದೇವರಿಗೆ ಪ್ರಿಯವಾದ ಬಳೆಯನ್ನು ಸಮರ್ಪಿಸಲಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯಕ್ಕಾಗಿ ಮತ್ತು ದೇಶದ ಸುಭಿಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಿ ಒಂದು ಬುಟ್ಟಿ ಬಳೆಯನ್ನು ಕಡಿಯಾಳಿ ಮಹಿಷಮರ್ದಿನಿ ದೇವರಿಗೆ ಅರ್ಪಿಸಲಾಯಿತು. ಪೂಜೆಯ ಬಳಿಕ ಬಳೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ಬಿಜೆಪಿ ರಾಜ್ಯ […]

ಹೆಬ್ರಿ: ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟ ಉದ್ಘಾಟನೆ

ಹೆಬ್ರಿ: ನಿಟ್ಟೆ ವಿಶ್ವವಿದ್ಯಾನಿಲಯದ ನಿವೃತ್ತ ದೈಹಿಕ ನಿರ್ದೇಶಕರು ರಾಜಾರಾಮ್ ಶೆಟ್ಟಿ, ಇವರು ಎಸ್.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹೆಬ್ರಿ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹೆಚ್ ನಾಗರಾಜ ಶೆಟ್ಟಿ, ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರಾದ ಸಪ್ನಾ ಎನ್ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.